ಹಾಲಿವುಡ್ (Hollywood) ಖ್ಯಾತ ನಟಿ, ಆಸ್ಕರ್ (Oscar) ಪ್ರಶಸ್ತಿ ವಿಜೇತೆ ಹಾಲೆ ಬೆರ್ಯೆ (Halle Berry), ‘ನನಗೇನನಿಸುತ್ತೋ ಅದನ್ನೇ ಮಾಡುತ್ತೇನೆ’ ಎಂದು ಬೆತ್ತಲೆ ಫೋಟೋವನ್ನು (Nude Photo) ಶೇರ್ ಮಾಡಿದ್ದಾರೆ. ಈ ಫೋಟೋಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರೋರು ಹೀಗೆ ಮಾಡುವುದು ಸರಿನಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೋಲ್ಡ್ ಪಾತ್ರಗಳ ಮೂಲಕವೇ ಫೇಮಸ್ ಆಗಿರುವ ಹಾಲೆ ಬೆರ್ಯೆ, ಜೇಮ್ಸ್ ಬಾಂಡ್ ಸರಣಿಯ ಡೈ ಅನದರ್ ಡೇ ಚಿತ್ರದಲ್ಲಿ ನಟಿಸಿದ್ದಾರೆ. ಕ್ಯಾಟ್ ವುಮನ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಹಾಲೆ ನಟಿಸಿದ್ದಾರೆ. ಅತ್ಯುತ್ತಮ ನಟನೆಗಾಗಿ 2002ರಲ್ಲಿ ಆಸ್ಕರ್ ಪ್ರಶಸ್ತಿಯನ್ನೂ ಈ ನಟಿ ಪಡೆದುಕೊಂಡಿದ್ದಾರೆ.
i do what i wanna do. ???? pic.twitter.com/hDIkyfiy53
— Halle Berry (@halleberry) April 8, 2023
ಈ ಹಿಂದೆಯೂ ಹಾಲೆ ತಮ್ಮ ಬೆತ್ತಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಬಾರಿಯೂ ಬಾಲ್ಕನಿಯಲ್ಲಿ ಬೆತ್ತಲೆಯಾಗಿ ನಿಂತು, ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡಿರುವ ಫೋಟೋವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ‘ಅಂದುಕೊಂಡಿದ್ದನ್ನು ಮಾಡುತ್ತೇನೆ’ ಎಂಬ ಕ್ಯಾಪ್ಷನ್ ಬೇರೆ ಕೊಟ್ಟಿದ್ದಾರೆ.
ಈಗಲೂ ಹಾಲಿವುಡ್ ನಲ್ಲಿ ಉತ್ತಮ ಹೆಸರನ್ನು ಉಳಿಸಿಕೊಂಡಿರುವ ಮತ್ತು ದಿ ಮದರ್ ಶಿಪ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ಈ ನಟಿ ಬೆತ್ತಲೆ ಫೋಟೋ ಹಂಚಿಕೊಂಡಿದ್ದು ಕೆಲವರ ಇಷ್ಟವಾಗಿಲ್ಲ. ಹಾಗಾಗಿ ಹಾಲೆಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.