ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮೂವರನ್ನು ಬಲಿಪಡೆದ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಆದೇಶ ನೀಡಲಾಗಿದೆ. ಇದರೊಂದಿಗೆ ಇನ್ನೂ ಎರಡು ಕಾಡಾನೆಗಳ (Wild Elephant) ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇಂದಿನಿಂದಲೇ ಒಂಟಿ ಸಲಗ ಸೇರಿದಂತೆ 2 ಕಾಡಾನೆ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ನಿರಂತರ ಕಾಡಾನೆ ದಾಳಿಯಿಂದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ಜನರು ತತ್ತರಿಸಿ ಹೋಗಿದ್ದರು. ಜನರ ಆಕ್ರೋಶ, ಪ್ರತಿಭಟನೆ ಹಿನ್ನೆಲೆ ಆನೆ ಸೆರೆಹಿಡಿಯಲು ಆದೇಶ ನೀಡಲಾಗಿದೆ. ಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರಿಂಗ್ (Radio Collaring) ಅಳವಡಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Advertisement
Advertisement
ಕಾಡಾನೆಗಳನ್ನು ಸೆರೆಹಿಡಿದ ಬಳಿಕ ಭದ್ರಾ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಸಾಕಾನೆಗಳ ಮೂಲಕ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಳೆದ 2 ತಿಂಗಳಲ್ಲಿ ಆನೆ ದಾಳಿಗೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 2 ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
Advertisement