ನವದೆಹಲಿ: ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ಬಳಿಕ ಈವರೆಗೆ ಎಷ್ಟು ಹಣ ಮರಳಿ ಬಂದಿದೆ? ಎಷ್ಟು ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ಜನ ಮತ್ತು ರಾಜಕೀಯ ಪಕ್ಷಗಳು ಸರ್ಕಾರವನ್ನು ಕೇಳಿತ್ತು.
ಈ ಪ್ರಶ್ನೆಗಳಿಗೆ ಸರ್ಕಾರ ಬಜೆಟ್‍ನಲ್ಲಿ ಉತ್ತರ ನೀಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿತ್ತು. ಈಗ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಸಹಾಯಕ ಖಾತೆ ರಾಜ್ಯ ಸಚಿವ ಸಂತೋಷ್ ಗಂಗಾವರ್ ಲಿಖಿತ ಉತ್ತರವನ್ನು ನೀಡುವ ಮೂಲಕ ಜನರ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.
Advertisement
ಎಷ್ಟು ಹಣ ಬಂದಿದೆ?
ನೋಟು ನಿಷೇಧವಾಗುವ ಮೊದಲು 17,165 ದಶಲಕ್ಷ 500 ರೂ. ಮುಖಬೆಲೆಯ ನೋಟು ಚಲಾವಣೆಯಲ್ಲಿದ್ದರೆ, 1 ಸಾವಿರ ಮುಖಬೆಲೆಯ 6,858 ದಶಲಕ್ಷ ನೋಟು ಚಲಾವಣೆಯಲ್ಲಿತ್ತು. ನೋಟ್ ಬ್ಯಾನ್ ಬಳಿಕ ಡಿಸೆಂಬರ್ 10ರವರೆಗೆ 12.44 ಲಕ್ಷ ಕೋಟಿ ಹಳೇನೋಟು ವಾಪಸ್ ಬಂದಿದೆ ಎಂದು ಸರ್ಕಾರ ಹೇಳಿದೆ.
Advertisement
ಜನವರಿ 10ವರೆಗೆ ಎಷ್ಟು ಆಸ್ತಿ ಪತ್ತೆಯಾಗಿದೆ?
1,100 ಕಡೆ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ್ದು, 5,100 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. 610 ಕೋಟಿ ರೂ. ಆಸ್ತಿ- ಪಾಸ್ತಿ ಜಪ್ತಿ ಮಾಡಲಾಗಿದ್ದು ಇದರಲ್ಲಿ 510 ಕೋಟಿ ರೂ. ನೋಟುಗಳನ್ನು ಜಪ್ತಿ ಮಾಡಲಾಗಿದೆ. ಪತ್ತೆಯಾದ ಹಣದಲ್ಲಿ 110 ಕೋಟಿ ರೂ. ಹೊಸನೋಟು ಸಿಕ್ಕಿದೆ. ಒಟ್ಟು 5,400 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ.
Advertisement
ವಿತ್‍ಡ್ರಾ ಮಿತಿ ಕೊನೆ:
ನೋಟ್‍ಬ್ಯಾನ್ ಬಳಿಕ ಹಣದ ಮರುಪೂರೈಕೆ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದ್ದು ಗ್ರಾಹಕರ ವಿತ್‍ಡ್ರಾ ಮಿತಿ ಕೊನೆಯಾಗಲಿದೆ ಅಂತ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಶೀಘ್ರದಲ್ಲೇ ಉಳಿತಾಯ ಖಾತೆಗಳ ಮೇಲಿರುವ ವಾರಕ್ಕೆ 24 ಸಾವಿರ ರೂಪಾಯಿ ವಿತ್‍ಡ್ರಾ ಮಿತಿ ಸೇರಿ ಎಲ್ಲಾ ನಿರ್ಬಂಧಗಳು ಅಂತ್ಯಗೊಳ್ಳಲಿದೆ ಅಂತ ಹಣಕಾಸು ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.