ಬೆಂಗಳೂರು: ಪ್ರೇಯಸಿಯನ್ನು ಪಡೆಯಬೇಕೆಂಬ ವ್ಯಾಮೋಹಕ್ಕೆ ಸ್ನೇಹಿತರ ಮಾತು ಕೇಳಿ ಮಾಲೀಕರ ಮನೆಯಲ್ಲಿದ್ದ ಚಿನ್ನಾಭರಣವನ್ನು ಕದ್ದು ವ್ಯಕ್ತಿಯೋರ್ವ ಜೈಲು ಪಾಲಾಗಿದ್ದಾನೆ.
ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಲು ಅಂಕಲ್ ಒಬ್ಬ, ಸ್ನೇಹಿತರಿಬ್ಬರ ಮಾತು ಕೇಳಿ ಆಸರೆಕೊಟ್ಟು ಅನ್ನ ಹಾಕುತ್ತಿದ ಮನೆ ಮಾಲೀಕರಿಗೆ ಉಂಡೆನಾಮ ಹಾಕಲು ಹೋಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್‌ಗೆ ಹಾರಿದ ಗೊಟಬಯ ರಾಜಪೆಕ್ಸೆ
Advertisement
Advertisement
ಹೌದು ಆರೋಪಿ ರಾಜೇಶ್ ಯಾಲಕ್ಕಿ ಕುಮಾರಸ್ವಾಮಿ ಲೇಔಟ್‍ನಲ್ಲಿ ರಾಜೇಶ್ವರಿ ಅವರ ಮನೆಯಲ್ಲಿ ಕೆಲಸಮಾಡಿಕೊಂಡಿದ್ದನು. ಎಂಟು ವರ್ಷದಿಂದ ಆರೋಪಿ ರಾಜೇಶ್ ಅನ್ನು ಹತ್ತಿರದಿಂದ ನೋಡಿದ್ದ ಮನೆ ಮಾಲೀಕರು ಒಳ್ಳೆಯವನು ಎಂಬ ಕಾರಣಕ್ಕೆ ಮನೆಯಲ್ಲಿಯೇ ಜಾಗಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದರು. ಆರೋಪಿ ರಾಜೇಶ್‍ಗೆ ಈಗಾಗಲೇ ಮದುವೆ ಆಗಿತ್ತು. ಆದರೂ ಅಮೂಲ್ಯ ಎಂಬ ಯುವತಿಯ ಪ್ರೀತಿಯ ಬಲೆಗೆ ಬಿದ್ದಿದ್ದನು.
Advertisement
Advertisement
ಆರೋಪಿ ರಾಜೇಶ್ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಸ್ನೇಹಿತರಾದ ಪರಮೇಶ್ವರ್ ಹಾಗೂ ಮೇಘನಾ ಬಳಿ ಹೇಳಿಕೊಂಡಿದ್ದ. ಹೀಗಾಗಿ ಆರೋಪಿಯ ವೀಕ್ನೆಸ್ ತಿಳಿದುಕೊಂಡ ಸ್ನೇಹಿತರು ನಿನಗೆ ಅಮೂಲ್ಯ ಜೊತೆಗೆ ಮದುವೆ ಮಾಡಿಸುತ್ತೇವೆ. ಮನೆ ಮಾಲೀಕರ ಮನೆಯಲ್ಲಿರುವ ಒಡವೆಗಳನ್ನು ತಂದುಕೊಡು ಎಂದು ಹೇಳಿದ್ದರು. ಇದನ್ನೂ ಓದಿ: ಕೃಷ್ಣೆಯಿಂದ ಬಸವಸಾಗರ ಡ್ಯಾಮ್‍ಗೆ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಯಾದಗಿರಿಯಲ್ಲಿ ಮುಳುಗಡೆ ಭೀತಿ
ಹೀಗಾಗಿ ಪ್ರೇಯಸಿ ಅಮೂಲ್ಯಳನ್ನು ಪಡೆದೆ ತಿರಬೇಕು ಎಂಬ ಗುಂಗಲ್ಲಿ ರಾಜೇಶ್, ಸ್ನೇಹಿತರ ತಾಳಕ್ಕೆ ತಕ್ಕಂತೆ ಕುಣಿದು, ಮಾಲೀಕರ ಮನೆಯಲ್ಲಿರುವ ಚಿನ್ನಾಭರಣವನ್ನು ಒಂದೋದಾಗಿ ಎಗ್ಗರಿಸಿದ್ದಾನೆ. ನಂತರ ಮನೆಯಲ್ಲಿ ಕಾರ್ಯಕ್ರಮ ಇದ್ದ ಕಾರಣ ಚಿನ್ನಭರಣ ಧರಿಸಲು ನೋಡಿದಾಗ ಒಡವೆ ಕಳ್ಳತನ ಆಗಿರುವುದು ಮಾಲೀಕರಿಗೆ ತಿಳಿದುಬಂದಿದೆ. ಕಳ್ಳ ರಾಜೇಶ್ ನನ್ನ ವಿಚಾರಿಸಿದಾಗ ಆರೋಪಿ ರಾಜೇಶ್ ನ ಮತ್ತೊಂದು ಮುಖವಾಡ ಬಯಲಾಗಿದೆ.