ನವದೆಹಲಿ: ಅಸಾದುದ್ದೀನ್ ಓವೈಸಿ ಅವರು ಜಿನ್ನಾ ಆಗೋ ಕನಸು ಕಾಣುತ್ತಿದ್ದಾರೆ. ದೇಶದ್ರೋಹ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಎಂದು ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಒತ್ತಾಯಿಸಿದ್ದಾರೆ.
ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೇ ಕುರಿತ ಗದ್ದಲದ ಬಗ್ಗೆ ಮಾತನಾಡುವಾಗ ಓವೈಸಿ, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) 1990 ರ ದಶಕದ ದ್ವೇಷದ ಯುಗವನ್ನು ಮರು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದ್ದರು. ಹೀಗಾಗಿ ಓವೈಸಿ ವಿರುದ್ಧ ಯಾದವ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್ ಹಿಂದೆ ʼತೇಜೋ ಮಹಾಲಯʼವಾಗಿತ್ತು, ಅಲ್ಲಿ ಹಿಂದೂ ವಿಗ್ರಹಗಳಿವೆ – ತನಿಖೆಗಾಗಿ ಕೋರ್ಟ್‌ಗೆ ಮನವಿ
Advertisement
Advertisement
ಓವೈಸಿ ಅವರ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ದೇಶದಲ್ಲಿ ಹಿಂದೂ-ಮುಸ್ಲಿಮರ ನಡುವೆ ಬಿರುಕು ಮೂಡಿಸಲು ಓವೈಸಿ ಬಯಸಿದ್ದಾರೆ. ಜಿನ್ನಾ ಆಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ಕೂಡಲೇ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದ್ದಾರೆ.
Advertisement
ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ, ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಲು ಮುಕ್ತ ಅವಕಾಶವಿದೆ. ಲೋವರ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ರಾಜಕೀಯ ಕಾರಣಕ್ಕೆ ಅಯೋಧ್ಯೆಗೆ ಬರುವವರನ್ನು ರಾಮ ಆಶೀರ್ವದಿಸುವುದಿಲ್ಲ: ರಾವತ್
Advertisement
ಜ್ಞಾನವಾಪಿ ಮಸೀದಿಯ ಸಮೀಕ್ಷೆ ವಿಚಾರದಲ್ಲಿ ಭಯ ಏಕೆ? ಸಮೀಕ್ಷೆಯಿಂದ ಸತ್ಯ ಹೊರಬರುತ್ತದೆ ಎಂಬ ಭಯಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆಯ? ರಾಮಜನ್ಮಭೂಮಿ ತೀರ್ಪು ಬಂದಾಗ ಮುಸ್ಲಿಂ ಬಾಂಧವರು ಯಾವ ರೀತಿಯಲ್ಲಿ ದೇಶದೊಳಗೆ ಕೋಮು ಸೌಹಾರ್ದತೆ ಮೂಡಿಸಿ ಅದನ್ನು ಒಪ್ಪಿಕೊಂಡರೊ, ಅದೇ ರೀತಿ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಸಮೀಕ್ಷೆಗೆ ಅವಕಾಶ ನೀಡಬೇಕು ಎಂದು ಯಾದವ್ ತಿಳಿಸಿದ್ದಾರೆ.