Turkey, Syria Earthquake: 7,900ಕ್ಕೇರಿದ ಸಾವಿನ ಸಂಖ್ಯೆ – ಅವಶೇಷಗಳಡಿ ಕೇಳುತ್ತಿದೆ ಸಂತ್ರಸ್ತರ ಚೀತ್ಕಾರ

Public TV
2 Min Read
turkey earthquake 7
Men search for people among the debris in a destroyed building in Adana, Turkey, Monday, Feb. 6, 2023. A powerful quake has knocked down multiple buildings in southeast Turkey and Syria and many casualties are feared. (AP Photo/Khalil Hamra)

ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ (Turkey, Syria Earthquake) ಸಂಭವಿಸಿದ ಭೀಕರ ಭೂಕಂಪಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಈವರೆಗೆ ದುರಂತದಲ್ಲಿ ಮಡಿದವರ 7,900ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿರುವವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕೊರೆಯುವ ಚಳಿಗೆ ರಕ್ಷಣಾ ಸಿಬ್ಬಂದಿ ಕೂಡ ಗಢಗಢ ನಡುಗುತ್ತಿದ್ದಾರೆ. ಆದರೂ ಕೂಡ ಹಗಲಿರುಳೆನ್ನದೇ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

Tuekey 001

ಸಿರಿಯಾದಲ್ಲಿ ಭೂಕಂಪದ ದುರಂತ ಸನ್ನಿವೇಶದಲ್ಲಿ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದರು. ಅದೃಷ್ಟವಶಾತ್‌ ನವಜಾತ ಶಿಶು ಬದುಕುಳಿದಿತ್ತು. ರಕ್ಷಣೆ ವೇಳೆ ಮಗುವಿನ ಹೊಕ್ಕುಳಬಳ್ಳಿ ತಾಯಿಯ ಕರುಳಿಗೆ ಹಾಗೆಯೇ ಕಟ್ಟಿಕೊಂಡಿತ್ತು. ಈ ದೃಶ್ಯ ಕಣ್ಣಾಲಿಗಳಲ್ಲಿ ನೀರು ತರಿಸುವಂತಿತ್ತು.

“ನಾವು ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾಗ ಮಗುವಿನ ಚೀತ್ಕಾರದ ಧ್ವನಿ ಕೇಳಿಸಿತು. ತಕ್ಷಣ ಎಲ್ಲವನ್ನೂ ತೆರವುಗೊಳಿಸಿ ನೋಡಿದಾಗ, ಹೆತ್ತಮ್ಮನ ಕರುಳಿಗೆ ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಸುತ್ತಿಕೊಂಡಿತ್ತು. ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ ಮಗುವಿನ ತಾಯಿ ಬದುಕಿರಲಿಲ್ಲ. ತನ್ನ ಇಡೀ ಕುಟುಂಬದಲ್ಲಿ ಬದುಕುಳಿದಿರುವ ಏಕೈಕ ಮಗು ಇದು” ಎಂದು ರಕ್ಷಣಾ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Turkey – Syria Earthquake- ಕಟ್ಟಡದ ಅವಶೇಷಗಳಡಿಯೇ ಮಗುವಿಗೆ ಜನ್ಮ ನೀಡಿ ಮಹಿಳೆ ಸಾವು

Tuekey 4

ಸೋಮವಾರ 7.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿ ಅಪಾರ ಹಾನಿಯನ್ನುಂಟು ಮಾಡಿದೆ. ಟರ್ಕಿಯ (Turkey) ನಗರಗಳಾದ ಗಾಜಿಯಾಂಟೆಪ್ ಮತ್ತು ಕಹ್ರಮನ್ಮರಸ್ ಭಾರಿ ವಿನಾಶ ಸಂಭವಿಸಿದೆ. ಕಟ್ಟಡಗಳು ಧರೆಗುರುಳಿವೆ.

ಟರ್ಕಿ ಮತ್ತು ಸಿರಿಯಾ (Syria) ಭೂಕಂಪ ಪ್ರದೇಶದ ದೃಶ್ಯಗಳು ಸ್ಮಶಾನ ಸದೃಶವಾಗಿವೆ. ಕಟ್ಟಡದ ಅವಶೇಷಗಳಿಗೆ ಚೀತ್ಕಾರಗಳು ಇನ್ನೂ ಕೇಳಿಬರುತ್ತಿವೆ. ಹಗಲಿರುಳೆನ್ನದೇ, ಕೊರೆವ ಚಳಿಯನ್ನೂ ಲೆಕ್ಕಿಸದೇ ರಕ್ಷಣಾ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ದುರಂತಕ್ಕೆ ಮರುಕ ವ್ಯಕ್ತಪಡಿಸಿರುವ ಮಿತ್ರ ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಇದನ್ನೂ ಓದಿ: Turkey – Syria Earthquakeː5 ಸಾವಿರಕ್ಕೇರಿದ ಸಾವಿನ ಸಂಖ್ಯೆ – ಟರ್ಕಿ ತಲುಪಿದ IAF C19 ವಿಮಾನ – ಭಾರತದ ನೆರವಿನ ಹಸ್ತ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *