ತುಮಕೂರು: ಆಪರೇಷನ್ ಸಿಂಧೂರ ವಿಜಯೋತ್ಸವ (Operation Sindoor Vijayotsava) ಕಾರ್ಯಕ್ರಮ ನಗರದಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ವಿಜಯಶಂಕರ್ ಸೇರಿದಂತೆ ಹಲವು ಸ್ವಾಮಿಜಿಗಳು, ರಾಜಕೀಯ ಪ್ರತಿನಿಧಿಗಳು, ವಿಜ್ಞಾನಿಗಳು ಭಾಗಿಯಾಗಿ ಭಾರತದ ಸೈನಿಕರ ಶೌರ್ಯವನ್ನು ನೆನೆದರು.
ಈ ವೇಳೆ ಮಾತನಾಡಿದ ಮೇಘಾಲಯ ರಾಜ್ಯಪಾಲ ವಿಜಯಶಂಕರ್, ಇಡೀ ದೇಶಕ್ಕೆ ಮಾದರಿ ಎಂಬಂತೆ ತುಮಕೂರಿನಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ನಡೆದಿದೆ. ಭಾರತವನ್ನು ಯಾರಾದರೂ ಮುಟ್ಟಿದರೆ ಪಾಠ ಕಲಿಸುವ ಶಕ್ತಿ ಭಾರತಕ್ಕಿದೆ ಅನ್ನುವ ಸಂದೇಶವನ್ನು ಪ್ರಧಾನಿ ಮೋದಿ ಇಡೀ ವಿಶ್ವಕ್ಕೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದವರಿಗೆ ಸಿಹಿ ತಿಂಡಿ ಕೊಟ್ಟ ರಾಹುಲ್ ಗಾಂಧಿ
ಕೇಂದ್ರ ಸಚಿವ ವಿ ಸೋಮಣ್ಣ ಮಾತನಾಡಿ, ಸಿಂದೂ ನದಿಯ ನೀರನ್ನು ನಿಲ್ಲಿಸುವ ಮೂಲಕ ನೀರು ಮತ್ತು ರಕ್ತ ಒಟ್ಟಿಗೆ ಹರಿಯುವುದಿಲ್ಲ ಎಂಬ ಸಂದೇಶವನ್ನು ಪಾಕಿಸ್ತನಕ್ಕೆ ಕೊಟ್ಟಿದ್ದು ಭಾರತದ ಶಕ್ತಿಯ ಪ್ರತೀಕ ಎಂದರು. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಕೊಡುವಾಗ ಬೇರೆ ಅಂಗಗಳಿಗೆ ತೊಂದರೆಯಾಗದಂತೆ ಔಷಧಿ ನೀಡುತ್ತೇವೆಯೋ ಅದೇ ರೀತಿ ಪಾಕಿಸ್ತಾನದ ಕ್ಯಾನ್ಸರ್ ರೋಗ ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂಧೂರ ಉತ್ತರ ನೀಡಿದೆ. ಯಾವುದೇ ನಾಗರಿಕರಿಗೆ ಹಾನಿ ಮಾಡದೇ ಭಯೋತ್ಪಾದಕ ನೆಲೆ ಗಳನ್ನು ನೆಲಸಮ ಮಾಡಿದೆ ಎಂದರು. ಇದನ್ನೂ ಓದಿ: ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ
ಸಿದ್ದಗಂಗಾ ಶ್ರೀ, ಚುಂಚನಗಿರಿ ಶ್ರೀಗಳು ಕೂಡ ನಮ್ಮ ಸೈನಿಕರ ಶೌರ್ಯವನ್ನು ಕೊಂಡಾಡಿದರು. ಯುವಕರು ದೇಶಕ್ಕಾಗಿ ಎಂಥಹ ತ್ಯಾಗಕ್ಕೂ ಸಿದ್ದರಿರಬೇಕು ಎಂದು ಕರೆ ನೀಡಿದರು. ಸಾರ್ವಜನಿಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ – ಚೀನಾದಲ್ಲಿ ಪುಟಿನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಝಲೆನ್ಸ್ಕಿ ಕರೆ