ಬೆಂಗಳೂರು: ಗ್ಯಾರಂಟಿ ಯೋಜನೆಗಳ ಭಾರದಿಂದ ಕಾಂಗ್ರೆಸ್ ಸರ್ಕಾರ (Congress Government) ಆರ್ಥಿಕವಾಗಿ ಕಂಗೆಟ್ಟಿದ್ಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಷ್ಟು ದಿನ ಶಕ್ತಿ ಯೋಜನೆ, ಗೃಹಲಕ್ಷ್ಮಿ ಗೊಂದಲದಲ್ಲಿ ಮುಳುಗಿದ್ದ ಸರ್ಕಾರ ಇದೀಗ ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ ಹೆಚ್ಚು ಬಿಪಿಎಲ್ (BPL Card) ಪಡಿತರದಾರರನ್ನು ಎಪಿಎಲ್‌ಗೆ (APL Card) ಶಿಫ್ಟ್ ಮಾಡಿದೆ.
ಈ ಪರಿಷ್ಕರಣೆಯ ವೇಳೆ ಅಧಿಕಾರಿಗಳು ಸರಿಯಾದ ಮಾನದಂಡಗಳನ್ನು ಬಳಸಿಲ್ಲ. ಪರಿಣಾಮ ಅರ್ಹ ಫಲಾನುಭವಿಗಳು ಕೂಡ ಈಗ ಬಿಪಿಎಲ್ ಸೌಲಭ್ಯಗಳಿಂದ ವಂಚಿತರಾಗ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಾಲ ಪಡೆಯಲು ITR (ಆದಾಯ ತೆರಿಗೆ ರಿಟರ್ನ್ಸ್) ಫೈಲ್ ಮಾಡಿದ್ದ ಬಡ ಕಾರ್ಮಿಕರ ಬಿಪಿಎಲ್ ಕಾರ್ಡ್‌ಗಳೂ ರದ್ದಾಗಿದ್ದು, ಅವರು ತಿಂಗಳ ಅಕ್ಕಿ ಸಿಗದೇ ಒದ್ದಾಡ್ತಿದ್ದಾರೆ. ಆರೋಗ್ಯ ಸೌಲಭ್ಯ ಸಿಗದೇ ಪರದಾಡ್ತಿದ್ದಾರೆ. ಇದನ್ನೂ ಓದಿ: ಅರ್ಹರ ರೇಷನ್ ಕಾರ್ಡ್ ರದ್ದಾಗಿದ್ರೆ ಮರು ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡ್ತೀವಿ: ಮುನಿಯಪ್ಪ
ಬಿಪಿಎಲ್ ಕಾರ್ಡ್ ಶಾಕ್!
* ಕೇಸ್ ಸ್ಟಡಿ 1 – ರೇಣುಕಾ, ರಾಜಗೋಪಾಲನಗರ, ಬೆಂಗಳೂರು – ಆದಾಯದ ಮೂಲವಿಲ್ಲ – ಐಟಿಆರ್ ಫೈಲ್ ಆರೋಪ
* ಕೇಸ್ ಸ್ಟಡಿ 2 – ಕಲ್ಪನಾ, ನೆಲಗದರಹಳ್ಳಿ, ಬೆಂಗಳೂರು – ಕುಟುಂಬದ ಆದಾಯ 12,000 – ಐಟಿಆರ್ ಫೈಲ್ ಆರೋಪ
* ಕೇಸ್ ಸ್ಟಡಿ 3 – ಶೋಭಾ, ಮಹಾಲಕ್ಷ್ಮಿ ಲೇಔಟ್, ಬೆಂಗಳೂರು – ಪತಿ ಗಾರ್ಮೆಂಟ್ಸ್ ನೌಕರ – ಐಟಿಆರ್ ಫೈಲ್ ಆರೋಪ
* ಕೇಸ್ ಸ್ಟಡಿ 4 – ಮಹಾಲಕ್ಷ್ಮಮ್ಮ, ಮಲ್ಲರಬಾಣವಾಡಿ-ನೆಲಮಂಗಲ – ವಯೋವೃದ್ಧರು.. ಆರೋಗ್ಯ ಸಮಸ್ಯೆಯಿಂದ ಬಳಲ್ತಿದ್ದಾರೆ – ಕಾರಣವೇ ಗೊತ್ತಿಲ್ಲ
* ಕೇಸ್ ಸ್ಟಡಿ 5 – ಬೋರಯ್ಯ, ಪಾಲಯ್ಯ, ಚಿತ್ರದುರ್ಗ – 8 ಎಕರೆ ಜಮೀನು ಮಾಲೀಕ – ಆದರೆ, ಇದು ಪಾಳು ಭೂಮಿ (ಇಬ್ಬರು ಮಕ್ಕಳಿಗೆ ಜಮೀನು ರಿಜಿಸ್ಟರ್ ಮಾಡಿಸಲು ಹಣವಿಲ್ಲ)
* ಕೇಸ್ ಸ್ಟಡಿ 6 – ಅನ್ವರ್‌ಬಿ ಗಿರಗಾಂವ, ವಿಜಯಪುರ – ಬಟ್ಟೆ ಅಂಗಡಿಯಲ್ಲಿ ಮಗನ ಕೆಲಸ – ಜಿಎಸ್‌ಟಿ ಪಾವತಿ ಆರೋಪ
ವಿಪಕ್ಷಗಳಿಗೆ ಅಸ್ತ್ರವಾದ ರೇಷನ್ ಕಾರ್ಡ್ ವಿವಾದ:
ಬಿಪಿಎಲ್ ಕಾರ್ಡ್ ಗೊಂದಲ, ಯಡವಟ್ಟು, ಬಡ ಜನರ ಆಕ್ರೋಶ ಸಹಜವಾಗಿಯೇ ವಿಪಕ್ಷಗಳಿಗೆ ಆಹಾರವಾಗಿದೆ. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಗೊಂದಲ ಜನರ ಬಿಪಿ ಏರಿಸಿದೆ. ಗ್ಯಾರಂಟಿಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಕಿಡಿಕಾರಿವೆ. ಆದ್ರೆ, ಸರ್ಕಾರ ಮಾತ್ರ ಕಾರ್ಡ್ ರದ್ದು ಮಾಡ್ತಿಲ್ಲ. ಪರಿಷ್ಕರಣೆ ಮಾಡ್ತಿದ್ದೇವೆ. ಅರ್ಹರಿಗೆ ಮಾತ್ರ ನೀಡುತ್ತೇವೆ ಎಂಬ ಸಮರ್ಥನೆಗೆ ಇಳಿದಿದೆ. ಯಾವುದೇ ಅರ್ಹರ ರೇಷನ್ ಕಾರ್ಡ್ ರದ್ದಾಗಲ್ಲ ಅಂತ ಇಂದೂ ಸಿಎಂ ಸ್ಪಷ್ಟನೆ ಕೊಟ್ರು. ಬಿಪಿಎಲ್‌ಗೆ ಅರ್ಹರಲ್ಲದವರನ್ನು ಎಪಿಎಲ್‌ಗೆ ಹಾಕ್ತೇವೆ ಅಂತಾ ಮುನಿಯಪ್ಪ ಹೇಳಿದ್ರು. ಬಿಜೆಪಿಯವರಿಗೆ ಮಾಡೋಕೆ ಕೆಲಸ ಇಲ್ಲ ಎಂದು ಡಿಸಿಎಂ ಹರಿಹಾಯ್ದರು. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್
ನಮ್ಮ ಗ್ಯಾರಂಟಿಗಳಿಗೂ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೂ ಸಂಬಂಧ ಇಲ್ಲ ಎಂದು ಪರಮೇಶ್ವರ್ ವ್ಯಾಖ್ಯಾನಿಸಿದ್ರು. ಆದ್ರೂ, ಟೀಕೆಗಳು ಮುಂದುವರೆದಿರುವ ಕಾರಣ ಸಂಜೆ ತುರ್ತು ಸಭೆ ನಡೆಸಿದ ಸಿಎಂ, ಬಿಪಿಎಲ್ ಗೊಂದಲ ಬಗೆಹರಿಸಿ.. ಅರ್ಹರ ಕಾರ್ಡ್ ರದ್ದಾಗಿದ್ರೆ ಅದನ್ನು ಸರಿಪಡಿಸಿಕೊಡಿ.. ಬಿಪಿಎಲ್, ಎಪಿಎಲ್ ಯಾವುದೂ ರದ್ದಾಗಲ್ಲ. ವಿಪಕ್ಷಗಳಿಗೆ ಅಂಕಿ ಅಂಶ ಸಮೇತ ಉತ್ತರ ಕೊಡಿ ಎಂದು ಸಚಿವ ಮುನಿಯಪ್ಪಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 22 ರಾಜ್ಯಗಳಲ್ಲಿ ಇ.ಡಿ ದಾಳಿ – ಕೋಟಿ ಕೋಟಿ ಹಣ ಸೀಜ್