ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ(SC-ST Reservation) ಹೆಚ್ಚಳಕ್ಕೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಇಂದು ನಡೆದ ಕ್ಯಾಬಿನೆಟ್(Cabinet) ನಲ್ಲಿ ಸುಗ್ರೀವಾಜ್ಞೆ(Ordinance) ಹೊರಡಿಸಲು ಒಪ್ಪಿಗೆ ನೀಡಿದೆ.
ಸಭೆ ಬಳಿಕ ಮಾತನಾಡಿದ ಮಾಧುಸ್ವಾಮಿ(Madhuswamy), ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಇನ್ನೆರಡು ದಿನಗಳಲ್ಲಿ ರಾಜ್ಯಪಾಲರ ಸಹಿಗೆ ಕಳಿಹಿಸುತ್ತೇವೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡನೆ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ದೀಪಾವಳಿಗೆ ಪ್ರಧಾನಿಯಿಂದ ಸಿಕ್ತು ಬಂಪರ್ ಆಫರ್- 75,000 ಯುವಕರಿಗೆ ಉದ್ಯೋಗ
Advertisement
ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಆದರೆ ಹೆಚ್ಚುವರಿ ಮೀಸಲಾತಿ ಎಲ್ಲಿಂದ ಕೊಡಲಾಗುತ್ತದೆ ಎಂಬುದಕ್ಕೆ ಸರ್ಕಾರ ಸ್ಪಷ್ಟವಾಗಿ ಹೇಳಿಲ್ಲ.
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಧುಸ್ವಾಮಿ ಮೀಸಲಾತಿಗೆ ಅರ್ಹವಾಗಿರುವ ಜಾತಿಗಳ ಸಂಖ್ಯೆ ಏರಿಕೆಯಾಗಿದೆ. ಪರಿಶಿಷ್ಟ ಜಾತಿಯಲ್ಲಿ 103 ಜಾತಿಗಳು ಆಗಿವೆ. ಪರಿಶಿಷ್ಟ ಪಂಗಡದಲ್ಲಿ 57 ಜಾತಿಗಳು ಆಗಿವೆ.ಮೀಸಲಾತಿ ಹೆಚ್ಚಳದ ಫಲ EWS (Economically weaker Section) ಮಾದರಿಯಲ್ಲಿ ಇರಲಿದೆ. ಆದರೆ ಅದಕ್ಕೆ ಸಂವಿಧಾನಾತ್ಮಕ ಇರಲಿದೆ. ನಾವು ಸುಗ್ರೀವಾಜ್ಞೆ ತರುವಾಗ ಸಂವಿಧಾನದ ಪ್ರಕಾರವೇ ಕ್ರಮ ಜರುಗಿಸುತ್ತೇವೆ. ಕೋರ್ಟ್ ನಲ್ಲೂ ನಮಗೆ ರಕ್ಷಣೆ ಸಿಗುವ ವಿಶ್ವಾಸವಿದೆ. ಸಮುದಾಯಗಳ ಹೆಚ್ಚಳವೇ ನಮ್ಮ ಪ್ರಯತ್ನಕ್ಕೆ ಪೂರಕ ಆಗಲಿದೆ ಎಂದರು. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?
Advertisement
ಚುನಾವಣೆ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ. ಆದರೆ 9ನೇ ಶೆಡ್ಯೂಲ್ಡ್‌ಗೆ ತಿದ್ದುಪಡಿ ತರದೇ ಮೀಸಲಾತಿ ಹೆಚ್ಚಳ ಸಾಧ್ಯವೇ ಎಂಬ ಪ್ರಶ್ನೆ ಶುರುವಾಗಿದೆ.