LatestMain PostNational

ದೆಹಲಿಯಲ್ಲಿ ಸರ್ಕಾರಿ ನೌಕರರಿಗೆ ವರ್ಕ್ ಫ್ರಮ್ ಹೋಂ – ಖಾಸಗಿ ಕಂಪನಿಗಳು ಅಳವಡಿಸಿ: ಗೋಪಾಲ್ ರೈ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ದಿನದಿಂದ ದಿನಕ್ಕೆ ವಾಯುಮಾಲಿನ್ಯ ಮಿತಿ ಮೀರುತ್ತಿದೆ. ಹಾಗಾಗಿ ಸರ್ಕಾರಿ ಕಚೇರಿಯಲ್ಲಿ 50% ನೌಕರರು ಮಾತ್ರ ಕೆಲಸ ನಿರ್ವಹಿಸಿ, ಉಳಿದ 50% ನೌಕರರು ವರ್ಕ್ ಫ್ರಮ್ ಹೋಂ (Work From Home) ಮಾಡುವಂತೆ ದೆಹಲಿ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಸರ್ಕಾರಿ ನೌಕರರು 50% ರಷ್ಟು ಕಚೇರಿಗೆ ಆಗಮಿಸಿ ಉಳಿದ 50% ನೌಕರರು ಮನೆಯಿಂದ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಈ ನಿಯಮವನ್ನು ಖಾಸಗಿ ಕಂಪನಿಗಳು ಕೂಡ ಅಳವಡಿಕೆ ಮಾಡಿಕೊಂಡಲ್ಲಿ ಸಹಕಾರವಾಗಲಿದೆ ಎಂದು ಸಲಹೆ ನೀಡಿದ್ದಾರೆ. ಇದರೊಂದಿಗೆ ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳು ಮತ್ತು ಡೀಸೆಲ್, ಲಘು-ಮಧ್ಯಮ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮಿತಿ ಮೀರುತ್ತಿರುವ ವಾಯು ಮಾಲಿನ್ಯ- ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಮಸ್ಯೆ

ನಿರ್ಬಂಧ:
ಕಟ್ಟಡ ನಿರ್ಮಾಣಗಳು, ಥರ್ಮಲ್ ಪ್ಲಾಂಟ್‍ಗಳನ್ನು ಮುಚ್ಚಲಾಗಿದೆ. ಡೀಸೆಲ್ ಲಘು-ಮಧ್ಯಮ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಸರ್ಕಾರಿ ನೌಕರರಿಗೆ 50% ವರ್ಕ್ ಫ್ರಮ್ ಹೋಂ. ಖಾಸಗಿ ಸಂಸ್ಥೆಗಳಿಗೂ ವರ್ಕ್ ಫ್ರಮ್ ಹೋಂಗೆ ಸಲಹೆ. ಶಾಲೆಗಳನ್ನು ಮುಚ್ಚಲಾಗಿದೆ. ಹೊರಾಂಗಣ, ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹೊರಾಂಗಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವೃದ್ಧರ ಆರೋಗ್ಯದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸುತ್ತಿದೆ. ದೆಹಲಿಯಲ್ಲಿ ಆಡ್‌, ಇವನ್‌ (ಸಮ ಮತ್ತು ಬೆಸ ಸಂಖ್ಯೆ ವಾಹನಗಳ ಓಡಾಟ) ಮತ್ತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದ್ದು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನೂ ಓದಿ: ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ ಪ್ರಮಾಣ – ಸಮ, ಬೆಸ ವ್ಯವಸ್ಥೆ ಜಾರಿಗೆ ಚಿಂತನೆ

ಆಡ್‌, ಇವನ್‌ ಎಂದರೇನು?
ಸಮ ಮತ್ತು ಬೆಸ ಸಂಖ್ಯೆ ವಾಹನಗಳ ಓಡಾಟ ಅಂದರೆ ಒಂದು ದಿನ 1, 3, 5, 7, 9ರಲ್ಲಿ ಕೊನೆಯಾಗುವ ನಂಬರ್‌, ಇನ್ನೊಂದು ದಿನ 2, 4, 6, 8ರಲ್ಲಿ ಕೊನೆಯಾಗುವ ನಂಬರ್‌ಗಳ ವಾಹನಗಳು ರಸ್ತೆಗೆ ಇಳಿಯಲು ಅನುಮತಿ ನೀಡುವ ವ್ಯವಸ್ಥೆ.

Live Tv

Leave a Reply

Your email address will not be published. Required fields are marked *

Back to top button