ಜಗತ್ತಿನಾದ್ಯಂತ ಸದ್ಯ ಆಸ್ಕರ್ (Oscar) ಪ್ರಶಸ್ತಿಯ ಬಗ್ಗೆಯೇ ಮಾತನಾಡಲಾಗುತ್ತಿದೆ. ಭಾರತಿಯ ಕಾಲಮಾನದ ಪ್ರಕಾರ ಮಾರ್ಚ್ 13ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕಾಗಿ ಒಂದು ತಿಂಗಳಿಂದ ನಿರಂತರವಾಗಿ ಅಕಾಡೆಮಿಯು ಹಗಲಿರುಳು ಕೆಲಸ ಮಾಡುತ್ತಿದೆ. ಜಗತ್ತಿನ ಪ್ರಸಿದ್ಧ ಕಲಾವಿದರು ಮತ್ತು ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಪ್ರಶಸ್ತಿ ಕುರಿತಾಗಿ ಹಲವು ವಿಶೇಷ ಸಂಗತಿಗಳನ್ನು ಹುಡುಕಿ, ಆ ಕುರಿತು ಪ್ರಚಾರ ಮಾಡಲಾಗುತ್ತಿದೆ.
Advertisement
ಆಸ್ಕರ್ ಪ್ರಶಸ್ತಿ ಮೌಲ್ಯದ (Price) ಕುರಿತು ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಪ್ರಶಸ್ತಿಯನ್ನು ಪ್ರಶಸ್ತಿ ವಿಜೇತರು ಯಾರಾದರೂ ಮಾರಲು ಬಯಸಿದರೆ, ಅದು ಮೌಲ್ಯ ಕೇವಲ 82 ರೂಪಾಯಿಗಳು ಮಾತ್ರ. ನಿಜ. ಆಸ್ಕರ್ ಅಕಾಡೆಮಿಯೇ ಈ ಮೌಲ್ಯವನ್ನು ನಿರ್ಧಾರ ಮಾಡಿದೆ. ಅಲ್ಲದೇ, ಈ ಪ್ರಶಸ್ತಿಯನ್ನು ಬೇರೆಲ್ಲೂ ಮಾರುವಂತಿಲ್ಲ. ಮಾರುವುದಾದರೆ ಅದನ್ನು ಅಕಾಡೆಮಿ ವಾಪಸ್ಸು ಮಾರಬೇಕು. ಈ ಕಾರಣದಿಂದಾಗಿಯೇ ಅತೀ ಕಡಿಮೆ ಬೆಲೆಯನ್ನು ನಿಗದಿ ಮಾಡಿದೆ. ಈ ಪ್ರಶಸ್ತಿಯನ್ನೂ ಯಾರು ಮಾರಬಾರದು ಎನ್ನುವ ಉದ್ದೇಶವೂ ಇದರ ಹಿಂದಿದೆ. ಪ್ರಶಸ್ತಿ ನೀಡುವಾಗಲೇ ವಿಜೇತರು ಒಪ್ಪಂದಕ್ಕೆ ಸಹಿ ಕೂಡ ಮಾಡಬೇಕಾಗುತ್ತದೆ. ಇದನ್ನೂ ಓದಿ: ಧ್ವನಿಯಿಂದ ಎದುರಿಸಿದ ಟೀಕೆ ಬಗ್ಗೆ ಬಾಯ್ಬಿಟ್ಟ ರಾಣಿ ಮುಖರ್ಜಿ
Advertisement
Advertisement
ಮಾರಾಟದ ಬೆಲೆ 82 ರೂಪಾಯಿಗಳಾದರೆ, ಅದನ್ನು ತಯಾರಿಸುವ ವೆಚ್ಚ ಬರೋಬ್ಬರು 32,813 ರೂಪಾಯಿಗಳಾಗಿರುತ್ತದೆ. 13.5 ಇಂಚು ಎತ್ತರದ ಬಂಗಾರದ ಬಣ್ಣದ ಮೂರ್ತಿ ಇದಾಗಿದ್ದು, ತಲೆ ಮೇಲೆ ಕೂದಲು ಇಲ್ಲದ ವ್ಯಕ್ತಿಯೊಬ್ಬ ಕತ್ತಿಯೊಂದನ್ನು ಹಿಡಿದುಕೊಂಡು ನಿಂತಿರುವ ಮೂರ್ತಿ ಅದಾಗಿದೆ. ಪ್ರಶಸ್ತಿ ವಿಜೇತರಿಗೆ ಯಾವುದೇ ಗೌರವ ಮೊತ್ತವನ್ನು ನೀಡದೇ ಕೇವಲ ಈ ಮೂರ್ತಿಯನ್ನು ಮಾತ್ರ ನೀಡಲಾಗುತ್ತದೆ.
Advertisement
ಆಸ್ಕರ್ 2023 ಪ್ರಶಸ್ತಿ ಪ್ರದಾನ ಸಮಾರಂಭವು ಅಮೆರಿಕಾದ (America) ಲಾಸ್ ಏಂಜಲ್ಸ್ ಡಾಲ್ಬಿ ಥಿಯೇಟರ್ ನಲ್ಲಿ ನಡೆಯಲಿದ್ದು, ಭಾರತದಿಂದ ಒಂದು ಸಿನಿಮಾ ಮತ್ತು ಎರಡು ಡಾಕ್ಯುಮೆಂಟರಿಗಳು ಪ್ರಶಸ್ತಿಯ ಕಣದಲ್ಲಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈಗಾಲೇ ಆರ್.ಆರ್.ಆರ್ ಸಿನಿಮಾ ತಂಡ ಕಾರ್ಯಕ್ರಮ ನೀಡುವುದಕ್ಕಾಗಿ ಅಮೆರಿಕಾಗೆ ತೆರಳಿದೆ.