Bengaluru CityKarnatakaLatestMain Post

ACB ರದ್ದು ತೀರ್ಪಿನ ಅನುಷ್ಠಾನ‌ ಮಾಡಿ ಸರ್ಕಾರದಿಂದ ಆದೇಶ

- ಎಸಿಬಿಗೆ ನೀಡಿದ್ದ ತನಿಖಾಧಿಕಾರ ವಾಪಸ್ ಪಡೆದ ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಎಸಿಬಿ (ACB) ರದ್ದು ಮಾಡಿ ತೀರ್ಪು ನೀಡಿದ್ದ ಹೈಕೋರ್ಟಿನ (High Court) ಆದೇಶದಂತೆ ಎಸಿಬಿ ರದ್ದನ್ನು ಅನುಷ್ಠಾನ ಮಾಡಿ ಸರ್ಕಾರದಿಂದ ಆದೇಶ ಹೊರಬಿದ್ದಿದೆ.

ಈ ಕುರಿತು ಇಂದು ಅನುಷ್ಠಾನ ಆದೇಶ ನೀಡಿದ ಸರ್ಕಾರ ಲೋಕಾಯುಕ್ತಕ್ಕೆ (Lokayukta) ಎಸಿಬಿಯ ಎಲ್ಲ ಪ್ರಕರಣಗಳೂ ವರ್ಗಾಯಿಸಿ ಆದೇಶ ಹೊರಡಿಸಿದ್ದು, ಎಸಿಬಿಗೆ ನೀಡಿದ್ದ ತನಿಖಾಧಿಕಾರವನ್ನು ಸರ್ಕಾರ ವಾಪಸ್ ಪಡೆದಿದೆ. ಆಗಸ್ಟ್ 11 ರಂದು ಎಸಿಬಿ ರದ್ದು ಮಾಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದೀಗ ಹೈಕೋರ್ಟಿನ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಈ ಮೂಲಕ ಇದೀಗ ಎಸಿಬಿ ಇತಿಹಾಸ ಪುಟ ಸೇರಿದೆ. ರಾಜ್ಯದಲ್ಲಿ ಆರು ವರ್ಷಕ್ಕೂ ಹೆಚ್ಚು ಕಾಲದಿಂದ ಎಸಿಬಿ ಕಾರ್ಯಚರಣೆ ಮಾಡುತ್ತಿತ್ತು. 2016ರ ಮಾರ್ಚ್ 19 ರಂದು ಎಸಿಬಿಯನ್ನು ಸಿದ್ದರಾಮಯ್ಯ (Siddaramaiah)  ಸರ್ಕಾರ ರಚಿಸಿತ್ತು. ಇದನ್ನೂ ಓದಿ: ಮಹಿಳೆಯೊಬ್ಬರ ಮಗುವನ್ನು ಮುಸ್ಲಿಂ ದಂಪತಿಗೆ ನೀಡಿದ್ದಕ್ಕೆ ಹಿಂದೂ ಸಂಘಟನೆಯಿಂದ ಪ್ರತಿಭಟನೆ – ಆಸ್ಪತ್ರೆ ಸೀಲ್

ಆದೇಶದಲ್ಲಿ ಏನಿದೆ?:
ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಭ್ರಷ್ಟಾಚಾರ ನಿಗ್ರಹ ರದ್ದುಗೊಳಿಸಿರುವ ಆದೇಶವನ್ನು ಅನುಷ್ಕಾನಗೊಳಿಸಲಾಗುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಗೊಳಿಸಿ, ಮಾನ್ಯ ಉಚ್ಚ ನ್ಯಾಯಾಲಯದಿಂದ ಹೊರಡಿಸಲಾದ ಆದೇಶದಿಂದಾಗಿ ಹೊರಹೊಮ್ಮಿರುವ ತತ್ಪರಿಣಾಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನೂ ಓದಿ: PSI ಅಕ್ರಮದಲ್ಲಿ ಸಚಿವರು, ಶಾಸಕರ ಕೈವಾಡ ಬಯಲಾಗಿರುವುದನ್ನು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ: ಕಾಂಗ್ರೆಸ್ ಪ್ರಶ್ನೆ

ಉಚ್ಚ ನ್ಯಾಯಾಲಯದ ಆದೇಶದನ್ವಯ ಸರ್ಕಾರದ ಅಧಿಸೂಚನೆ ಪ್ರಕಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಭ್ರಷ್ಟಾಚಾರ ತಡೆ ಅಧಿನಿಯಮ 1988ರ ಉಪಬಂಧಗಳಡಿ ನೀಡಲಾಗಿದ್ದ ತನಿಖಾಧಿಕಾರವನ್ನು ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಉಪಬಂಧ 2(ಎಸ್)ರನ್ವಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ, ಪೊಲೀಸ್ ಠಾಣಾಧಿಕಾರವನ್ನು ನೀಡಿ ಆದೇಶಿಸಿದ, ಸರ್ಕಾರದ ಅಧಿಸೂಚನೆಗಳನ್ನು ಪುನರುಜ್ಜೀವನಗೊಳಿಸಿ ಆದೇಶಿಸಿದೆ.

ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿರುವುದರಿಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನೀಡಲಾಗಿದ್ದ ತನಿಖಾಧಿಕಾರ, ಪೊಲೀಸ್ ಠಾಣೆಗಳೆಂದು ಘೋಷಿಸಿ ರಾಜ್ಯವ್ಯಾಪ್ತಿ ಅಧಿಕಾರ ನೀಡಿರುವ ಆದೇಶಗಳನ್ನು ಹಿಂಪಡೆದಿರುವುದರಿಂದ ಭಷ್ಟಾಚಾರ ನಿಗ್ರಹ ದಳದಲ್ಲಿ ಪ್ರಸ್ತುತ ಬಾಕಿಯಿರುವ ತನಿಖೆಗಳು, ವಿಚಾರಣೆಗಳು, ಇತರ ಶಿಸ್ತು ಪ್ರಕರಣಗಳು ಹಾಗೂ ಖಾಸಗಿ ದೂರುದಾರರ ಪ್ರಕರಣಗಳನ್ನು ಸಂಪೂರ್ಣವಾಗಿ ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸುವುದು ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Live Tv

Leave a Reply

Your email address will not be published.

Back to top button