ಮೂವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎನ್ನುವ ಕಾರಣಕ್ಕಾಗಿ 62 ವರ್ಷದ ನಟ, ಆಸ್ಕರ್ ಪ್ರಶಸ್ತಿ ವಿಜೇತ ಕೆವಿನ್ ಸ್ಪೇಸಿ ವಿರುದ್ಧ ದೂರು ದಾಖಲಾಗಿದೆ. ಲಂಡನ್ ನ ಮೆಟ್ರೊಪಾಲಿಟಿನ್ ಪೊಲೀಸರು ಇವರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ : ಸಿನಿಮಾವಾಗಲಿದೆ ‘ಟೈಂಪಾಸ್’ ಬೆಡಗಿ ಪ್ರೋತಿಮಾ ಬೇಡಿ ಬಯೋಪಿಕ್
ಮೂವರು ಪುರುಷರಲ್ಲಿ ಇಬ್ಬರ ಮೇಲೆ ಕೇಲವ ಲೈಂಗಿಕ ದೌರ್ಜನ್ಯ ಎಸಗಿದ್ದರೆ, ಒಬ್ಬರ ಮೇಲೆ ಅತ್ಯಾಚಾರವನ್ನೂ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಅಲ್ಲದೇ ಸಾಕ್ಷಿಗಳನ್ನು ಕಲೆ ಹಾಕಿರುವ ತನಿಖಾಧಿಕಾರಿಗಳು ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎನ್ನುವ ಸುದ್ದಿಯೂ ಇದೆ. ಇದನ್ನೂ ಓದಿ : ವಾರಕ್ಕೆ ಹತ್ತತ್ತು ಸಿನಿಮಾಗಳು ರಿಲೀಸ್ : ಥಿಯೇಟರ್ ಮಾತ್ರ ಖಾಲಿ ಖಾಲಿ
ಈವರೆಗೂ ಕೆವಿನ್ ವಿರುದ್ಧ ನಾಲ್ಕು ಲೈಂಗಿಕ ಪ್ರಕರಣಗಳು ದಾಖಲಾಗಿದ್ದು, 2005ರಲ್ಲಿ ಲಂಡನ್ ನಲ್ಲಿ ಎರಡು ಪ್ರಕರಣ ಮತ್ತು 2008ರಲ್ಲಿ ಲಂಡನ್ ಹಾಗೂ ಮತ್ತೊಂದು ಪ್ರಕರಣವು ದಕ್ಷಿಣ ಇಂಗ್ಲೆಂಡ್ ನಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ, ಈ ನಟನ ವಿರುದ್ಧ ಮೀಟೂ ಆರೋಪ ಕೂಡ ಇದೆ. ಶೂಟಿಂಗ್ ವೇಳೆ ಸಹ ನಟಿಗೆ ಲೈಂಗಿಕ ಕಿರುಕುಳ ನೀಡಿದರು ಎಂದು ಮೀಟೂ ಆರೋಪ ಹೊರೆಸಲಾಗಿತ್ತು. ಇದನ್ನೂ ಓದಿ : ನಾಳೆ ಫಿಲ್ಮ್ ಚೇಂಬರ್ ಚುನಾವಣೆ: ಅಖಾಡಕ್ಕೆ ಇಳಿದ ದೊಡ್ಮನೆ ಕುಟುಂಬ
ಸದ್ಯ ಕೆವಿನ್ ನ್ಯೂಯಾರ್ಕ್ ನಲ್ಲಿದ್ದು, ಅವರು ಬ್ರಿಟನ್ ಗೆ ಬಂದ ನಂತರ ವಿಚಾರಣೆ ಮಾಡುವ ಸಾಧ್ಯತೆ ಇದೆ. ಇದೊಂದು ಗಂಭೀರ ಪ್ರಕರಣವಾಗಿದ್ದರಿಂದ ವಿಚಾರಣೆಗೆ ಹಾಜರಾಗುವ ಅನಿವಾರ್ಯತೆ ಕೆವಿನ್ ಗೆ ಎದುರಾಗಿದೆ. ಇದನ್ನೂ ಓದಿ: ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು
ಹೌಸ್ ಆಫ್ ಕಾರ್ಡ್ಸ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಇವರು, ಅಮೆರಿಕನ್ ಬ್ಯೂಟಿ, ದಿ ಯೂಶ್ಯುಲ್ ಸಸ್ಪೆಕ್ಟ್ ಸಿನಿಮಾಗಳಿಗಾಗಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸೂಪರ್ ಮ್ಯಾನ್ ರಿಟರ್ನ್ಸ್, ಎಲ್ ಎ ಕಾನ್ಫಿಡೆನ್ಶಿಯಲ್ ಇವರ ಜನಪ್ರಿಯ ಸಿನಿಮಾಗಳು.