– ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆಂಧ್ರ, ತಮಿಳುನಾಡು ವರೆಗೂ ವ್ಯಾಪಿಸಿದೆ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲು ಮುಖ್ಯಮಂತ್ರಿಗಳು (Chief Minister), ಆಮೇಲೆ ಸಂಬಂಧಪಟ್ಟ ಇಲಾಖೆ ಸಚಿವರು ರಾಜೀನಾಮೆ ನೀಡಬೇಕು. ಜೂನ್ 6ರ ಒಳಗೆ ರಾಜೀನಾಮೆ ಕೊಡದಿದ್ದರೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R Ashoka) ಗಡುವು ನೀಡಿದ್ದಾರೆ.
ಬಿಜೆಪಿ (BJP) ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ (Siddaramaiah) ಹಲವು ಪ್ರಶ್ನೆಗಳನ್ನು ಹಾಕಿದ್ರು. ಎಫ್ಐಆರ್ ನಲ್ಲಿ (FIR) ಮಂತ್ರಿಯ ಹೆಸರು ಯಾಕಿಲ್ಲ? ಹಣ ಗುಳುಂ ಮಾಡಿದ್ದ ಅಧಿಕಾರಿಗಳನ್ನ ಏಕೆ ಬಂಧಿಸಿಲ್ಲ? ಅವರನ್ನು ಬಂಧಿಸಿದ್ರೆ ನಿಮ್ಮ ಬಂಡವಾಳ ಬಯಲಿಗೆ ಬರುತ್ತಾ? ಸಿಐಡಿಗೆ ಯಾಕೆ ಕೊಟ್ಟಿದ್ದು? ಸಿಐಡಿ ಅಂದ್ರೆ ಕಾಂಗ್ರೆಸ್ ಇನ್ವೆಸ್ಟಿಗೇಶನ್ ಟೀಮ್. ನಾನು ವರ್ಗಾವಣೆಯಲ್ಲಿ ಹಣ ಮಾಡಿದ್ರೆ ರಾಜೀನಾಮೆ ಕೊಡ್ತೀನಿ ಅಂದ್ರಲ್ಲಾ ಸಿದ್ದರಾಮಯ್ಯನವರೇ ಈಗ ತಾವು ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ? ಅಂತ ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್ – ಯೂನಿಯನ್ ಬ್ಯಾಂಕ್‌ನಿಂದಲೇ ವಂಚನೆ, ಕೇಸ್ ದಾಖಲು
ಮೃತರ ಮನೆಯಲ್ಲಿದ್ದ ಪೆನ್‌ಡ್ರೈವ್ (Pendrive) ಅನ್ನು ಯಾಕೆ ತಗೊಂಡು ಹೋದ್ರಿ? ಅದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ಆವತ್ತು ಈಶ್ವರಪ್ಪ ಕೇಸ್ ನಲ್ಲಿ ಕರ್ನಾಟಕಕ್ಕೆ ಕೆಟ್ಟ ದಿನ ಅಂದಿದ್ದರು, ಸುರ್ಜೇವಾಲ ಅವರು ಕಾಂಗ್ರೆಸ್ (Congress) ಲೂಟಿಯನ್ನ ಸಹಿಸೋದಿಲ್ಲ ಅಂತ ಹೇಳಿದ್ದರು. ಈಶ್ವರಪ್ಪರನ್ನು ಬಂಧಿಸಿ ಅಂದ್ರು. ಈಗ ಏನ್ ಮಾಡ್ತೀರಾ? ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಚೆಕ್‍ಇನ್ ಮುಗಿಸಿರೋ ಪ್ರಜ್ವಲ್ ಗುರುವಾರ ಮಧ್ಯರಾತ್ರಿ ಬೆಂಗ್ಳೂರಿಗೆ ಆಗಮನ
ಇವಾಗ ಯಾರ ಮೇಲೆ ಕೇಸ್ ಹಾಕಿದ್ದೀಯಪ್ಪ? ಎಂದು ಸಿಎಂ ಸಿದ್ದರಾಮಯ್ಯಗೆ ಏಕ ವಚನದಲ್ಲೇ ಕಿಡಿಕಾರಿದ್ರು. ದುಡ್ಡು ವಾಪಸ್ಸು ತರುತ್ತೇನೆ ಅಂದ್ರಲ್ಲ ಹಾಗೇ ಆ ಅಧಿಕಾರಿ ಜೀವವನ್ನ ವಾಪಸ್ಸು ತರುತ್ತೀರಾ? ಅವರಿಗೆ ಹೋದ ಮರ್ಯಾದೆ ವಾಪಸ್ಸು ತರುತ್ತೀರಾ? ಅಧಿಕಾರಿಯ ಸಾವಿಗೆ ಬೆಲೆ ಇಲ್ಲವಾ? ಇದರ ಹಿಂದೆ ದೊಡ್ಡ ಜಾಲವೇ ಇದೆ. ಇದು ಆಂಧ್ರ, ತಮಿಳುನಾಡಿಗೆ ಹೋಗಿದೆ. ಅದಕ್ಕಾಗಿ ಇದನ್ನು ಸಿಬಿಐಗೆ ವಹಿಸಬೇಕು. ಈ ವಿಷಯವನ್ನು ಸುಮ್ಮನೆ ಬಿಡಬಾರದು ಎಂದು ನಮ್ಮ ಪಕ್ಷ ತೀರ್ಮಾನಿಸಿದೆ. ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯವ ತನಕ ಬಿಡುವುದಿಲ್ಲ ಅಂತ ಖಡಕ್ಕಾಗಿ ಹೇಳಿದ್ದಾರೆ. ಇದನ್ನೂ ಓದಿ: ʼಸಂತ್ರಸ್ತೆಗೆ 150 – 200 ಸೀರೆ ಕೊಡಿಸಿʼ – ಭವಾನಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಹೇಗಿತ್ತು? ವಾದ, ಪ್ರತಿವಾದ ಏನಿತ್ತು?