ನವದೆಹಲಿ: ತನ್ನ ಕ್ಯಾಮೆರಾಗಳಿಂದಲೇ ಹೆಸರುವಾಸಿಯಾಗಿರುವ ಒಪ್ಪೋ ಮೊಬೈಲ್ ಕಂಪೆನಿಯು ಭಾರತದಲ್ಲಿ ತನ್ನ ನೂತನ ಒಪ್ಪೋ ಫೈಂಡ್ ಎಕ್ಸ್ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನನ್ನು ಗುರುವಾರ ಬಿಡುಗಡೆಗೊಳಿಸಿದೆ.
ಒಪ್ಪೋ ಫೈಂಡ್ ಎಕ್ಸ್ ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 25 ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ 3ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16ಎಂಪಿ+20ಎಂಪಿ ಸ್ಲೈಡಿಂಗ್ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಕೆಂಪು ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ. ಈ ಫೋನ್ ಜುಲೈ 25 ರಿಂದ ಫ್ಲಿಪ್‍ಕಾರ್ಟ್ ಜಾಲತಾಣದಲ್ಲಿ ಮಾತ್ರ ಲಭ್ಯವಿರಲಿದೆ.
Advertisement
Advertisement
ಬೆಲೆ ಎಷ್ಟು?
ಒಪ್ಪೋ ಫೈಂಡ್ ಎಕ್ಸ್ ಫೋನ್ ಕೇವಲ ಒಂದೇ ಮಾದರಿಯಲ್ಲಿ ಲಭ್ಯವಿದ್ದು, 8ಜಿಬಿ RAM/256 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 59,990 ರೂಪಾಯಿ ಬೆಲೆ ನಿಗದಿ ಪಡಿಸಿದೆ.
Advertisement
ಒಪ್ಪೋ ಫೈಂಡ್ ಎಕ್ಸ್ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 156.7 x 74.2 x 9.6 ಮಿ.ಮೀ., 186 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) 6.4 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಹಾಗೂ ಪ್ಯಾನರೋಮಿಕ್ ಆರ್ಕ್ ಟಚ್ ಸ್ಕ್ರೀನ್(2340×1080 ಪಿಕ್ಸೆಲ್, 19.4:9 ಅನುಪಾತ 401ಪಿಪಿಐ, 93.8% ಸ್ಕ್ರೀನ್ ರೇಷಿಯೋ)
Advertisement
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 835 2.64 ಗೀಗಾಹಟ್ರ್ಸ್ ಆಕ್ಟಾ ಕೋರ್ ಪ್ರೊಸೆಸರ್, ಅಡ್ರಿನೋ 630 ಗ್ರಾಫಿಕ್ಸ್ ಪ್ರೊಸೆಸರ್ , 8ಜಿಬಿ RAM/256 ಜಿಬಿ ಆಂತರಿಕ ಮೆಮೊರಿ. ಹೆಚ್ಚುವರಿ ಮೆಮೊರಿ ವಿಸ್ತರಣೆಗೆ ಯಾವುದೇ ಕಾರ್ಡ್ ಸ್ಲಾಟ್ ನೀಡಿಲ್ಲ.
ಕ್ಯಾಮೆರಾ:
ಮುಂದುಗಡೆ 25ಎಂಪಿ 3ಡಿ ಟೆಕ್ನಾಲಜಿ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 16 ಎಂಪಿ+20ಎಂಪಿ ಸ್ಲೈಡಿಂಗ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್ ಇದೆ.
ಇತರೆ: ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5.0, ಫೇಸ್ ಡಿಟೆಕ್ಷನ್ ಅನ್‍ಲಾಕ್, 3,730 ಎಂಎಹೆಚ್ ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. 35 ನಿಮಿಷದಲ್ಲೇ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುವುದು ವಿಶೇಷ.