ಸುಖಾಸುಮ್ಮನೆ ತಮ್ಮ ನೆಚ್ಚಿನ ನಟ ಸುದೀಪ್ (Sudeep) ಅವರ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಸಿಡಿದೆದ್ದಿರುವ ಕಿಚ್ಚನ ಅಭಿಮಾನಿಗಳು ರಾಜ್ಯಾದ್ಯಂತ ಅಲ್ಲಲ್ಲಿ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಕೆಲ ಅಭಿಮಾನಿಗಳು ಜಮಾಯಿಸಿ, ನಿರ್ಮಾಪಕರಾದ ಕುಮಾರ್ ಮತ್ತು ರೆಹಮಾನ್ ವಿರುದ್ಧ ಘೋಷಣೆ ಕೂಗಿದರು. ಕುಮಾರ್ ಅವರ ಭಾವಚಿತ್ರಕ್ಕೆ ಚೆಪ್ಪಲಿ ಸೇವೆ ಮಾಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್ ಬರುವತನಕ ಪ್ರತಿಭಟನೆ ಮಾಡಿದ ಸುದೀಪ್ ಅಭಿಮಾನಿಗಳು, ಹರೀಶ್ ಬಂದ ನಂತರ ಅವರಿಗೆ ಮನವಿ ಸಲ್ಲಿಸಿದರು. ಸಾಕ್ಷಿ, ಆಧಾರಗಳು ಇಲ್ಲದೇ ಆರೋಪ ಮಾಡುವವರಿಗೆ ಫಿಲ್ಮ್ ಚೇಂಬರ್ ಅವಕಾಶ ನೀಡಬಾರದು ಎಂದು ಘೋಷಣೆ ಕೂಗಿದರು. ಅಲ್ಲದೇ, ಕುಮಾರ್ ಮತ್ತು ರೆಹಮಾನ್ ಎರಡು ದಿನಗಳ ಒಳಗೆ ಕ್ಷಮೆ ಕೇಳದೇ ಇದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅಭಿಮಾನಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು
- Advertisement
- Advertisement
ಬೆಂಗಳೂರಿನಲ್ಲಿ ಮಾತ್ರವಲ್ಲ ಚಾಮರಾಜನಗರದಲ್ಲೂ ಪ್ರತಿಭಟನೆ ಕಾವು ಜೋರಾಗಿತ್ತು. ಚಾಮರಾಜನಗರದ ಕಿಚ್ಚನ ಅಭಿಮಾನಿಗಳು ಕೂಡ ನಿರ್ಮಾಪಕ ಎನ್.ಕುಮಾರ್ ಮತ್ತು ರೆಹಮಾನ್ ವಿರುದ್ಧ ಬೀದಿಗಿಳಿದಿದ್ದರು. ನಿರ್ಮಾಪಕರ ಫೋಟೋಗೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ಹೊರಹಾಕಿದರು. ಚಾಮರಾಜನಗರದ ಭುವನೇಶ್ವರಿ ವೃತ್ತಿಯಲ್ಲಿ ಸೇರಿದ್ದ ಅಭಿಮಾನಿಗಳು ನಿರ್ಮಾಪಕರ ವಿರುದ್ಧ ಘೋಷಣೆ ಕೂಗಿದರು.
ನಿರ್ಮಾಪಕ ಕುಮಾರ್ ಅವರು ಕಿಚ್ಚ (Kiccha) ಸುದೀಪ್ ಅವರ ಹೆಸರಿಗೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದ್ದಾರೆ. ಕುಮಾರ್ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಕ್ಷಮೆ ಕೇಳದೇ ಇದ್ದರೆ, ಅವರ ಸಿನಿಮಾಗಳನ್ನು ಬ್ಯಾನ್ ಮಾಡುತ್ತೇವೆ. ಮತ್ತು ಸುದೀಪ್ ಅವರ ವಿರುದ್ಧ ಮಾತನಾಡಿದರೆ, ಅವರ ಬೆಂಗಳೂರಿನ ಮನೆಗೆ ಮುತ್ತಿಗೆ ಹಾಕುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
Web Stories