ರಾಮನಗರ: ತಾಯಿ ಆನೆಯನ್ನು ಕಳೆದುಕೊಂಡ ನೋವಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಆನೆ ಮರಿಯನ್ನು ಕನಕಪುರದ ಕೊಂಡನಗುಂದಿಗೆ ರೈತರು ರಕ್ಷಣೆ ಮಾಡಿದ್ದಾರೆ.
ಸಂಗಮ ವಲಯಾರಣ್ಯದ ಕುದುರೆ ಹಾದಿಯಲ್ಲಿ ಬರುವಾಗ ತಾಯಿಯಾನೆ ಕಾಲುಜಾರಿ ಸಾವನ್ನಪ್ಪಿತ್ತು. ಅನಾಥವಾದ ಮರಿ ಮೂರು ದಿನಗಳಿಂದ ಕಾಡಿನಲ್ಲಿ ಅಲೆದು ಅಲೆದು ಸುಸ್ತಾಗಿತ್ತು. ಇದನ್ನು ಹಸು ಮೇಯಿಸಲು ಹೋದವರು ಗಮನಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಗಣಪತಿ ಶೋಭಾಯಾತ್ರೆ ವೇಳೆ ರಾಷ್ಟ್ರೀಯ ಲಾಂಛನಕ್ಕೆ ಅಪಮಾನ
Advertisement
Advertisement
ತಾಯಿಗಾಗಿ ಕಣ್ಣೀರಿಟ್ಟು ನಿತ್ರಾಣ ಸ್ಥಿತಿಯಲ್ಲಿದ್ದ ಆನೆ ಮರಿಗೆ ಹಾಲು, ಆಹಾರ ನೀಡಿ ಮೈತೊಳೆದು ರಾತ್ರಿಯಿಡಿ ಆರೈಕೆ ಮಾಡಿದ್ದಾರೆ. ಸ್ವಲ್ಪ ಚೇತರಿಸಿಕೊಂಡ ಮೇಲೆ ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಆನೆ ಮರಿಗೆ ಮುತ್ತತ್ತಿ ಚೆಕ್ ಪೋಸ್ಟ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಮಕ್ಕಳಂತೆ ಚೆಲ್ಲಾಟವಾಡುತ್ತಾ ಕಾಲ ಕಳೆಯುತ್ತಿರುವ ಮರಿ ಆನೆಯನ್ನ ಕಂಡು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ. ಆನೆ ಮರಿ ಜತೆಗೆ ಆಟವಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ACB ರದ್ದು ತೀರ್ಪಿನ ಅನುಷ್ಠಾನ ಮಾಡಿ ಸರ್ಕಾರದಿಂದ ಆದೇಶ