ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮಹಾರಾಷ್ಟ್ರ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement
ಚಿದಂಬರಂ ತವರು ರಾಜ್ಯವಾದ ತಮಿಳುನಾಡಿನಿಂದ ಮೇಲ್ಮನೆಗೆ ಹೊಸ ಅವಧಿಗೆ ಆಯ್ಕೆಯಾದ ನಂತರ ಮಹಾರಾಷ್ಟ್ರದಿಂದ ಆಯ್ಕೆಯಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಕೆಲದಿನಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಚಿದಂಬರಂ ತಮಿಳುನಾಡಿನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಪ್ರತಿಭಟನೆ ವೇಳೆ ತಳ್ಳಿದ ಪೊಲೀಸರು – ಮೂಳೆ ಮುರಿತಕ್ಕೊಳಗಾದ ಪಿ.ಚಿದಂಬರಂ
Advertisement
Following my election to the Rajya Sabha from the state of Tamil Nadu, I am required to resign my seat from the state of Maharashtra.
Accordingly, today I tendered my resignation from the seat from the state of Maharashtra.
— P. Chidambaram (@PChidambaram_IN) June 16, 2022
Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮಿಳುನಾಡಿನಿಂದ ರಾಜ್ಯಸಭೆಗೆ ನಾನು ಆಯ್ಕೆಯಾದ ಬಳಿಕ ಇದೀಗ ಮಹಾರಾಷ್ಟ್ರದಿಂದ ಆಯ್ಕೆಯಾಗಿದ್ದ ನನ್ನ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. ಹಾಗಾಗಿ ಇಂದು ನಾನು ಮಹಾರಾಷ್ಟ್ರದ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷರು ನನ್ನ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿದ್ದು ನನ್ನ ಭಾಗ್ಯ. ಮಹಾರಾಷ್ಟ್ರದ ಜನ ಶಾಂತಿ ಮತ್ತು ಸಮೃದ್ಧಿಯನ್ನು ಹೊಂದಲಿ ಎಂದು ಬಯಸುತ್ತೇನೆ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ ಕಿಚ್ಚು – 22 ರೈಲುಗಳ ಸಂಚಾರ ರದ್ದು