ಕ್ಷಿಪಣಿ ದಾಳಿ, ಪ್ರತಿದಾಳಿ – ಇರಾನ್‌, ಇಸ್ರೇಲ್‌ನಲ್ಲಿ 80 ಮಂದಿ ಸಾವು

Public TV
2 Min Read
Missiles launched from Iran towards Israel

ಟೆಲ್‌ ಅವೀವ್: ಇಸ್ರೇಲ್‌ ಮತ್ತು ಇರಾನ್‌ (Israel Iran War) ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದೆ. ದಾಳಿ ಪರಿಣಾಮ ಈವರೆಗೆ ಎರಡೂ ದೇಶಗಳಲ್ಲಿ 80 ಜನ ಮೃತಪಟ್ಟಿದ್ದು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆಯೇ ಉಭಯ ದೇಶಗಳು ಒಬ್ಬರ ಮೇಲೊಬ್ಬರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಇಸ್ರೇಲಿ ರಕ್ಷಣಾ ಪಡೆಗಳು ಇರಾನಿನ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮತ್ತು ಪರಮಾಣು ಸಿಸ್ಟಮ್‌ ಮೇಲೆ ಸರಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿವೆ. ಇದನ್ನೂ ಓದಿ: Israel vs Iran War: ಹೊತ್ತಿ ಉರಿದ ಟೆಹ್ರಾನ್‌- ತೈಲ ಡಿಪೋ ಮೇಲೆ ಇಸ್ರೇಲ್‌ ದಾಳಿ

Iran Israel

ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಾಗಾರವನ್ನು ಇಸ್ರೇಲ್‌ ಟಾರ್ಗೆಟ್‌ ಮಾಡಿದೆ ಎಂದು ಇರಾನ್ ಹೇಳಿದೆ. ಇಸ್ರೇಲಿ ಮಿಲಿಟರಿ ಟೆಹ್ರಾನ್ ಬಳಿಯ ತೈಲ ಸಂಸ್ಕರಣಾಗಾರದ ಮೇಲೂ ದಾಳಿ ಮಾಡಿತು. ಶನಿವಾರ ಇಸ್ರೇಲಿ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ನಂತರ, ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವಾದ ಸೌತ್ ಪಾರ್ಸ್ ಕ್ಷೇತ್ರದಲ್ಲಿ ಇರಾನ್ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಿದೆ.

ಇಸ್ರೇಲಿ ನಗರಗಳ ಮೇಲೆ ಇರಾನ್ ಕೂಡ ದಾಳಿಗಳನ್ನು ನಡೆಸಿದೆ. ಜೆರುಸಲೆಮ್ ಮತ್ತು ಟೆಲ್ ಅವೀವ್‌ನಾದ್ಯಂತ ವಾಯುದಾಳಿ ಸೈರನ್‌ಗಳು ಮೊಳಗಿದವು. 10 ವರ್ಷದ ಬಾಲಕ ಮತ್ತು 20 ವರ್ಷದ ಮಹಿಳೆ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ಇರಾನ್ ತನ್ನ ಪ್ರತಿಕಾರದ ದಾಳಿಯನ್ನು ಪ್ರಾರಂಭಿಸಿದ ನಂತರ ಇಸ್ರೇಲ್‌ನಲ್ಲಿ ಇದುವರೆಗೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಇರಾನ್‌ ಮೇಲೆ ಯಾವುದೇ ಕ್ಷಣದಲ್ಲೂ ದಾಳಿ – ದೊಡ್ಡ ಎಚ್ಚರಿಕೆ ಕೊಟ್ಟ ಇಸ್ರೇಲ್‌

ಇರಾನ್‌ನ ಕ್ಷಿಪಣಿ ಮತ್ತು ಡ್ರೋನ್‌ಗಳು ಇಸ್ರೇಲ್‌ನ ಇಂಧನ ಮೂಲಸೌಕರ್ಯ ಮತ್ತು ಯುದ್ಧ ಜೆಟ್ ಇಂಧನ ಉತ್ಪಾದನೆಗೆ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ತಿಳಿಸಿವೆ.

ಇಸ್ರೇಲಿ ಸೇನೆಯು ಶುಕ್ರವಾರ ಆಪರೇಷನ್ ‘ರೈಸಿಂಗ್ ಲಯನ್’ ಅನ್ನು ಪ್ರಾರಂಭಿಸಿತು. ಇರಾನ್‌ನ ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ದಾಳಿ ಮಾಡಿದ ನಂತರ ಇಬ್ಬರು ಪರಸ್ಪರ ದಾಳಿ ಮುಂದುವರಿಸಿದ್ದಾರೆ.

ನಾವು ನಡೆಸಿದ ದಾಳಿಯಲ್ಲಿ ಉನ್ನತ ಜನರಲ್‌ಗಳು ಮತ್ತು ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಿರಿಯ ವಿಜ್ಞಾನಿಗಳು ಮತ್ತು ತಜ್ಞರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್‌ ಹೇಳಿಕೊಂಡಿದೆ. ಭಾನುವಾರದ ದಾಳಿಗೆ ಮೊದಲು ಇರಾನ್‌ನ ವಿಶ್ವಸಂಸ್ಥೆಯ ರಾಯಭಾರಿಯು, 78 ಜನರು ಸಾವನ್ನಪ್ಪಿದ್ದಾರೆ ಮತ್ತು 320 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರೀ ಅಗ್ನಿ ಅವಘಡ – 4,000 ಜನರ ಸ್ಥಳಾಂತರ

Share This Article