ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವಾಯುಮಾಲಿನ್ಯ ಏರಿಕೆ ಕಂಡ ಬೆನ್ನಲ್ಲೇ ದೆಹಲಿ ಸರ್ಕಾರ ಹಳೆಯ ಬಿಎಸ್6 (BS6) ಡೀಸೆಲ್ ಕಾರ್‌ಗಳ (Diesel Car) ಸಂಚಾರವನ್ನು ನಿಷೇಧಿಸಿದೆ.
Advertisement
ದೆಹಲಿ ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದ ಅನ್ವಯ ಹಳೆಯ ಬಿಎಸ್6 ಡೀಸೆಲ್ ವಾಹನಗಳು ರಾಷ್ಟ್ರರಾಜಧಾನಿಯಲ್ಲಿ ಓಡಾಡುವಂತಿಲ್ಲ. ಕೇವಲ ತುರ್ತು ಸಂದರ್ಭಗಳಲ್ಲಿ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ 20,000 ರೂ. ವರೆಗೂ ಫೈನ್ (Fine) ಹಾಕಲು ದೆಹಲಿ ಸಾರಿಗೆ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಸೈರಸ್ ಮಿಸ್ತ್ರಿ ಕಾರು ಅಪಘಾತ – ಜೊತೆಗೆ ಸಂಚರಿಸುತ್ತಿದ್ದ ಡಾ.ಅನಾಹಿತಾ ಪಾಂಡೋಲೆ ವಿರುದ್ಧ ಕೇಸ್ ದಾಖಲು
Advertisement
Advertisement
ರಾಷ್ಟ್ರರಾಜಧಾನಿಯಲ್ಲಿ ಈಗಾಗಲೇ ಡೀಸೆಲ್ ಲಘು-ಮಧ್ಯಮ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಈಗಾಗಲೇ ಹಳೆಯ ಡೀಸೆಲ್ ಕಾರ್‌ಗಳ ಮಾಲಿಕರಿಗೆ ಸಾರಿಗೆ ಇಲಾಖೆ ರಸ್ತೆಗಿಳಿಸದಂತೆ ಸಂದೇಶ ರವಾನಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಂ – ಖಾಸಗಿ ಕಂಪನಿಗಳು ಅಳವಡಿಸಿ: ಗೋಪಾಲ್ ರೈ
Advertisement
ದೆಹಲಿಯಲ್ಲಿ ವಾಯುಮಾಲಿನ್ಯ ಹತೋಟಿಗೆ ಬಾರದ ಹಿನ್ನೆಲೆ ಆಡ್, ಇವನ್ (ಸಮ ಮತ್ತು ಬೆಸ ಸಂಖ್ಯೆ ವಾಹನಗಳ ಓಡಾಟ) ಮತ್ತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.