– ಕರ್ನಾಟಕ ಆಯ್ತು.. ಈಗ ರಾಜಸ್ಥಾನದಲ್ಲಿ ಹಿಜಬ್ ವಿವಾದ
ಜೈಪುರ: ಹಿಜಬ್ (Hijab) ವಿವಾದವು ಈಗ ಕರ್ನಾಟಕದಿಂದ ರಾಜಸ್ಥಾನ (Rajasthan) ಪ್ರವೇಶಿಸಿದೆ. ಹಿಜಬ್ ವಿರುದ್ಧ ಮಾತನಾಡುವಾಗ ಬಿಜೆಪಿ ಶಾಸಕ ಬಾಲ ಮುಕುಂದ್ ಆಚಾರ್ಯ, ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗಬಹುದು ಎಂದು ಹೇಳಿಕೆ ನೀಡಿದ್ದಾರೆ.
Advertisement
ಬಿಜೆಪಿಯ ಬಾಲ ಮುಕುಂದ್ ಆಚಾರ್ಯ (Bal Mukund Acharya) ಅವರು ಗಣರಾಜ್ಯೋತ್ಸವದ ವೇಳೆ ವಾಲ್ಡ್ ಸಿಟಿಯ ಗಂಗಾಪೋಲ್ ಪ್ರದೇಶದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಅಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ ಧರಿಸಿದ್ದನ್ನು ಕಂಡು ವಸ್ತ್ರ ಸಂಹಿತೆ ಬಗ್ಗೆ ಪ್ರಶ್ನಿಸಿದ್ದರು. ಇದನ್ನೂ ಓದಿ: ಹಿಜಬ್ ನಿಷೇಧ ವಾಪಸ್ ಪಡೆಯೋಕೆ ಕೇವಲ 30 ನಿಮಿಷ ಸಾಕು: ಸಿದ್ದರಾಮಯ್ಯ ವಿರುದ್ಧ ಓವೈಸಿ ವಾಗ್ದಾಳಿ
Advertisement
Advertisement
ಇವರ ಹೇಳಿಕೆಯನ್ನು ವಿರೋಧಿಸಿ ಕೆಲ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ‘ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಶಾಸಕರು ನಮ್ಮನ್ನು ಒತ್ತಾಯಿಸಿದರು. ಕೆಲವು ಹುಡುಗಿಯರು ಮೌನವಾಗಿದ್ದಾಗ, ಅವರಿಗೆ ಘೋಷಣೆ ಕೂಗುವಂತೆ ಸೂಚಿಸಿದರು. ಅಷ್ಟೇ ಅಲ್ಲ, ಶಾಲೆಯಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಲಾಗುವುದಿಲ್ಲ’ ಎಂದಿದ್ದರು ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
Advertisement
ಈ ವೇಳೆ ಪ್ರತಿಭಟನಾನಿರತರನ್ನು ಪೊಲೀಸರು ಮನವೊಲಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳು ಪ್ರತಿಭಟನಾ ಸ್ಥಳದಿಂದ ಹೊರಟರು. ಇದಾದ ಬಳಿಕ ಶಾಸಕ ಆಚಾರ್ಯ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ವೀಡಿಯೊವನ್ನು ಬಿಡುಗಡೆ ಮಾಡಿದರು. ‘ಇವರಿಗೆ ಎರಡು ವಿಭಿನ್ನ ವಸ್ತ್ರ ಸಂಹಿತೆ ಇದೆಯೇ ಎಂದು ನಾನು ಪ್ರಾಂಶುಪಾಲರನ್ನು ಕೇಳಿದ್ದೆ. ಗಣರಾಜ್ಯೋತ್ಸವದ ಸಮಾರಂಭ ಅಥವಾ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದಾಗ, ಬೇರೆ ಡ್ರೆಸ್ ಕೋಡ್ ಇದೆಯೇ? ಹಾಗಾದರೆ, ನಮ್ಮ ಮಕ್ಕಳೂ (ಹಿಂದೂ ಹೆಣ್ಣುಮಕ್ಕಳು) ಲೆಹೆಂಗಾ ಚುನ್ನಿ ಹಾಕುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ವಾಪಸ್- ಕಾನೂನು ಪರಿಶೀಲಿಸಿಯೇ ಕ್ರಮ: ಪರಮೇಶ್ವರ್
ಕಿಶನ್‌ಪೋಲ್‌ನ ಕಾಂಗ್ರೆಸ್ ಶಾಸಕ ಅಮೀನ್ ಕಗಾಜಿ ಅವರು, ಬಿಜೆಪಿ ಶಾಸಕ ಸೌಹಾರ್ದ ಮತ್ತು ಕೋಮು ಸೌಹಾರ್ದವನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ವಿರುದ್ಧ ಫೆ.2ರೊಳಗೆ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹಿಜಬ್ ಮೊಘಲರು ತಂದ ‘ಗುಲಾಮಗಿರಿಯ ಸಂಕೇತ’. ಕೆಲವು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಜಬ್ ಧರಿಸೋದಕ್ಕೆ ಅನುಮತಿ ಇಲ್ಲ. ಅದು ಇಲ್ಲಿಯೂ ಆಗಬಾರದು ಎಂದು ಬಿಜೆಪಿ ಸಚಿವ ಕಿರೋರಿ ಲಾಲ್ ಮೀನಾ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್ ನಮ್ಮ ಹಕ್ಕು, ಇನ್ಮುಂದೆ ಅಣ್ಣ-ತಮ್ಮಂದಿರಂತೆ ಬದುಕೋಣ – ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ಮುಸ್ಕಾನ್
ಬಿಜೆಪಿ ಶಾಸಕ ಬಾಲ್ ಮುಕುಂದ್ ಆಚಾರ್ಯ ವಿವಾದಿತ ಹೇಳಿಕೆಗಳನ್ನು ನೀಡಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು ಚುನಾವಣೆಯಲ್ಲಿ ಗೆದ್ದ ನಂತರ, ಅಕ್ರಮ ಮಾಂಸದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೀದಿಗಿಳಿದಿದ್ದರು.
ಕರ್ನಾಟಕದಲ್ಲೇನಾಗಿತ್ತು?
ಹಿಜಬ್ ಸಮಸ್ಯೆ ಎರಡು ವರ್ಷಗಳಿಂದ ಕರ್ನಾಟಕವನ್ನು ತಲ್ಲಣಗೊಳಿಸಿತ್ತು. 2022 ರಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಶಿರಸ್ತ್ರಾಣವನ್ನು ನಿಷೇಧಿಸಿತ್ತು. ಇದು ಭಾರೀ ಗದ್ದಲಕ್ಕೆ ಕಾರಣವಾಯಿತು. ಕರ್ನಾಟಕ ಹೈಕೋರ್ಟ್ ಹಿಜಬ್ ನಿಷೇಧದ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಹಿಜಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಆದರೆ ಶಿಕ್ಷಣ ಸಂಸ್ಥೆಗಳು ತಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಅನ್ನು ನಿರ್ಧರಿಸಬಹುದು ಎಂದು ಹೇಳಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣ ಈಗ ಸುಪ್ರೀಂ ಅಂಗಳದಲ್ಲಿದೆ. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?