ಪಾಟ್ನಾ: ಬಿಹಾರದ ಮೋತಿಹಾರಿಯಲ್ಲಿ ಹಲವಾರು ವಿದ್ಯಾರ್ಥಿಗಳು ಕಾರಿನ ಹೆಡ್‍ಲೈಟ್ ಬೆಳಕಿನ ಸಹಾಯದಿಂದ 12ನೇ ತರಗತಿ ಪರೀಕ್ಷೆಯನ್ನು ಬರೆದಿದ್ದಾರೆ.
ಮಹಾರಾಜ ಹರೇಂದ್ರ ಕಿಶೋರ್ ಸಿಂಗ್ ಕಾಲೇಜಿನಲ್ಲಿ ವಾಹನಗಳ ಬೆಳಕಿನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕುಳಿತು ಹಿಂದಿ ಪರೀಕ್ಷೆಯನ್ನು ಬರೆದಿದ್ದಾರೆ. ಮಂಗಳವಾರ ಮಧ್ಯಾಹ್ನ 1.45ರಿಂದ ಸಂಜೆ 5 ಗಂಟೆಯವರೆಗೂ ಪರೀಕ್ಷೆಯನ್ನು ನಿಗದಿ ಪಡಿಸಲಾಯಿತು. ಆದರೆ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಸರಿಯಾಗಿ ಮಾಡದ ಕಾರಣ ಪರೀಕ್ಷೆ ಸಂಜೆ 4 ಗಂಟೆಯವರೆಗೂ ವಿಳಂಬವಾಗಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾಲೇಜು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ. ನಂತರ ಮೋತಿಹಾರಿ (ಸದರ್) ಎಸ್‍ಡಿಒ ಸೌರಭ್ ಸುಮನ್ ಯಾದವ್ ಮತ್ತು ಡಿಎಸ್‍ಪಿ ಅರುಣ್ ಕುಮಾರ್ ಯಾದವ್ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.
Advertisement
Advertisement
ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಪರೀಕ್ಷೆ ಕುರಿತಂತೆ ಮನವರಿಕೆ ಮಾಡಿ, ಕೊನೆಗೆ ಸಂಜೆ 4 ಗಂಟೆಗೆ ಮತ್ತೆ ಪರೀಕ್ಷೆಯನ್ನು ಮುಂದುವರಿಸಿ ಸಂಜೆ 7 ಗಂಟೆಗೆ ಮುಕ್ತಾಯಗೊಳಿಸಲಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಕಾಲೇಜಿನಲ್ಲಿ ವಿದ್ಯುತ್ ಪೂರೈಕೆಯಾಗದ ಕಾರಣ ಅಂತಿಮವಾಗಿ ನಾಲ್ಕು ಚಕ್ರದ ವಾಹನಗಳಲ್ಲಿ ಬಂದ ಪೋಷಕರು ಪರೀಕ್ಷೆಯನ್ನು ಪೂರ್ಣಗೊಳಿಸಲು ತಮ್ಮ ವಾಹನದ ಹೆಡ್‍ಲೈಟ್ ಆನ್ ಮಾಡಿದರು. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ
Advertisement
Exams under car headlights pic.twitter.com/aBW2YelzD9
— Vijay Swaroop (@swaroop_vijay) February 2, 2022
Advertisement
ಇದೀಗ ಪರೀಕ್ಷಾ ಕೇಂದ್ರದ ಅಧೀಕ್ಷಕ ನವೀನ್‍ಕುಮಾರ್ ಝಾ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರನ್ನು ಅಧಿಕಾರದಿಂದ ವಜಾಗೊಳಿಸಲಾಗಿದೆ. ಈ ಕುರಿತು ತನಿಖೆ ನಡೆಸಲು ಜಿಲ್ಲಾ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದೇವೆ ಎಂದು ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು
Car, headlight, Exam, students, Bihara