ಮೈಸೂರು: ಮೊಬೈಲ್ (Mobile) ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ. 2ನೇ ಹೆಂಡತಿಯ ಮಗ ತಂದೆ ಎದೆಗೆ ಚೂರಿ ಹಾಕಿ ಕೊಂದು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಬೀದಿ ಕಾಮಣ್ಣ ಎಸ್ಕೇಪ್ ಆಗಿದ್ದರ ಹಿಂದಿದೆ ಲವ್ ಕಹಾನಿ – ಆರೋಪಿಗೆ ಹೋಮ್ ಗಾರ್ಡ್ ಪ್ರೇಯಸಿ ಸಾಥ್
ಭಾನುವಾರ ತಡರಾತ್ರಿ ಮೈಸೂರಿನ ಶಾಂತಿನಗರದಲ್ಲಿ ಘಟನೆ ನಡೆದಿದೆ. ಸೈಯದ್ ಮುತ್ತಿಫ್ (35) ಕೊಲೆಯಾದ ತಂದೆ, ಮತೀನ್ (21) ಕೊಲೆ ಮಾಡಿದ ಮಗ. ಇದನ್ನೂ ಓದಿ: ಹುಬ್ಬಳ್ಳಿ ಕೃತ್ಯ ಮಾಸುವ ಮುನ್ನ ಬೀದರ್‌ನಲ್ಲಿ ಘಟನೆ – ಗೇಟ್ ಬಳಿ ಆಟವಾಡ್ತಿದ್ದ ಬಾಲಕಿ ಅಪಹರಣಕ್ಕೆ ಯತ್ನಿಸಿದ ಯುವಕ
2ನೇ ಹೆಂಡತಿ ಪುತ್ರನಾದ ಮತೀನ್ ಮನೆಗೆ ಬರುವಂತೆ ಕರೆ ಮಾಡಿದ್ದಾನೆ. ಆದ್ರೆ ತಂದೆ ಮನೆಗೆ ಬರ್ತಿದಂತೆ ಎದೆಗೆ ಚೂರಿಯಿಂದ ಚುಚ್ಚಿ ಕೊಲೆ ಮಾಡಿ, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವಮೊಗ್ಗದ ಲಾಡ್ಜ್‌ನಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿ ಅನುಮಾನಾಸ್ಪದ ಸಾವು