ತುಮಕೂರು: ವಿವಾಹಿತ ಪುರುಷನೊಂದಿಗೆ (Married Man) ಕಾಲೇಜು ವಿದ್ಯಾರ್ಥಿನಿ (College Student) ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು (Tumakuru) ಜಿಲ್ಲೆ ಕೊರಟಗೆರೆ (Koratagere) ತಾಲೂಕಿನಲ್ಲಿ ನಡೆದಿದೆ.
ಅನನ್ಯ (19), ರಂಗಶಾಮಣ್ಣ (45) ಮೃತ ಪ್ರೇಮಿಗಳು. ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆಯಲ್ಲಿ ಇಬ್ಬರೂ ಪ್ರೇಮಿಗಳ ಶವ ಪತ್ತೆಯಾಗಿದೆ. ಶನಿವಾರ ಮಾವತ್ತೂರು ಕೆರೆಯ ದಡದಲ್ಲಿ ಇಬ್ಬರ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಇಂದು ಬೆಳಗ್ಗೆ ಇಬ್ಬರ ಶವ ಪತ್ತೆಯಾಗಿದೆ. ಇದನ್ನೂ ಓದಿ: ಮಹಿಳಾ ಸಹೋದ್ಯೋಗಿಯೊಂದಿಗೆ ಸರಸ – ಹೋಟೆಲ್‌ನಲ್ಲಿ ಸಿಕ್ಕಿಬಿದ್ದ DSPಗೆ ಕಾನ್‌ಸ್ಟೆಬಲ್ ಆಗಿ ಹಿಂಬಡ್ತಿ!
ಕೊಳಾಲ ಹೋಬಳಿ ಲಕ್ಕಯ್ಯನಪಾಳ್ಯದ ಅನನ್ಯ ಹಾಗೂ ಬೈರಗೊಂಡ್ಲು ಗ್ರಾಮದ ರಂಗಶಾಮಣ್ಣ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಕಳೆದ 4 ದಿನಗಳ ಹಿಂದೆ ಇಬ್ಬರು ಪ್ರೇಮಿಗಳು ಮನೆಯಿಂದ ನಾಪತ್ತೆಯಾಗಿದ್ದರು. ತಮ್ಮ ಪ್ರೀತಿಗೆ ಕುಟುಂಬದವರ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಸೂರಜ್ ಪ್ರಕರಣ ರಾಜಕೀಯ ಪ್ರೇರಿತ ಎಂಬುದು ಗೊತ್ತಿಲ್ಲ, ಸಿಐಡಿ ತನಿಖೆ ಮಾಡುತ್ತೆ: ಪರಮೇಶ್ವರ್
ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸೂರಜ್ ರೇವಣ್ಣ ಪ್ರಕರಣ ಸಿಐಡಿ ತನಿಖೆಗೆ – ರಾಜ್ಯ ಸರ್ಕಾರ ಆದೇಶ