ಬೆಂಗಳೂರು: ಓಯೋ ಹೋಟೆಲ್ ಬುಕ್ಕಿಂಗ್ (OYO Hotel Booking) ಕಂಪನಿ ಚೆಕ್ ಇನ್‌ಗೆ ಸಂಬಂಧಿಸಿದಂತೆ ಅವಿವಾಹಿತರಿಗೆ ಹೋಟೆಲ್ ರೂಮ್ ನೀಡದಂತೆ ಹೊಸ ನಿಯಮ ಜಾರಿಗೊಳಿಸಿದೆ. ಈ ರೀತಿಯ ನಿಯಮವನ್ನ ಬೆಂಗಳೂರಿನಲ್ಲೂ ಜಾರಿಗೆ ತರುವಂತೆ ಬಜರಂಗದಳ (Bajrang Dal) ಮನವಿ ಮಾಡಿದೆ.
Advertisement
ಬಿಬಿಎಂಪಿ ಆಯುಕ್ತರು (BBMP Commissioner), ನಗರ ಪೊಲೀಸ್ ಆಯುಕ್ತರಿಗೆ ಬಜರಂಗದಳದ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಹೋಂ ಸ್ಟೇ, ಲಾಡ್ಜ್, ಸರ್ವೀಸ್ ಅಪಾರ್ಟ್‌ಮೆಂಟ್‌ಗಳು ಹಾಗೂ ಯಾವುದೇ ಹೋಟೆಲ್‌ಗಳಲ್ಲಿ ಅವಿವಾಹಿತರಿಗೆ ಅವಕಾಶ ನೀಡಬಾರದು. ಏಕೆಂದರೆ ಕೆಲವರು ಎಲ್ಲೆ ಮೀರಿ ವರ್ತಿಸುವ ಸಾಧ್ಯತೆಗಳಿವೆ. ಜೊತೆಗೆ ಆ ಸ್ಥಳಗಳು ಅನೈತಿಕ ಚಟುವಟಿಕೆಯ ತಾಣವಾಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಈ ಮನವಿಯನ್ನು ಗಂಭಿರವಾಗಿ ಪರಿಗಣಿಸುವಂತೆ ಬಜರಂಗದಳ ಮನವಿ ಮಾಡಿದೆ.
Advertisement
ಓಯೋ ಹೊಸ ನಿಯಮ ಏನು?
ದೇಶದ ಪ್ರಮುಖ ಲಾಡ್ಜ್ ಬುಕ್ಕಿಂಗ್ ಕಂಪನಿಗಳಲ್ಲಿ ಓಯೋ ಕೂಡ ಒಂದಾಗಿದೆ. ದೇಶದ ಎಲ್ಲಾ ನಗರಗಳಲ್ಲಿಯೂ ತನ್ನ ಹೋಟಲ್ ಬುಕ್ಕಿಂಗ್ ಜಾಲವನ್ನು ವಿಸ್ತರಣೆ ಮಾಡಿಕೊಂಡಿದೆ. ಕಡಿಮೆ ದರ, ಗುಣಮಟ್ಟದ ಸೇವೆ, ದೊಡ್ಡ ಜಾಲದಿಂದ ಈ ಓಯೋ ಹೋಟೆಲ್‌ಗಳಿಗೂ ಹೆಸರುವಾಸಿಯಾಗಿವೆ. ಅದರಲ್ಲೂ ಅವಿವಾಹಿತರಿಗೆ ಹೋಟೆಲ್ ಚೆಕ್ ಇನ್‌ಗೆ ಅವಕಾಶ ನೀಡುವ ಕಾರಣಕ್ಕೆ ಈ ಹೋಟೆಲ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿತ್ತು. ಇದೀಗ ಅವಿವಾಹಿತರಿಗೆ ನಿರ್ಬಂಧ ವಿಧಿಸಿ ಹೊಸ ನಿಯಮ ಜಾರಿಗೊಳಿಸಿದೆ.
Advertisement
Advertisement
ಮೀರತ್‌ನಲ್ಲಿ ಜಾರಿ:
ಓಯೋನ ಈ ಹೊಸ ನಿಯಮವು ಉತ್ತರ ಪ್ರದೇಶದ ಮೀರತ್‌ನಲ್ಲಿ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ನಗರಗಳಲ್ಲಿಯೂ ಜಾರಿಗೆ ತರುವುದಾಗಿ ಸಂಸ್ಥೆ ಹೇಳಿದೆ. ಹಲವು ನಗರಗಳಲ್ಲಿ ಅವಿವಾಹಿತರಿಗೆ ಚೆಕ್ ಇನ್ ಮಾಡಲು ಅವಕಾಶ ನೀಡದಂತೆ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆಯಾಗಿತ್ತು. ಇದರಿಂದಾಗಿ ಓಯೋ ಈ ನಿಮಯ ಜಾರಿಗೊಳಿಸಿದೆ. ಇದನ್ನೂ ಓದಿ: ಗಡ್ಕರಿ ಭೇಟಿಯಾದ ಹೆಚ್‌ಡಿಕೆ – ಮಂಡ್ಯ ಹೊರವರ್ತುಲ ರಸ್ತೆ ಯೋಜನೆ, ಬೈಪಾಸ್ ಅಭಿವೃದ್ಧಿಗೆ ಮನವಿ
ದಾಖಲೆ ಕಡ್ಡಾಯ:
ಹೊಸ ನಿಯಮದ ಪ್ರಕಾರ, ಹೊಟೇಲ್‌ಗೆ ಬರುವ ಜೋಡಿಗಳು ಕಡ್ಡಾಯವಾಗಿ ತಮ್ಮ ಸಂಬಂಧದ ದಾಖಲೆ ತರುವುದು ಕಡ್ಡಾಯವಾಗಿದೆ. ಆನ್‌ಲೈನ್ ಬುಕ್ಕಿಂಗ್‌ಗೂ ಕೂಡ ಇದು ಕಡ್ಡಾಯವಾಗಿದೆ.
ಒಟ್ಟಾರೆ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಓಯೋ ಉತ್ತರ ಭಾರತ ಪ್ರಾದೇಶಿಕ ಮುಖ್ಯಸ್ಥ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದ ನಟಿಗೆ ಬಿಗ್ ಚಾನ್ಸ್- ತೆಲುಗಿನತ್ತ ಶರಣ್ಯ ಶೆಟ್ಟಿ