Connect with us

Latest

50 ವರ್ಷ ಒಟ್ಟಿಗೆ ಬಾಳಿದ 80ರ ದಂಪತಿಯಿಂದ ವಿಚ್ಛೇದನಕ್ಕೆ ಅರ್ಜಿ!

Published

on

ಲೂಧಿಯಾನ: ಸುದೀರ್ಘ 50 ವರ್ಷಗಳ ಕಾಲ ಒಟ್ಟಿಗೆ ಬಾಳಿ ಬದುಕಿದ 80ರ ವಯಸ್ಸಿನ ದಂಪತಿ ಪರಸ್ಪರ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅಚ್ಚರಿಯ ಪ್ರಕರಣ ಚತ್ತೀಸ್‍ಗಢದಿಂದ ವರದಿಯಾಗಿದೆ.

ಹೌದು, ಇಂತಹ ಅಪರೂಪದ ಘಟನೆ ನಡೆದಿರುವುದು ಚತ್ತೀಸ್‍ಗಢದ ಲೂಧಿಯಾನ ರಾಷ್ಟ್ರೀಯ ಲೋಕ್ ಅದಾಲತ್ ಜಿಲ್ಲಾ ನ್ಯಾಯಾಲಯದಲ್ಲಿ. ಶನಿವಾರ ದಂಪತಿಯ ವಿಚ್ಛೇದನ ಅರ್ಜಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ನ್ಯಾಯಮೂರ್ತಿಗಳು ಕೂಡ ದಂಪತಿಯ ಅರ್ಜಿ ವಾಪಸ್ ಪಡೆಯುವಂತೆ ಮನವೊಲಿಸಲು ಮುಂದಾಗಿ ವಿಫಲರಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಸದ್ಯ 85 ವರ್ಷ ವಯಸ್ಸಿನ ಪತಿ ವ್ರದ್ಧಾಶ್ರಮವೊಂದರಲ್ಲಿ ವಾಸಿಸುತ್ತಿದ್ದು, 83 ವರ್ಷದ ಪತ್ನಿ ಪ್ರತ್ಯೇಕ ಕೋಣೆಯೊಂದರಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರೂ ಉತ್ತಮ ಜೀವನ ನಡೆಸುತ್ತಿದ್ದಾರೆ. ಸದ್ಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದು, ಮುಂದಿನ ವಿಚಾರಣೆಗೆ ಹಾಜರಾಗುವಂತೆ ದಂಪತಿಯ ಮೂರು ಮಕ್ಕಳಿಗೆ ನೋಟಿಸ್ ನೀಡಿ ಹಾಜರಾಗುವಂತೆ ಸೂಚಿಸಿದೆ.

ಜೀವನದ ವೃದ್ದಾಪ್ಯದಲ್ಲಿರುವ ದಂಪತಿಗಳು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ಕಂಡು ಅಚ್ಚರಿಗೊಂಡೆ. ಈ ವೇಳೆಯೇ ಜೀವನದಲ್ಲಿ ಅವರು ಒಬ್ಬರಿಗೆ ಒಬ್ಬರು ಆಸರೆಯಾಗಬೇಕು. ಈ ಪ್ರಕರಣದಲ್ಲಿ ವಿಚ್ಛೇದನ ಪಡೆಯಲು ಬಲವಾದ ಒಂದು ಕಾರಣದ ಅಗತ್ಯವಿದ್ದು. ಇತರರಿಗೆ ಇದು ಉದಾಹರಣೆಯಾಗಬಾರದು ಎಂದು ಸಿಜೆಎಂ ಮುಖ್ಯ ನ್ಯಾಯಾಧೀಶ ಗುಪ್ರ್ರೀತ್ ಕೌರ್ ಹೇಳಿದ್ದಾರೆ.

ದಂಪತಿ ವಿಚ್ಛೇದನ ಪಡೆಯಲು ಈ ಹಿಂದೆಯೂ ಚಿಂತನೆ ನಡೆಸಿದ್ದರೂ ಕೂಡ ಕುಟುಂಬದ ಒಳತಿಗಾಗಿ ಅಂದು ಅದನ್ನು ಮುಂದೂಡಿದ್ದರು. ಆದರೆ ಸದ್ಯ ಅದು ಅಗತ್ಯವಿಲ್ಲ. ಅದ್ದರಿಂದ ಅವರಲ್ಲಿ ಈ ಕುರಿತು ಜಾಗೃತಿ ಮೂಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಎಂದು ನ್ಯಾಯಾಮೂರ್ತಿಗಳು ವಿಚಾರಣೆಯ ವೇಳೆ ಹೇಳಿದ್ದಾಗಿ ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿಂದೆ ಜುಲೈ ತಿಂಗಳಲ್ಲಿ ನಡೆದ ಲೋಕ ಅದಾಲತ್ ವೇಳೆಯೂ 75 ವರ್ಷದ ಪತಿ, ಪತ್ನಿಯಿಂದ ವಿಚ್ಛೇದನ ಕೋರಿ ವಿಚ್ಛೇದನ ಅರ್ಜಿ ಸಲ್ಲಿಸಿದನ್ನು ನೆನೆಪಿಸಬಹುದಾಗಿದೆ. ಆದರೆ ನ್ಯಾಯಾಲಯದ ವಿಚಾರಣೆ ಬಳಿಕ ದಂಪತಿ ತಮ್ಮ ನಿರ್ಧಾರದಿಂದ ಹಿಂದೆ ಸರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *

www.publictv.in