ಹಾವೇರಿ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಡಿ ನೋಟರೀಸ್ ಅಮೆಂಡ್ಮೆಂಟ್ ಬಿಲ್ 2020 ವಿರೋಧಿಸಿ, ನೋಟರಿ ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಆಗ್ರಹಿಸಿ ಹಾವೇರಿ ಜಿಲ್ಲಾ ನೋಟರಿ ಸಂಘದವತಿಯಿಂದ ಪದಾಧಿಕಾರಿಗಳು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕ ಪ್ರಧಾನಮಂತ್ರಿಗಳಿಗೆ, ಕಾನೂನು ಸಚಿವರಿಗೆ ಹಾಗೂ ಈ ಕೇಂದ್ರ ಕಾನೂನು ಕಾರ್ಯದರ್ಶಿಗಳಿಗೆ ಮನವಿ ಅರ್ಪಿಸಿದ್ದಾರೆ.
Advertisement
ಈ ಕುರಿತು ಮಾತನಾಡಿದ ಪದಾಧಿಕಾರಿಗಳು, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಡಿ ನೋಟ್ರೀಸ್ ಅಮೆಂಡ್ಮೆಂಟ್ ಬಿಲ್ 2021 ಈ ನೀತಿ ಮಾರಕವಾದ ತಿದ್ದುಪಡಿಯಿಂದ ನೋಟರಿ ಬೀದಿಗೆ ಬರುವ ವ್ಯವಸ್ಥೆ ಉಲ್ಬಣಗೊಳ್ಳುತ್ತಿದೆ. ನೋಟರಿ ಉದ್ಯೋಗ ಕಿತ್ತುಕೊಳ್ಳುವ ಕೆಲಸಕ್ಕೆ ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ. ನೋಟರಿಯವರ ಕಾರ್ಯ ಸಮಾಜಕ್ಕೆ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ಅರಿತು 1952ರಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕರೀನಾ, ಅಮೃತಾ ಅರೋರಾಗೆ ಕೊರೊನಾ ಪಾಸಿಟಿವ್
Advertisement
ಹತ್ತು ವರ್ಷ ವಕೀಲರ ವೃತ್ತಿಯಲ್ಲಿ ಕೆಲಸ ಮಾಡಿ ನೋಟರಿಯಾಗಲು ಅರ್ಹರಾಗಿರುತ್ತಾರೆ. ನಂತರ ಅಂತವರನ್ನು ನೋಟರಿಯನ್ನಾಗಿ ಸರ್ಕಾರ ನೇಮಕ ಮಾಡುತ್ತದೆ. ಆದರೆ ಪ್ರಸ್ತುತ ನೋಟರಿಸ್ ಕಲಂ ತಿದ್ದುಪಡಿಯನ್ನು ತರಲಾಗಿದೆ. ಇದರಿಂದ ನೋಟರಿಗಳಿಗೆ ತೊಂದರೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ವೃತ್ತಿಯಲ್ಲಿರುವ ವಕೀಲರ ಉಪಜೀವನಕ್ಕೆ ಈ ತಿದ್ದುಪಡಿಯಿಂದ ತೀವ್ರ ತೊಂದರೆಯಾಗುತ್ತದೆ. ನೋಟರಿ ಕಾಯ್ದೆ ತಿದ್ದುಪಡಿಯಲ್ಲಿ 15 ವರ್ಷ ನೋಟರಿಯಾಗಿ ಸೇವೆ ಪೂರೈಸಿದವರ ನೋಟರಿ ವೃತ್ತಿಗೆ ನಿರ್ಬಂಧ ಹೇರಲಾಗಿದೆ. ಇದರಿಂದ ನೂರಾರು ನೋಟರಿಗಳು ಹಾಗೂ ಅವರ ಕುಟುಂಬಗಳು ಬೀದಿಗೆ ಬರುವಂತಾಗುತ್ತದೆ. ಕೂಡಲೇ ಈ ತಿದ್ದುಪಡಿ ವಿಚಾರವನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಸರ್ಕಾರವೂ ಹೊಸ ಅವಕಾಶಗಳನ್ನು ಸೃಷ್ಠಿ ಮಾಡಬೇಕೆ ವಿನಃ ಬೇರೆಯವರಿಂದ ಅವಕಾಶ ಕಿತ್ತುಕೊಂಡು ಇನ್ನೊಬ್ಬರಿಗೆ ನೀಡುವುದು ಯಾವ ನ್ಯಾಯ? ಈ ದೆಸೆಯಲ್ಲಿ ಕೇಂದ್ರ ಸಚಿವರು, ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಡಿ ನೋಟ್ರೀಸ್ ಅಮೆಂಡ್ಮೆಂಟ್ ಬಿಲ್ 2021ನ್ನು ಕೈಬಿಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದರು. ಇದನ್ನೂ ಓದಿ: ಪೊಲೀಸ್ ಬಸ್ ಮೇಲೆ ಭಯೋತ್ಪಾದಕರ ದಾಳಿ – ಮೂವರು ಹುತಾತ್ಮ, 14 ಜನರಿಗೆ ಗಾಯ
ಮನವಿ ಅರ್ಪಿಸುವ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ನೋಟರಿಗಳ ಸಂಘದ ಕಾರ್ಯದರ್ಶಿ ಜಿ.ಕೆ.ಕಮ್ಮಾರ, ನೋಟರಿ ಹಾಗೂ ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಉಪಾಧ್ಯಕ್ಷ ಎಮ್.ಸಿ.ನಡುವಿನಮಠ, ಹಾಗೂ ಸಿ.ಆರ್.ಕಿತ್ತೂರಮಠ, ಪಿ.ಎಸ್.ಹಿತ್ತಲಮನಿ, ಎಮ್.ಎಚ್.ನದಾಫ, ಎಸ್.ಎಫ್.ವಡ್ನಕೊಪ್ಪ, ಎಮ್.ಎಲ್.ಸೊನ್ನದ, ಕೆ.ಸಿ.ರಜಪೂತ, ಎಮ್.ಸಿ.ಮರಡಿ ಸೇರಿದಂತೆ ಜಿಲ್ಲೆಯ ಎಲ್ಲ ನೋಟರಿಗಳು ಹಾಜರಿದ್ದರು.