ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಅವರು ತಾಯಿ, ಸ್ನೇಹಿತರ ಹೆಸರಲ್ಲಿ ಇಟ್ಟಿದ್ದ 75 ಕೋಟಿ ಬೇನಾಮಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು. ಆ ದಾಖಲೆಗಳನ್ನ ತೋರಿಸಿ ಡಿ.ಕೆ.ಶಿವಕುಮಾರ್ ತನಿಖೆಯಿಂದ ರಿಯಾಯಿತಿ ಪಡೆದುಕೊಳ್ಳಲು ಮುಂದಾಗಿದ್ದರು. ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸಹಾಯ ಮಾಡಲಿಲ್ಲ. ಈ ವೇಳೆ ಲಭ್ಯವಾಗಿರುವ ಕೆಲ ದಾಖಲೆಗಳ ಲಾಭ ಪಡೆಯಲು ಸಚಿವರು ಮುಂದಾಗಿದ್ದರು. ಕಾನೂನು ಪ್ರಕಾರವಾಗಿ ಯಾವ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ಬಾಲಕೃಷ್ಣನ್ ತಿಳಿಸಿದರು.
Advertisement
Advertisement
Advertisement
ಡೈರಿ ಆರೋಪ ಠುಸ್: ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 1800 ಕೋಟಿ ಕಪ್ಪ ಡೈರಿ ಆರೋಪ ಠುಸ್ ಆಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಡೈರಿ ನಕಲಿ ಅಂತ ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ಸ್ಟಷ್ಟಪಡಿಸಿದ್ದಾರೆ.
Advertisement
ಒಂದು ಐಟಿ ದಾಳಿಯಲ್ಲಿ ದಾಖಲಾತಿಗಳು ಸಿಕ್ಕಿದ್ದವು. ಅದನ್ನು ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ವಿ. ಅದು ಫೋಟೋ ಕಾಫಿಗಳಾಗಿ ಇದ್ದಿದರಿಂದ ಸತ್ಯಾಂಶ ಬೆಳಕಿಗೆ ಬರಲಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಅದೊಂದು ಸುಳ್ಳು ದಾಖಲೆ. ಆದ್ರೆ, ನಿನ್ನೆ ಬಿಡುಗಡೆ ಮಾಡಿದ ಕೆಲ ದಾಖಲೆಗಳು ಫೋರ್ಜರಿ. ಮೊದಲ ಪೇಜ್ ಏನಿತ್ತು. ಅದು ನಾವು ಸೀಜ್ ಮಾಡಿದಾಗ ಸಿಕ್ಕಲೇ ಇಲ್ಲ. ಹಣದ ಬಗ್ಗೆ ಬರೆದಿರೋ ಪೇಜ್ ಶುದ್ಧ ಸುಳ್ಳು ಎಂದು ಬಾಲಕೃಷ್ಣನ್ ಎಂದು ತಿಳಿಸಿದ್ದಾರೆ.