ನವದೆಹಲಿ: ಭಾರತೀಯ ಸೇನೆ (Indian Army) ನಡೆಸಿದ `ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಪ್ರಮುಖ ಭಯೋತ್ಪಾದಕ ನಾಯಕರು ಸೇರಿ 140 ಉಗ್ರರು ಹತ್ಯೆಯಾಗಿದ್ದಾರೆ.
ಏ.22 ರಂದು ಪಹಲ್ಗಾಮ್‌ನಲ್ಲಿ (Pahalgam) ನಡೆದ ಹಿಂದೂಗಳ ನರಮೇಧದ ಪ್ರತೀಕಾರವಾಗಿ ಮೇ 6 ಮತ್ತು 7ರ ರಾತ್ರಿ ಭಾರತೀಯ ಸೇನೆಯ `ಆಪರೇಷನ್ ಸಿಂಧೂರ’ ಆಪರೇಷನ್‌ನಲ್ಲಿ ಪಾಕಿಸ್ತಾನದ ಹಲವು ಪ್ರಮುಖ ಭಯೋತ್ಪಾಕರು ಸಾವನ್ನಪ್ಪಿದ್ದಾರೆ.ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ
ಮಾಹಿತಿ ಪ್ರಕಾರ, ಐಸಿ-814 ಅಪಹರಣಕಾರ ಯೂಸುಫ್ ಅಜರ್, ಲಷ್ಕರೆ ಮುರಿಡ್ಕೆ ಪ್ರಧಾನ ಕಚೇರಿಯ ಮುಖ್ಯಸ್ಥ ಅಬು ಜುಂದಾಲ್ @ ಮುದಾಸರ್, 2016ರ ನಗ್ರೋಟಾ ದಾಳಿಯ ಸಂಚುಕೋರನ ಮಗ ಹಾಗೂ ಜಿಹಾದಿ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಹಲವು ಪ್ರಮುಖ ಉಗ್ರರ ಸಾವಿನಿಂದಾಗಿ ಪಾಕಿಸ್ತಾನದ ಮಿಲಿಟರಿ-ಭಯೋತ್ಪಾದನೆಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.
ಕಾರ್ಯಾಚರಣೆ ವೇಳೆ ಮುರಿದಿಕೆಯಲ್ಲಿನ ಲಷ್ಕರ್ ಪ್ರಧಾನ ಕಚೇರಿಯಲ್ಲೇ ಇದ್ದ ಅತೀ ಹೆಚ್ಚು ಉಗ್ರರ ಹತ್ಯೆಯಾಗಿದ್ದು, ವಿಮಾನ ಹೈಜಾಕರ್ ಯೂಸುಫ್ ಅಜರ್, ಅಬು ಜುಂದಾಲ್ @ ಮುದಸ್ಸರ್ ಸೇರಿ 140 ಉಗ್ರರು ಬಲಿಯಾಗಿದ್ದಾರೆ.
ಜೈಷ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಕೆಲವರನ್ನು ಹೊಡೆದುರುಳಿಸಿದಲ್ಲದೇ ಮೌಲಾನಾ ಮಸೂದ್ ಅಜರ್‌ನ ಕಾನೂನು ಸಲಹೆಗಾರನಾಗಿದ್ದ ಹಫೀಜ್ ಮುಹಮ್ಮದ್ ಜಮೀಲ್, ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ ಮೊಹ್ದ್ ಯೂಸುಫ್ ಅಜರ್ ಅಲಿಯಾಸ್ ಉಸ್ತಾದ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿಗಳ ಸಂವಹನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹ್ದ್ ಹಸನ್ ಖಾನ್, ಈ ಮೂವರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಮೇ 6ರ ತಡರಾತ್ರಿ ಭಾರತೀಯ ಸೇನೆ `ಆಪರೇಷನ್ ಸಿಂಧೂರ’ ಹೆಸರಿನಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಪಾಕ್‌ಗೆ ತಕ್ಕ ಉತ್ತರ ನೀಡಿತ್ತು.ಇದನ್ನೂ ಓದಿ: ಆಪರೇಷನ್ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ