-ಒತ್ತುವರಿ ತೆರವು ಮಾಡಿ, ಪ್ರಕರಣ ದಾಖಲಿಸಲು ಆದೇಶ
ಕೊಪ್ಪಳ: ತುಂಗಭದ್ರಾ ನದಿ ಪಾತ್ರ ಮತ್ತು ಸರ್ಕಾರಿ ಭೂಮಿ ಒತ್ತುವರಿ ಮಾಡಿದ ಕೊಪ್ಪಳ ತಾಲೂಕಿನ ವ್ಯಾಪ್ತಿಯ 2 ರೆಸಾರ್ಟ್‌ಗೆ ಮತ್ತೆ ಕುತ್ತು ಬಂದಿದೆ. ತಪ್ಪಿತಸ್ಥ ರೆಸಾರ್ಟ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಸೂಚಿನೆ ನೀಡಿದ್ದಾರೆ.
Advertisement
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಆದೇಶಕ್ಕೆ ತಾವೇ ತಡೆ ನೀಡಿದ್ದ ಕೊಪ್ಪಳ (Koppal) ಜಿಲ್ಲಾಧಿಕಾರಿ ನಲಿನ್ ಅತುಲ್ (Nalin Atul) ಅವರಿಗೆ ಪ್ರಾದೇಶಿಕ ಆಯುಕ್ತರ ಆದೇಶದಿಂದ ಮುಖ ಭಂಗವಾಗಿದೆ.ಇದನ್ನೂ ಓದಿ: ದಿನ ಭವಿಷ್ಯ: 28-11-2024
Advertisement
Advertisement
ಕೊಪ್ಪಳ ತಾಲೂಕಿನ ನಾರಾಯಣಪೇಟೆ ಮತ್ತು ರಾಜಾರಾಮಪೇಟೆ ಗ್ರಾಮ ವ್ಯಾಪ್ತಿಯ 3 ರೆಸಾರ್ಟ್‌ನ ಒತ್ತುವರಿ ತೆರವು ಮಾಡುವಂತೆ ಕಲಬುರಗಿ (Kalaburagi) ಪ್ರಾದೇಶಿಕ ಆಯುಕ್ತರು ಕೊಪ್ಪಳ ಜಿಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಹಂಪಿ ಫೆದರ್ಸ, ಹಂಪಿ ವಿಸ್ಕರ್ಸ್ ಹಾಗೂ ಹಂಪಿ ಬೌಲ್ಡರ್ಸ್ ಹೆಸರಿನ ರೆಸಾರ್ಟ್‌ಗಳು ನದಿ ಪಾತ್ರದಲ್ಲಿ ಒತ್ತುವರಿ ಮಾಡಿವೆ ಎಂದು ಪ್ರಾದೇಶಿಕ ಆಯುಕ್ತರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
Advertisement
ಬೆಂಗಳೂರಿನ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಸೂಚನೆಯಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ, ವರದಿ ಪಡೆದುಕೊಂಡು ಆದೇಶ ನೀಡಿದ್ದಾರೆ. ಸ್ವತಃ ಕೊಪ್ಪಳ ಜಿಲ್ಲಾಧಿಕಾರಿಗಳ ವಿರುದ್ಧವೇ ಆರೋಪ ಕೇಳಿ ಬಂದಿದ್ದ ಹಿನ್ನೆಲೆ ವಿಜಯನಗರ ಜಿಲ್ಲೆಯ ಅಧಿಕಾರಿಗಳ ತಂಡ ರಚಿಸಿ, ಸ್ಥಳ ಪರಿಶೀಲನೆ ಮಾಡಿಸಿದ್ದು ಪ್ರಕರಣದ ಮತ್ತೊಂದು ವಿಶೇಷವಾಗಿದೆ.
ಏನಿದು ಪ್ರಕರಣ?
ಕೊಪ್ಪಳ ತಾಲೂಕಿನ ನಾರಾಯಣಪೇಟೆ ಮತ್ತು ರಾಜಾರಾಮಪೇಟೆ ಗ್ರಾಮ ವ್ಯಾಪ್ತಿಯಲ್ಲಿ ಕೆಲ ರೆಸಾರ್ಟ್‌ಗಳು ನದಿಪಾತ್ರ ಮತ್ತು ಸರಕಾರಿ ಭೂಮಿ ಒತ್ತುವರಿ ಮಾಡಿದ್ದಾಗಿ ಸಾಮಾಜಿಕ ಹೋರಾಟಗಾರರೊಬ್ಬರು ಕೊಪ್ಪಳ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಈ ಹಿಂದಿನ ಡಿಸಿ ಎಂ.ಸುಂದರೇಶ ಬಾಬು, ವರದಿ ನೀಡಲು ಕಂದಾಯ ಇಲಾಖೆ ಅಧಿಕಾರಿಗಳ ತಂಡ ರಚಿಸಿದ್ದರು. ಈ ಅಧಿಕಾರಿಗಳು ನೀಡಿದ ವರದಿ ಆಧರಿಸಿ, ಈಗಿನ ಕೊಪ್ಪಳ ಡಿಸಿ ನಲಿನ್ ಅತುಲ್, ರೆಸಾರ್ಟ್ ತೆರವು ಮಾಡುವಂತೆ ಆದೇಶ ಮಾಡಿದ್ದರು. ಆದರೆ, ಏಕಾಏಕಿ ತಾವು ಮಾಡಿದ ಆದೇಶಕ್ಕೆ ತಾವೇ ತಡೆ ನೀಡಿ, ರೆಸಾರ್ಟ್ ತೆರವು ಕಾರ್ಯಾಚರಣೆ ರದ್ದು ಮಾಡಿದ್ದರು.
ಇದರಿಂದ ದೂರುದಾರ ಬೆಂಗಳೂರಿನ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮತ್ತು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಕೊಪ್ಪಳ ಜಿಲ್ಲಾಧಿಕಾರಿ ವಿರುದ್ಧವೇ ದೂರು ನೀಡಲಾಗಿತ್ತು. ಈ ಹಿನ್ನೆಲೆ ಕಲಬುರಗಿ ಪ್ರಾದೇಶಿಕ ಆಯುಕ್ತರು, ಹೊಸಪೇಟೆ ಉಪ ವಿಭಾಗಧಿಕಾರಿ ನೋಗ್ಜಾಯ ಮೋಹ್ಮದ್ ಅಲಿ ಅಕ್ರಮ, ವಿಜಯನಗರ ಜಿಲ್ಲಾಧಿಕಾರಿ ಕಚೇರಿಯ ಪದನಿಮಿತ್ತ ಡಿಡಿಎಲ್‌ಆರ್ ಮಂಜುನಾಥ ಧಾವನೆ, ಹಿಟ್ನಾಳ ಆರ್‌ಐ ಬಸವರಾಜ, ವಿಎ ಸಾವಿತ್ರಿ ಹಾಗೂ ಕೊಪ್ಪಳ ಎಡಿಎಲ್‌ಆರ್ ರವಿಚಂದ್ರನ್ ಅವರ ತಂಡ ರಚಿಸಿ, ವರದಿ ಪಡೆದಿದ್ದಾರೆ. ವರದಿ ಆಧರಿಸಿ ಆದೇಶ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ?
ಕೊಪ್ಪಳ ತಾಲೂಕಿನ ನಾರಾಯಣಪೇಟೆ ಗ್ರಾಮ ವ್ಯಾಪ್ತಿಯಲ್ಲಿ ಹಂಪಿ ವಿಸ್ಕರ್ಸ 14 ಗುಂಟೆ ನದಿ ಪಾತ್ರದ ಜಮೀನು, ಸರ್ವೇ ನಂ.7 ರಲ್ಲಿ 20 ಗುಂಟೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಿದೆ. ಹಂಪಿ ಬೌಲ್ಡರ್ಸ್ ರೆಸಾರ್ಟ್ ಸರ್ವೇ ನಂ. 7ರಲ್ಲಿ 15 ಗುಂಟೆ, ನದಿ ಪಾತ್ರದ 9 ಗುಂಟೆ ಜಮೀನು ಒತ್ತುವರಿ ಮಾಡಿದೆ. ರಾಜಾರಾಮಪೇಟೆ ಗ್ರಾಮ ವ್ಯಾಪ್ತಿಯಲ್ಲಿ ಹಂಪಿ ಫೆದರ್ಸ ರೆಸಾರ್ಟ್ ಸರ್ವೇ ನಂ.19/1ರ ಆಕಾರ ಬಂದ್ ಪ್ರಕಾರ 1.21 ಎಕರೆ ಜಮೀನಿಗೆ ತಂತಿ ಬೇಲಿ ಹಾಕಿ ಒತ್ತುವರಿ ಮಾಡಿರುತ್ತಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಆದೇಶದಂತೆ ತನಿಖೆ ಮಾಡಲಾಗಿದ್ದು, ನ್ಯಾಯಾಲಯದ ಆದೇಶದಂತೆ ಜಮೀನು ಅತೀಕ್ರಮಣ ಮಾಡಿರುವ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲೇ ಹೊಸದಾಗಿ ಪ್ರಕರಣ ದಾಖಲಿಸಲು ನಿರ್ದೇಶಿಸಿರುತ್ತಾರೆ.
ಒತ್ತುವರಿ ತೆರವು ಟಾಸ್ಕ್ ಪೋರ್ಸ್ ಕಮಿಟಿಯ ಅಧ್ಯಕ್ಷರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಆಗಿರುತ್ತಾರೆ. ಇದರಿಂದ ನಿಮ್ಮ ವ್ಯಾಪ್ತಿಯ ಒತ್ತುವರಿ ಜಮೀನನ್ನು ನಿಯಮಾನುಸಾರ ತೆರವುಗೊಳಿಸಿ, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಜೊತೆಗೆ ಕೈಗೊಂಡ ಕ್ರಮದ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು ಎಂದು ಅ.29 ರಂದು ಹೊರಡಿಸಿದ ಆದೇಶದಲ್ಲಿ ಸೂಚಿಸಿದ್ದಾರೆ.ಇದನ್ನೂ ಓದಿ: ಜನವರಿ ಅಂತ್ಯದೊಳಗೆ ಶಿವಮೊಗ್ಗ ಏರ್‌ಪೋರ್ಟ್‌ಗೆ ರಾತ್ರಿ ಲ್ಯಾಂಡಿಂಗ್ ಸೌಲಭ್ಯ: ಮಧು ಬಂಗಾರಪ್ಪ