ಮೈಸೂರು: ಸ್ಯಾಂಡಲ್ ವುಡ್ ನಟ ಕಮ್ ಕೆಪಿಜೆಪಿ ಸ್ಥಾಪಕ ಉಪೇಂದ್ರ ಇಂದು ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರಿನಲ್ಲಿ ಪ್ರಜಾಕೀಯ ಪಕ್ಷದ ಸಂಘಟನೆ ಕುರಿತು ಮಾತನಾಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮದು ಕನ್ಫ್ಯೂಷನ್ ಸಿನಿಮಾ ಅಲ್ಲ. ನಮ್ಮದು ಥ್ರಿಲ್ಲರ್ ಸಿನಿಮಾನು ಅಲ್ಲ. ಇದೊಂದು ಟ್ರುಥ್ ಫುಲ್ ಸಿನಿಮಾ. ಅರ್ಥ ಆಗದೆ ಇರೋರಿಗೆ ಇದು ಹಾರರ್ ಸಿನಿಮಾ ಅಂತ ತನ್ನದೇ ಶೈಲಿಯಲ್ಲಿ ಡೈಲಾಗ್ ಹೊಡೆದ್ರು.
Advertisement
Advertisement
ನಾನೂ ಮತ ಹಾಕಿ ಅಂತ ಬೀಕ್ಷೆ ಬೇಡುತ್ತಿಲ್ಲ. ನಾನೂ ದೇಶ ಸೇವೆ ಮಾಡಲು ಬಂದಿದ್ದೇನೆ. ನೀವೂ ಗೆಲ್ಲಿಸಬೇಕು ಹೊರತು ನಾನೂ ಗೆಲ್ಲುತ್ತೇನೆ ಎಂದು ಹೇಳುತ್ತಿಲ್ಲ. ನಾನೂ ಗೆಲ್ಲುತ್ತೇನೆ ಎನ್ನುತ್ತಿಲ್ಲ ನಿಮ್ಮ ಗೆಲುವು ಎನ್ನುತ್ತಿದ್ದೇನೆ. ನನಗೆ ಗಣ್ಯರು, ಹಿರಿಯರು ಬೆಂಬಲ ನೀಡಿದ್ದಾರೆ. ಮೈಸೂರು ಯದುವಂಶ ಮಹಾರಾಜ ಯದುವೀರ್ ಕೂಡ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಹೆಸರು ಹೇಳುವೆ. ಈವರೆಗೂ ಯಾವ ನಟರು ನನ್ನ ಪಾರ್ಟಿಗೆ ಸೇರುವುದಾಗಿ ಹೇಳಿಲ್ಲ. ಆದ್ರೆ ನಟ ಶಿವಣ್ಣ, ಯಶ್ ಎಲ್ಲರೂ ಬೆಂಬಲ ಸೂಚಿಸಿದ್ದಾರೆ ಅಂತ ಅವರು ಹೇಳಿದ್ರು.
Advertisement
ರಾಜಕಾರಣ ಅಂದ್ರೆ ಹಿಂಗೆ ಇದೆ ಅಂತ ನಂಬಿ ಬಿಟ್ಟಿದ್ದೇವೆ. ಅದನ್ನ ಬದಲಾವಣೆ ಹೇಗೆ ಅನ್ನೋದೆ ದೊಡ್ಡ ಕುತೂಹಲವಾಗಿದೆ. ಅದಕ್ಕಾಗಿ ಕೆಪಿಜೆಪಿ ಪಕ್ಷ ಕ್ಯಾಶ್‍ಲೆಶ್ ಪಾರ್ಟಿ ಹುಟ್ಟುಹಾಕಿದ್ದೇವೆ. ಈ ಮೂಲಕ ಸಮಾಜದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ. ನಾವು ಪಾರ್ಟಿ ಆರಂಭಿಸಿದಾಗ ಕೇವಲ 10% ಜನರಿಗೆ ಗೊತ್ತಾಗಿತ್ತು. ಈಗ ಮಾಧ್ಯಮಗಳ ಮೂಲಕ ಹಳ್ಳಿ ಹಳ್ಳಿಗೂ ತಲುಪಿದೆ. ನಮ್ಮ ಪಕ್ಷಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅದಕ್ಕಾಗಿಯೇ ನಾವು ಆ್ಯಪ್ ಬಿಡುಗಡೆ ಮಾಡಿದ್ದೇವೆ. ವೆಬ್‍ಸೈಟ್ ಮೂಲಕ ನಮ್ಮನ್ನ ಸಂಪರ್ಕಿಸಬಹುದು. ಅರ್ಹ ಅಭ್ಯರ್ಥಿಗಳು ನಮ್ಮ ಪಕ್ಷ ಸೇರಬಹುದು ಅಂತ ಹೇಳಿದ್ರು.
Advertisement
ನಾವು ಕ್ಷೇತ್ರವಾರು ಮೈಕ್ರೋ ಪ್ಲಾನ್ ಮಾಡಬೇಕು ಎಂದಿದ್ದೇವೆ. ಹೇಗೆ ಸರ್ಕಾರ ನಡೆಸಬೇಕು.? ಅದು ಸಂಪೂರ್ಣ ಪಾರದರ್ಶಕತೆ ಇರಬೇಕು. ಮೊದಲ ಹೆಜ್ಜೆಯೆ ನಾವು ಸರಿಯಾಗಿ ಇಡಬೇಕು. ನಾನು ನಾಯಕ ಆಗುತ್ತೇನೆ ಅಂತ ನಮ್ಮ ಪಕ್ಷಕ್ಕೆ ಬರಬೇಡಿ. ಬೆಳಗ್ಗೆ 9 ರಿಂದ ಸಂಜೆ 6ರವೆಗೆ ಕೆಲಸ ಮಾಡುವವರು ಬನ್ನಿ. ಇಲ್ಲವಾದ್ರೆ ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬರಬೇಡಿ ಅಂತ ತನ್ನ ಪಕ್ಷಕ್ಕೆ ಆಗಮಿಸುವವರಿಗೆ ಷರತ್ತು ಹಾಕಿದ್ರು.
ಇದನ್ನೂ ಓದಿ; ಉಪೇಂದ್ರ ರಾಜಕೀಯ ಎಂಟ್ರಿಗೆ ಯಶ್ ಹೇಳಿದ್ದು ಹೀಗೆ
ನನ್ನ ಮೇಲೆ ಯಾವುದೇ ದೂರು ದಾಖಲಾಗಿಲ್ಲ. ಆ ರೀತಿ ಆಯೋಗದಲ್ಲಿ ದೂರು ದಾಖಲಾದ್ರೆ ಕಾನೂನು ಹೋರಾಟ ಮಾಡುತ್ತೇನೆ. ನಾನೇನು ಹಣದ ವಿಚಾರವಾಗಿ ತಪ್ಪಾಗಿ ಮಾತನಾಡಿಲ್ಲ. ನೀವು ನನ್ನನ್ನ ಪ್ರಶ್ನೆ ಮಾಡಿದ್ರೆ ಹಾಗಂತ ನಿಮ್ಮ ಮೇಲೆ ಕೇಸ್ ಹಾಕಲು ಸಾಧ್ಯವೇ ಅಂತ ಉಪ್ಪಿ ಪತ್ರಕರ್ತರಿಗೆ ಪ್ರಶ್ನೆ ಹಾಕಿದ್ರು.
ನನ್ನ ಬದುಕು ಉಪ್ಪಿಟ್ಟು ಥರ ಆಗಿದೆ: ನಟ ಉಪೇಂದ್ರ https://t.co/MN6U7t76ay#Bengaluru #Sandalwood #Actor #Upendra pic.twitter.com/nQFfJnFl79
— PublicTV (@publictvnews) November 30, 2017
ಉಪ್ಪಿ ಪ್ರಜಾಕೀಯಕ್ಕೆ ಮೈಸೂರು ಮಹಾರಾಜರ ಮೆಚ್ಚುಗೆ https://t.co/r4YQppgXUY #Yadveer #Mysuru #Upendra #PoliticalParty #Prajakiya @nimmaupendra @priyankauppi @UpendraFanClub pic.twitter.com/gUZVT7NsA0
— PublicTV (@publictvnews) November 13, 2017