ನವದೆಹಲಿ: ಕಾಂಗ್ರೆಸ್ ವಿರುದ್ಧ ಗುಡುಗಿದ್ದ ಪ್ರಧಾನಿ ಮೋದಿಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್ ಗಳ ಸುರಿಮಳೆಯಲ್ಲಿ ತಿರುಗೇಟು ನೀಡಿದ್ದಾರೆ.
ಚತ್ತೀಸ್‍ಗಢದಲ್ಲಿ ಶುಕ್ರವಾರದಂದು ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‍ನಲ್ಲಿ ನೆಹರು-ಗಾಂಧಿ ಕುಟುಂಬದವರನ್ನ ಹೊರತುಪಡಿಸಿ ಹೊರಗಿನವರನ್ನ ಐದು ವರ್ಷಗಳ ಕಾಲ ಅಧ್ಯಕ್ಷರನ್ನಾಗಿ ಮಾಡಿ ಎಂದು ಸವಾಲನ್ನ ಹಾಕಿದ್ದರು.
Advertisement
ಇದಕ್ಕೆ ಪ್ರತಿಕ್ರಿಯಿಸಿದ ಪಿ. ಚಿದಂಬರಂ, ನೆಹರು-ಗಾಂಧಿ ಕುಟುಂಬದಲ್ಲದವರ ಹೆಸರುಗಳ ಪಟ್ಟಿಯನ್ನ ಬಿಡುಗಡೆ ಮಾಡುವ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ.
Advertisement
To jog PM Modi’s memory: among the Congress Presidents since 1947 were Acharya Kripalani,Pattabhi Sitaramayya,Purushottamdas Tandon,U N Dhebar,Sanjiva Reddy,Sanjivaiah,
— P. Chidambaram (@PChidambaram_IN) November 17, 2018
Advertisement
ಸರಣಿ ಟ್ವೀಟ್‍ಗಳನ್ನ ಮಾಡಿರುವ ಚಿದಂಬರಂ ಅವರು, ಮೋದಿಯವರು ನಮ್ಮ ಕಾಂಗ್ರೆಸ್ ಅಧ್ಯಕ್ಷರ ಬಗ್ಗೆ ಹೆಚ್ಚು ಆಸಕ್ತಿಯನ್ನ ಹೊಂದಿದ್ದು, ಅದಕ್ಕಾಗಿ ಅವರು ಬಹಳ ಸಮಯವನ್ನ ತೆಗೆದುಕೊಂಡಿದ್ದಾರೆ. ಇದಕ್ಕೆ ಅವರಿಗೆ ಧನ್ಯವಾದಗಳು. ಮೋದಿಯವರು ನೋಟು ಅಮಾನ್ಯೀಕರಣ, ಜಿಎಸ್‍ಟಿ, ರಫೇಲ್, ಸಿಬಿಐ ಮತ್ತು ಆರ್‍ಬಿಯ ವಿಷಯಗಳಿಗೆ ಅರ್ಧದಷ್ಟು ಸಮಯವನ್ನಾದರು ಕೊಟ್ಟಿದ್ದರೆ ಇಂದು ಯಾವುದೇ ಸಮಸ್ಯೆಯನ್ನ ಎದುರಿಸಬೇಕಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಕುಟುಕಿದ್ದಾರೆ.
Advertisement
ಕಾಂಗ್ರೆಸ್‍ನ ಸ್ವಾತಂತ್ರ್ಯ ನಂತರದಲ್ಲಿದ್ದ ಹೆಮ್ಮೆಯ ನಾಯಕರ ಹೆಸರುಗಳ ಪಟ್ಟಿ ಮಾಡಿದ ಚಿದಂಬರಂ ಅವರು, ಆಚಾರ್ಯ ಕೃಪಲಾನಿ, ಪಟ್ಟಾಭಿ ಸೀತಾರಾಮಯ್ಯ, ಪುರುಶೋತ್ತಮದಾಸ್ ಟಂಡನ್, ಯು.ಎನ್. ದೇಬರ್, ಸಂಜೀವ್ ರೆಡ್ಡಿ, ಸಂಜೀವಯ್ಯ, ಕಾಮರಾಜ್ ನಿಜಲಿಂಗಪ್ಪ, ಸಿ. ಸುಬ್ರಮಣಿಯನ್ ಮತ್ತು ಜಗಜೀವನ್ ರಾಮ್, ಶಂಕರ್ ದಯಾಳ್ ಶರ್ಮಾ, ಡಿ.ಕೆ. ಬರೂಹ್, ಬ್ರಹ್ಮಾನಂದ ರೆಡ್ಡಿ, ಪಿ.ವಿ. ನರಸಿಂಹರಾವ್ ಮತ್ತು ಸೀತಾರಾಮ್ ಕೇಸರಿ ಅವರ ಹೆಸರುಗಳನ್ನ ಟ್ವೀಟ್ ಮಾಡಿದ್ದಾರೆ.
Kamaraj,Nijalingappa,C Subramanian,Jagjivan Ram,Shankar Dayal Sharma,D K Barooah,Brahmananda Reddy,P V Narasimha Rao and Sitaram Kesri
— P. Chidambaram (@PChidambaram_IN) November 17, 2018
ಪ್ರಧಾನಿ ಮೋದಿಯವರು ರೈತರ ಆತ್ಮಹತ್ಯೆ, ನಿರುದ್ಯೋಗ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅತ್ಯಾಚಾರ ಪ್ರಕರಣ, ನೈತಿಕ ಪೊಲೀಸ್ ಗಿರಿ, ಗೋ ರಕ್ಷಕರ ಜಾಗರೂಕತೆ ಮತ್ತು ಹೆಚ್ಚಾಗುತ್ತಿರುವ ಭಯೋತ್ಪಾದನೆ ಕುರಿತಾಗಿಯೂ ಮಾತನಾಡಬಲ್ಲರೇ ಎಂದು ಪ್ರಶ್ನಿಸಿದ್ದಾರೆ.
ಉತ್ತರ ಭಾಗದ ಚತ್ತೀಸ್‍ಗಢದ ಅಂಬಿಕಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಅವರನ್ನ ನಾಲ್ಕು ಶತಮಾನಗಳಲ್ಲಿ ನೆಹರೂ-ಗಾಂಧಿ ಕುಟುಂಬವನ್ನು ಹೊರತುಪಡಿಸಿ ಬೇರೊಬ್ಬರಿಗೆ ಸ್ಥಾನ ನೀಡಬಲ್ಲರೇ ಎಂದು ಪ್ರಶ್ನಿಸಿದ್ದರು. ಇದು ಎಷ್ಟರ ಮಟ್ಟಿಗೆ ಸರಿ, ಮೊದಲು ನಿಮ್ಮ ಅಧಿಕಾರದಲ್ಲಿ ಎದುರಾಗಿರುವ ಪ್ರಶ್ನೆಗಳಿಗೆ ಉತ್ತರಿಸಿರಿ ಎಂದು ಸವಾಲು ಹಾಕಿದ್ದಾರೆ.
Will PM Modi speak about farmers’ suicides, massive unemployment, lynchings, rape crimes against women and children, anti-Romeo squads, gau rakshak vigilantism and increasing terror attacks?
— P. Chidambaram (@PChidambaram_IN) November 17, 2018
We are proud of the humble origins of our post-Independence leaders like Babasaheb Ambedkar, Lal Bahadur Shastri, Kamaraj, Dr Manmohan Singh and many others. Pre-Independence, there were thousands like them.
— P. Chidambaram (@PChidambaram_IN) November 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews