ವಿಶ್ವದ ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿ (award) ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ರೆಡ್ ಕಾರ್ಪೆಟ್ (red carpet) ಮೇಲೆ ವಿಶ್ವದ ಅನೇಕ ತಾರೆಯರು ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಕಪ್ಪು ಬಣ್ಣದ ಶೋಲ್ಡರ್ ವೆಲ್ವೆಟ್ ಗೌನ್ ಧರಿಸಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
Advertisement
ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬಂದಿದ್ದ ಡ್ವೇನ್ ಜಾನ್ಸನ್, ಜೊನಾಥನ್ ಮೇಜರ್ಸ್, ಮೆಲಿಸ್ಸಾ ಮೆಕಾರ್ಥಿ, ಎಮಿಲಿ ಬ್ಲಂಟ್, ಜೆನ್ನಿಫರ್ ಕೊನ್ನೆಲ್ಲಿ ಸೇರಿದಂತೆ ಹಾಲಿವುಡ್ ತಾರೆಯರು ಕೂಡ ಹೆಜ್ಜೆ ಹಾಕುವ ಮೂಲಕ ಕ್ಯಾಮೆರಾ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ
Advertisement
Advertisement
ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದಾರೆ. ಅಲ್ಲದೇ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಸೇರಿದಂತೆ ಆರ್.ಆರ್.ಆರ್ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.
Advertisement
ಈ ಬಾರಿ ಭಾರತದ ಎರಡು ಚಿತ್ರಗಳಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ. ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಓರಿಜನ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಕಾರ್ತಿಕಿ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಎರಡೂ ತಂಡಕ್ಕೂ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದ್ದಾರೆ. ಇದೊಂದು ಐತಿಹಾಸಿ ಕ್ಷಣ ಎಂದು ಬಣ್ಣಿಸಿದ್ದಾರೆ.
ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಡೀ ಭಾರತ ಕುತೂಹಲದಿಂದ ವೀಕ್ಷಿಸುತ್ತಿತ್ತು. ಈ ಬಾರಿ ಭಾರತದ ಮೂರು ಸಿನಿಮಾಗಳು ನಾಮಿನೇಟ್ ಆಗಿ ಹಲವು ವಿಭಾಗಗಳ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದವು. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಬೆಸ್ಟ್ ಓರಿಜನಲ್ ಸಾಂಗ್ ವಿಭಾಗದಲ್ಲಿ ಸ್ಪರ್ಧಿಸಿದ್ದರೆ, ಬೆಸ್ಟ್ ಡಾಕ್ಯುಮೆಂಟರಿ ವಿಭಾಗದಲ್ಲಿ ‘ಆಲ್ ದೆಟ್ ಬ್ರೆತ್ಸ್’ ಮತ್ತು ಬೆಸ್ಟ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಇತ್ತು.
ಆಸ್ಕರ್ ಪ್ರಶಸ್ತಿಯ ಟ್ರೋಫಿ ಜೊತೆ ನಗದು ಬಹುಮಾನ ಕೊಡದೇ ಇದ್ದರೂ, ಉಡುಗೊರೆಯ ರೂಪದಲ್ಲಿ ಅನೇಕ ವಸ್ತುಗಳು, ಪ್ರವಾಸ ಪ್ಯಾಕೇಜ್ ಗಳು ವಿಜೇತರಿಗೆ ಸಿಗುತ್ತವೆ. ಕೇವಲ ಪ್ರಶಸ್ತಿ ಗೆದ್ದವರಿಗೆ ಮಾತ್ರವಲ್ಲ, ನಾಮ ನಿರ್ದೇಶನಗೊಂಡವರಿಗೆ ಉಡುಗೊರೆ ಇರಲಿದೆ. ಈ ಬಾರಿ ಗಿಫ್ಟ್ ಬಾಕ್ಸ್ ನಲ್ಲಿ 1 ಲಕ್ಷ ಡಾಲರ್ ಮೌಲ್ಯದ ಉಡುಗೊರೆಗಳು ಇವೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಪೀಸೆಸ್ ಆಫ್ ಆಸ್ಟ್ರೇಲಿಯಾ ಹೆಸರಿನ ಕಂಪೆನಿಯೊಂದು ನಾಮ ನಿರ್ದೇಶನಗೊಂಡವರಿಗೆ ಆಸ್ಟ್ರೇಲಿಯಾದಲ್ಲಿ ಒಂದು ಚದರ ಮೀಟರ್ ಭೂಮಿ ಕೊಡಲು ಮುಂದಾಗಿದೆಯಂತೆ.