– ಮೇಘಾಲಯ ಹನಿಮೂನ್ ಮರ್ಡರ್ ನೆನಪಿಸಿದ ಕೇಸ್
ಜೈಪುರ: ಮೇಘಾಲಯದ ಹನಿಮೂನ್ (Meghalaya Honeymoon) ಮರ್ಡರ್ ಕೊಲೆ ಪ್ರಕರಣವನ್ನು ನೆನಪಿಸುವ ಘಟನೆಯೊಂದು ರಾಜಸ್ಥಾನದಲ್ಲಿ (Rajasthan) ನಡೆದಿದೆ. ಪತ್ನಿ ಪ್ಲ್ಯಾನ್ ಮಾಡಿದ್ದ ಹಿಟ್ & ರನ್‌ಗೆ ಆಕೆಯ ಪತಿ ಬಲಿಯಾಗಿದ್ದಾರೆ.
ಆಶಿಶ್ ಮತ್ತು ಅಂಜು ನವವಿವಾಹಿತ ಜೋಡಿ. ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಆಶಿಶ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಅಂಜು ಚಿನ್ನಾಭರಣವನ್ನು ಆರೋಪಿಗಳು ದೋಚಿ ಪರಾರಿಯಾಗಿದ್ದರು. ಅಂಜು ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಕೊನೆಗೆ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಕೊರಿಯನ್ ಹೆಸರಲ್ಲಿ ಅಕೌಂಟ್ ಸೃಷ್ಟಿಸಿ ಭಾರೀ ಫಾಲೋವರ್ಸ್ ಹೊಂದಿದ್ದ ಸಹೋದರಿಯರು
ಪೊಲೀಸ್ ತನಿಖೆಯಲ್ಲಿ, ಅಂಜು ತನ್ನ ಗೆಳೆಯ ಸಂಜು ಮತ್ತು ಇನ್ನಿಬ್ಬರು ವ್ಯಕ್ತಿಗಳು ಸೇರಿಕೊಂಡು ಆಶಿಶ್‌ನನ್ನು ಕೊಂದು ಅದನ್ನು ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಈಗ ಇದನ್ನು ರಾಜಸ್ಥಾನದ ಹನಿಮೂನ್ ಕೊಲೆ ಎಂದು ಬಿಂಬಿಸಲಾಗಿದೆ.
ಶ್ರೀ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ಮಾತನಾಡಿ, ಜನವರಿ 30 ರ ರಾತ್ರಿ ಸುಮಾರು 9 ಗಂಟೆಗೆ ಪೊಲೀಸರಿಗೆ ಕರೆ ಬಂದಿತ್ತು. ರಸ್ತೆಯಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಕರೆ ಮಾಡಿದವರು ತಿಳಿಸಿದ್ದರು. ದಂಪತಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಆಶಿಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಒಬ್ಬ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ನಮಗೆ ಮಾಹಿತಿ ಸಿಕ್ಕಿತು. ನಾವು ಅಪಘಾತದ ಸ್ಥಳವನ್ನು ಪರಿಶೀಲಿಸಿದೆವು. ತಾಂತ್ರಿಕ ದೃಷ್ಟಿಕೋನದಿಂದ ತನಿಖೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡವನ್ನು ಸಹ ಕರೆಸಿದೆವು ಎಂದು ತಿಳಿಸಿದ್ದಾರೆ.
23 ವರ್ಷದ ಅಂಜು, ನಾನು ಮತ್ತು ನನ್ನ ಪತಿ ಸಂಜೆ ವಾಕಿಂಗ್‌ಗೆ ಹೊರಗೆ ಹೋದಾಗ ಆಶಿಶ್ ಮತ್ತು ತನಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ತಾನು ಧರಿಸಿದ್ದ ಚಿನ್ನಾಭರಣಗಳನ್ನು ದೋಚಲಾಗಿದೆ ಎಂದೂ ಆಕೆ ಆರೋಪಿಸಿದ್ದಳು. ಆದರೆ, ಅಂಜು ನಡತೆ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಇದನ್ನೂ ಓದಿ: ಕೇರಳದ ಮೆಡಿಕಲ್ ಕಾಲೇಜು ಬಳಿ ಸ್ಫೋಟಕ ತುಂಬಿದ 100 ಕ್ಕೂ ಹೆಚ್ಚು ಬಾಕ್ಸ್ ವಶಕ್ಕೆ – ಬೆಚ್ಚಿಬಿದ್ದ ಜನ
ಆಶಿಶ್‌ನ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಆತನನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಗಳು ಬಹಿರಂಗಪಡಿಸಿದವು. ಆದರೆ, ಆತನ ಪತ್ನಿ ಅಂಜು ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಳು. ಅಂಜು ಫೋನ್ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದರು. ಆಕೆ ತನ್ನ ಮನೆಯ ಸಮೀಪ ವಾಸಿಸುತ್ತಿದ್ದ ಸಂಜು ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಪೊಲೀಸರಿಗೆ ತಿಳಿದುಬಂತು.
ಅಂಜು ಮತ್ತು ಆಶಿಶ್ ಮೂರು ತಿಂಗಳ ಹಿಂದೆ ವಿವಾಹವಾಗಿದ್ದರು. ಆದರೆ, ಅಂಜುಗೆ ಈ ಮದುವೆ ಇಷ್ಟವಿರಲಿಲ್ಲ. ಮದುವೆಯಾದ ಬೆನ್ನಲ್ಲೇ ಆಕೆ ತವರು ಸೇರಿದ್ದಳು. ಈ ವೇಳೆ ಪ್ರಿಯಕರ ಸಂಜು ಜೊತೆ ಮತ್ತೆ ಸಂಪರ್ಕ ಬೆಳೆಸಿದಳು. ಈ ಸಮಯದಲ್ಲಿ ಇಬ್ಬರು ಆಶಿಶ್‌ನ ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಯಿತು.

