ನವದೆಹಲಿ: ʻಆಪರೇಷನ್ ಸಿಂಧೂರʼ (Operation Sindoor) ಹೆಸರಲ್ಲಿ ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಸಸ್ಪೆನ್ಸ್ ದಾಳಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ.
ಈ ದಾಳಿಯು ಪಾಕ್ ಜನತೆಯಲ್ಲೂ ನಡುಕ ಹುಟ್ಟಿಸಿದ್ದು, ಗೂಗಲ್‌ನಲ್ಲಿ ವಾಯುದಾಳಿ (Air Strike), ಭಾರತೀಯ ಸೇನೆ, ಭಾರತ ಮತ್ತು ಆಪರೇಷನ್ ಸಿಂಧೂರದ ಬಗ್ಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ʻಸಿಂಧೂರʼ ಹೆಸರಿನ ಅರ್ಥವನ್ನು ತೆಲೆ ಕೆಡಿಸಿಕೊಂಡು ಹುಡುಕಾಡುತ್ತಿದ್ದಾರೆ ಎಂಬುದು ಗೂಗಲ್ ಟ್ರೆಂಡ್ ನಲ್ಲಿ ಗೊತ್ತಾಗಿದೆ. ಇದನ್ನೂ ಓದಿ: Operation Sindoor | ಶ್ರೀನಗರ ಏರ್‌ಪೋರ್ಟ್ ನಿಯಂತ್ರಣಕ್ಕೆ ಪಡೆದ IAF – ಜೆ&ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಭಾರತೀಯ ಸೇನೆ ಪ್ರತೀಕಾರದ ದಾಳಿ ಬಳಿಕ ಪಾಕಿಸ್ತಾನಿಯರು ʻಸಿಂಧೂರʼದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಗೂಗಲ್‌ನಲ್ಲಿ ʻಆಪರೇಷನ್ ಸಿಂಧೂರ್ʼ ಬಗ್ಗೆ ಹುಡುಕಾಡುತ್ತಿದ್ದಾರೆ. ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ವಾಟ್ ಈಸ್ ಆಪರೇಷನ್ ಸಿಂಧೂರ್ (India Attack Bahawalpur, India Attack on Pakistan Today, India Attack on Bahawalpur, India Attacked on Pakistan, India Strikes Pakistan) ಮುಂತಾದ ಪದಗಳನ್ನು ಸರ್ಚಿಂಗ್ ಮಾಡುತ್ತಿದ್ದಾರೆ. ಇದರೊಂದಿಗೆ ಪಾಕಿಸ್ತಾನ ಸೇನೆಯ ಮುಂದಿನ ಕಾರ್ಯಾಚರಣೆಯ ಬಗ್ಗೆಯೂ ಹುಡುಕಾಡುತ್ತಿರುವುದು ಗೂಗಲ್ ಟ್ರೆಂಡ್ಸ್‌ನಲ್ಲಿ ಕಂಡುಬಂದಿದೆ.
ಸಿಂಧೂರ ಎಂದರೇನು?
ಸಿಂಧೂರ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆ ಪಾರ್ವತಿ, ದುರ್ಗಾ ಶಕ್ತಿಯ ಸಂಕೇತವಾಗಿದೆ. ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯಕವಾಗಿ ತಿಳಿಸುತ್ತದೆ. ಇದನ್ನೂ ಓದಿ: Operation Sindoor | ಮೋಸ್ಟ್ ಡೇಂಜರಸ್ ಉಗ್ರರನ್ನ ತಯಾರು ಮಾಡ್ತಿದ್ದ ತಾಣಗಳು ಉಡೀಸ್
ಆದ್ರೆ ಭಾರತದಲ್ಲಿ ತಜ್ಞರು ಇದನ್ನು ಎರಡು ರೀತಿಯಾಗಿ ವಿವರಿಸುತ್ತಾರೆ. ಮೊದಲಿಗೆ ಪಹಲ್ಗಾಮ್‌ನಲ್ಲಿ 26 ಮಹಿಳೆಯರ ಸಿಂಧೂರ (ಕುಂಕುಮ ಭಾಗ್ಯ) ಅಳಿಸಿದ ಉಗ್ರರ ದಾಳಿಗೆ ಪ್ರತೀಕಾರ ಆಗಿದೆ. ಮತ್ತೊಂದು ಕಾಶ್ಮೀರ ಭಾರತದ ಮುಕುಟಮಣಿ, ಭಾರತದ ತಿಲಕವಿದ್ದಂತೆ ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಎಚ್ಚರಿಕೆಯ ದಾಳಿಯೂ ಇದಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ: ಪಾಕ್ ಉಪಪ್ರಧಾನಿ ಇಶಾಕ್ ದಾರ್
100 ಉಗ್ರರ ಹತ್ಯೆ
ಸದ್ಯ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಾರತೀಯ ಸೇನೆ ನಡೆಸಿರುವ ಪ್ರತೀಕಾರದ ದಾಳಿಯಲ್ಲಿ ಸುಮಾರು 100 ಉಗ್ರರು ಸಾವನ್ನಪ್ಪಿದ್ದಾರೆ. ಜೊತೆಗೆ ಮೋಸ್ಟ್ ವಾಂಟೆಡ್‌ಗಳನ್ನ ತಯಾರು ಮಾಡಿದ್ದ ಜೈಶ್ ಎ ಮೊಹಮ್ಮದ್, ಲಷ್ಕರ್ ಎ ತೈಬಾ (ಎಲ್‌ಇಟಿ) ಮತ್ತು ಇಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳನ್ನು ಧ್ವಂಸಗೊಳಿಸಿದೆ.