ಡಮ್ಮಿ ಜೆಟ್‌, 15 ಬ್ರಹ್ಮೋಸ್‌ ಕ್ಷಿಪಣಿ ದಾಳಿ, 11 ಏರ್‌ಬೇಸ್‌ ಧ್ವಂಸ – ಪಾಕ್‌ ಕರೆಯ ಹಿಂದಿದೆ ಭಾರತದ ಪರಾಕ್ರಮದ ಕಥೆ

Public TV
2 Min Read
BrahMos Missile

ನವದೆಹಲಿ: ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಭಾರತದ (India)  ವಿರುದ್ಧ  ದಾಳಿ ನಡೆಸಿದ ಪಾಕಿಸ್ತಾನದ (Pakistan) ಮೇಲೆ 15 ಬ್ರಹ್ಮೋಸ್‌ ಕ್ಷಿಪಣಿಯನ್ನು (Brahmos Missile) ಹಾರಿಸಿ 11 ವಾಯುನೆಲೆಗಳನ್ನು ಧ್ವಂಸ ಮಾಡಿದ ವಿಚಾರ ಈಗ ಬೆಳಕಿಗೆ ಬಂದಿದೆ.

ಮೇ 9 ರ ರಾತ್ರಿ ಭಾರತದ ನಗರಗಳನ್ನು ಗುರಿಯಾಗಿಸಿ ಪಾಕ್‌ನಿಂದ ದಾಳಿ ಆರಂಭವಾಗುತ್ತಿದ್ದಂತೆ ನಮ್ಮ ಪಡೆಗಳು ಅವುಗಳನ್ನು ನಿಷ್ಕ್ರಿಯಗಳಿಸಿತ್ತು. ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸುವ ಮೊದಲು ಭಾರತ ಪೈಲಟ್‌ ರಹಿತ ಡಮ್ಮಿ ಏರ್‌ಕ್ರಾಫ್ಟ್‌ (Dummy Aircraft) ಅನ್ನು ಹಾರಿಸಿತ್ತು. ಈ ಡಮ್ಮಿ ಏರ್‌ಕ್ರಾಫ್ಟ್‌ ಹೊಡೆದು ಹಾಕಲು ಪಾಕ್‌ ರೇಡಾರ್‌ ಮತ್ತು ಏರ್‌ ಡಿಫೆನ್ಸ್‌ ಸಿಸ್ಟಂ (Air Defence System) ಸಕ್ರಿಯಗೊಳಿಸಿತ್ತು. ರೇಡಾರ್‌ ಮತ್ತು ಏರ್‌ ಡಿಫೆನ್ಸ್‌ ಸಿಸ್ಟಂ ಎಲ್ಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಭಾರತ ಇಸ್ರೇಲ್‌ ನಿರ್ಮಿಸಿದ್ದ ಹರೋಪ್ಸ್ ಮತ್ತು ಕ್ಷಿಪಣಿಗಳ ಹಾರಿಸಿ ಅವುಗಳನ್ನು ನಿಷ್ಕ್ರಿಯಗೊಳಿಸಿತು ಎಂದು ಮೂಲಗಳನ್ನು ಆಧಾರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭಾರತದ ಈ ದಾಳಿಗೆ ಬೆಚ್ಚಿದ ಪಾಕಿಸ್ತಾನ ವಿವಿಧ ಸ್ಥಳಗಳಲ್ಲಿ ನಿಯೋಜಿಸಿದ್ದ HQ-9 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಲಾಂಚರ್‌ಗಳು ಮತ್ತು ರಾಡಾರ್‌ಗಳನ್ನು ಸಕ್ರೀಯಗೊಳಿಸಿತ್ತು. ಈ ಪೈಕಿ ಕೆಲವು ಏರ್‌ ಡಿಫೆನ್ಸ್‌ಗಳನ್ನು ಹೊಸ ಸ್ಥಳಗಳಲ್ಲಿ ನಿಯೋಜಿಸಿತ್ತು. ಇದನ್ನೂ ಓದಿ: ಮೊದಲು ಉಗ್ರರನ್ನು ಹಸ್ತಾಂತರಿಸಿ – ಪಾಕ್‌ನ ಸಿಂಧೂ ನದಿ ಒಪ್ಪಂದ ಮನವಿಗೆ ಜೈಶಂಕರ್‌ ಮಾತು

Pakistan Air Base

ಪಾಕ್‌ ರೇಡಾರ್‌ ಜಾಲವನ್ನು ನಿಷ್ಕ್ರಿಯಗೊಳಿಸಿದ ನಂತರ ಭಾರತೀಯ ವಾಯು ಸೇನೆ ಸ್ಕಾಲ್ಪ್, ಬ್ರಹ್ಮೋಸ್‌ ಕ್ಷಿಪಣಿಯನ್ನು ಬಳಸಿ ಭಯಂಕರ ದಾಳಿ ನಡೆಸಿತು. ಮುಖ್ಯವಾಗಿ ಭಾರತ ಪಶ್ಚಿಮ ವಾಯು ಕಮಾಂಡ್ ಮತ್ತು ನೈಋತ್ಯ ವಾಯು ಕಮಾಂಡ್‌ನಿಂದ ದಾಳಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್‌ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ವಾಯು-ಉಡಾವಣಾ ಕ್ರೂಸ್ ಕ್ಷಿಪಣಿಗಳು ಮತ್ತು ಮಾನವರಹಿತ ಯುದ್ಧ ವಿಮಾನಗಳನ್ನು ಬಳಸಿಕೊಂಡು ದಾಳಿ ನಡೆಸಿತು. ಈ ದಾಳಿಯನ್ನು ರಷ್ಯಾದ S-400, MRSAM ಮತ್ತು ಆಕಾಶ್ ವಾಯು ರಕ್ಷಣಾ ಕ್ಷಿಪಣಿ ಘಟಕಗಳು ಮತ್ತು ಇತರ ಹಳೆಯ ವ್ಯವಸ್ಥೆಗಳನ್ನು ಬಳಸಿ ವಿಫಲಗೊಳಿಸಲಾಯಿತು. ಇದನ್ನೂ ಓದಿ: ಈಗ U Turn – ಕದನ ವಿರಾಮ ಬಿಲ್ಡಪ್ ಕೊಟ್ಟು ಈಗ ತಣ್ಣಗಾದ ಟ್ರಂಪ್‌!

ದಾಳಿ ವೇಳೆ 15 ಬ್ರಹ್ಮೋಸ್‌ ಕ್ಷಿಪಣಿಯನ್ನು (Brahmos Missile) ಬಳಕೆ ಮಾಡಿದ್ದು ವಾಯುಸೇನೆಗೆ ಭಾರೀ ಬಲ ಬಂತು. ಒಂದು ದೇಶದ ವಿರುದ್ಧದ ಕಾದಾಟದಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನು ಬಳಕೆ ಮಾಡಿದ್ದು ಇದೇ ಮೊದಲು. ಬ್ರಹ್ಮೋಸ್‌ ರನ್‌ವೇ, ಯುದ್ಧ ವಿಮಾನಗಳು ತಂಗಿದ್ದ ಜಾಗ ಇತ್ಯಾದಿಗಳ ಮೇಲೆ ದಾಳಿ ಮಾಡಿದ್ದರಿಂದ ಪಾಕ್‌ನ ಜಂಘಾಬಲವೇ ನಡುಗಿ ಹೋಯಿತು. ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ಕಳೆದುಕೊಂಡ ಬೆನ್ನಲ್ಲೇ ರಾತ್ರಿಯೇ ಪಾಕ್‌ ತನ್ನ ವಿಮಾನಗಳನ್ನು ಹಿಂಭಾಗಕ್ಕೆ ಸ್ಥಳಾಂತರ ಮಾಡಿತು ಎಂದು ಮೂಲಗಳು ಹೇಳಿವೆ.

ಚೀನಿ HQ-9 ವಾಯು ರಕ್ಷಣಾ ವ್ಯವಸ್ಥೆ
ಚೀನಿ HQ-9 ವಾಯು ರಕ್ಷಣಾ ವ್ಯವಸ್ಥೆ

ಬ್ರಹ್ಮೋಸ್‌ ಪಾಕ್‌ನ ಪ್ರಮುಖ 12 ವಾಯು ನೆಲೆಗಳ ಪೈಕಿ 11ರ ಮೇಲೆ ದಾಳಿ ನಡೆಸಿ ಮೂಲ ಸೌಕರ್ಯಗಳನ್ನೇ ಧ್ವಂಸ ಮಾಡಿತ್ತು. ಬ್ರಹ್ಮೋಸ್ ದಾಳಿಯ ತೀವ್ರತೆಗೆ ಪಾಕಿಸ್ತಾನ ಮತ್ತೆ ಪ್ರತಿದಾಳಿ ನಡೆಸುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಕೊನೆಗೆ ಪಾಕ್‌ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ತುರ್ತಾಗಿ ಭಾರತದ ಡಿಜಿಎಂಒಗೆ ಕರೆ ಮಾಡಿ ಯುದ್ಧ ವಿರಾಮ ಘೋಷಿಸುವಂತೆ ಮನವಿ ಮಾಡಿದರು. ಒಂದು ವೇಳೆ ದಾಳಿ ಮುಂದುವರಿಯುತ್ತಿದ್ದರೆ ಪಾಕಿಸ್ತಾನದ ಯುಎವಿಗಳು ಮತ್ತು ಸಿಂಧ್ ಪ್ರಾಂತ್ಯದಲ್ಲಿ ನಿಲ್ಲಿಸಿದ್ದ ವಿಮಾನಗಳು ಭಾರೀ ಪ್ರಮಾಣದಲ್ಲಿ ಹಾಳಾಗುವ ಸಾಧ್ಯತೆ ಇತ್ತು.

Share This Article