ನವದೆಹಲಿ: ನೂತನ ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅನಾವರಣ ಮಾಡಿರುವ ಕಂಚಿನ ಬೃಹತ್ ರಾಷ್ಟ್ರೀಯ ಲಾಂಛನದ ಸ್ವರೂಪದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತದೆ.
Advertisement
ಸಾರನಾಥದ ಅಶೋಕ ಸ್ತಂಭದಲ್ಲಿರುವಂತೆ ಸೌಮ್ಯ ಸ್ವಭಾವದ ಸಿಂಹದ ಬದಲು ಇಲ್ಲಿ ಆಕ್ರಮಣಕಾರಿ, ಘರ್ಜಿಸುತ್ತಿರುವ, ಕೋರೆಹಲ್ಲುಗಳು ಪ್ರಮುಖವಾಗಿ ಕಾಣುವ ಸಿಂಹದ ಮುಖವನ್ನು ರೂಪಿಸಲಾಗಿದೆ. ಇದು ರಾಷ್ಟ್ರೀಯ ಲಾಂಛನಕ್ಕೆ ಮಾಡಿದ ಅವಮಾನ ಎಂದು ಹಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: “ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ
Advertisement
मूल कृति के चेहरे पर सौम्यता का भाव तथा अमृत काल में बनी मूल कृति की नक़ल के चेहरे पर इंसान, पुरखों और देश का सबकुछ निगल जाने की आदमखोर प्रवृति का भाव मौजूद है।
हर प्रतीक चिन्ह इंसान की आंतरिक सोच को प्रदर्शित करता है। इंसान प्रतीकों से आमजन को दर्शाता है कि उसकी फितरत क्या है। pic.twitter.com/EaUzez104N
— Rashtriya Janata Dal (@RJDforIndia) July 11, 2022
Advertisement
ಕಾಂಗ್ರೆಸ್, ಟಿಎಂಸಿ, ಎಂಐಎಂ ಸೇರಿ ಹಲವು ಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ. ಇದು ಮೋದಿ ಭಾರತದ ಎಫೆಕ್ಟ್ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಸಂಸತ್ ಭವನದ ಮೇಲೆ ರಾಷ್ಟ್ರೀಯ ಲಾಂಛನದ ಅನಾವರಣ ಸಂವಿಧಾನ ವಿರೋಧಿ ಕೆಲಸ ಎಂದು ವಿಪಕ್ಷಗಳು ಅಭಿಪ್ರಾಯ ವ್ಯಕ್ತಪಡಿಸಿವೆ.
Advertisement
From Gandhi to Godse; From our national emblem with lions sitting majestically & peacefully; to the new national emblem unveiled for the top of the new Parliament building under construction at Central Vista; Angry lions with bared fangs.
This is Modi’s new India! pic.twitter.com/cWAduxPlWR
— Prashant Bhushan (@pbhushan1) July 12, 2022
ಭಾರತದ ಸಂವಿಧಾನ ನಮ್ಮ ಪ್ರಜಾಪ್ರಭುತ್ವದ ಮೂರು ವ್ಯವಸ್ಥೆಗಳನ್ನು ಸ್ಪಷ್ಟವಾಗಿ ಬೇರೆ ಮಾಡಿ ತೋರಿಸಿದೆ. ಆದರೆ ಶಾಸಕಾಂಗದ ಭಾಗವಾಗಿರುವ ಪ್ರಧಾನಿ ಹೀಗೆ ಮಾಡಬಾರದಿತ್ತು. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಸಿಪಿಎಂ ನೇತಾರ ಸೀತಾರಾಂ ಯೆಚೂರಿ, ಎಂಐಎಂನ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ ಮಾತ್ರ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ವಿಪಕ್ಷದವರು ವಿರೋಧ ಮಾಡಬೇಕು ಅಂತಾ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದಿದೆ. ಇದನ್ನೂ ಓದಿ: ಅನ್ನ ಹಾಕಿದ ಮನೆಗೆ ದ್ರೋಹ ಬಗೆದ – ಪ್ರೇಯಸಿಗಾಗಿ ಮಾಲೀಕರಿಗೆ ಉಂಡೆ ನಾಮ ಹಾಕಿದ ಖದೀಮ
ಈ ಎಲ್ಲಾ ಟೀಕೆಗಳ ಮಧ್ಯೆ ವಿನ್ಯಾಸಕಾರರಾದ ಸುನೀಲ್ ದಿಯೋರಾ-ರೋಮಿಯೆಲ್ ಮೋಸೆಸ್ ಸ್ಪಷ್ಟನೆ ನೀಡಿದ್ದು, ರಾಷ್ಟ್ರೀಯ ಲಾಂಛನದ ಸಿಂಹಗಳಲ್ಲಿ ಬದಲಾವಣೆ ಮಾಡಿಲ್ಲ, ಹಿಂದಿನಂತೆಯೇ ಇವೆ. ಸಣ್ಣ ವ್ಯತ್ಯಾಸಗಳು ಆಗಿರಬಹುದಷ್ಟೇ. ಇದು ಬೃಹತ್ ಆಕಾರದಲ್ಲಿದ್ದು, ಕೆಳಭಾಗದಿಂದ ನೋಡಿದಾಗ ಮಾತ್ರ ಅದು ಆಕ್ರಮಣಕಾರಿಯಾಗಿ ಕಾಣುತ್ತಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.