ಸಂಸತ್‌ನಲ್ಲಿ ʻಸಿಂಧೂರʼ ಸಮರ – ವಿಪಕ್ಷಗಳಿಗೆ ಇಂದು ಮೋದಿ ಉತ್ತರ

Public TV
2 Min Read
Narendra Modi 2 1

ನವದೆಹಲಿ: ವಿಪಕ್ಷಗಳ ಪಟ್ಟಿನಂತೆ ಲೋಕಸಭೆಯಲ್ಲಿ (Lok Sabha) ಆಪರೇಷನ್ ಸಿಂಧೂರ, ಟ್ರಂಪ್ ಮಧ್ಯಸ್ಥಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸುಮಾರು 16 ಗಂಟೆಗಳ ಈ ಮೆಗಾ ಡಿಬೇಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮೊದಲು ಸ್ಪಷ್ಟನೆ ಕೊಟ್ಟಿದ್ದಾರೆ. ಇದಕ್ಕೆ ವಿಪಕ್ಷಗಳಿಂದ ಟೀಕೆಯೂ ಕೇಳಿಬಂದಿತು. ಸಂಸತ್‌ನಲ್ಲಿ ಆಡಳಿತ-ವಿಪಕ್ಷಗಳ ನಡುವೆ ಕೋಲಾಹಲವೇ ಎದ್ದಿತ್ತು. ಆಪರೇಷನ್‌ ಸಿಂಧೂರ ಚರ್ಚೆಯಲ್ಲಿ ಪ್ರಧಾನಿ ಮೋದಿ (Narendra Modi) ಭಾಗಿಯಾಗಲಿದ್ದು, ವಿಪಕ್ಷಗಳಿಗೆ ಉತ್ತರ ಕೊಡುವ ಸಾಧ್ಯತೆಯಿದೆ.

Rajnath Singh 2

ಆಪರೇಷನ್ ಸಿಂಧೂರ (Operation Sindoor) ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೈ ಶಂಕರ್, ಅಮಿತ್ ಶಾ ಸೇರಿದಂತೆ ಹಲವರು ಆಪರೇಷನ್ ಸಿಂಧೂರದ ಬಗ್ಗೆ ವಿವರಣೆ ನೀಡಿದ್ದಾರೆ. ಇಂದು ಪ್ರಧಾನಿ ಮೋದಿ ಈ ಬಗ್ಗೆ ವಿವರ ಕೊಡಲಿದ್ದಾರೆ ಎಂದು ಸಂಸತ್‌ ಮೂಲಗಳು ತಿಳಿಸಿವೆ. ಇಂದು ಮಧ್ಯಾಹ್ನ 12 ಗಂಟೆಯಿಂದ ಚರ್ಚೆ ಶುರುವಾಗಲಿದ್ದು, ಅಮಿತ್‌ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕೂಡ ಮಾತನಾಡಲಿದ್ದಾರೆ. ಆ ಬಳಿಕ ಸಂಜೆ 5 ಗಂಟೆಗೆ ಮೋದಿ ಉತ್ತರ ಕೊಡಲಿದ್ದಾರೆ. ಇದನ್ನೂ ಓದಿ: ನಾವೆಷ್ಟು ಪಾಕಿಸ್ತಾನಿ ವಿಮಾನಗಳನ್ನ ಹೊಡೆದಿದ್ದೇವೆ ಅಂತ ಯಾರೊಬ್ಬರೂ ಕೇಳಲಿಲ್ಲ – ಸಂಸತ್‌ನಲ್ಲಿ ರಾಜನಾಥ್‌ ಸಿಂಗ್‌ ಬೇಸರ

Gaurav Gogoi

ಸಿಂಧೂರ ಸಮರ – ಸದನ ಕೋಲಾಹಲ
ಪಹಲ್ಗಾಮ್‌ ಮತ್ತು ಆಪರೇಷನ್‌ ಸಿಂಧೂರ ಚರ್ಚೆಗೆ ನಾಂದಿ ಹಾಡಿದ ರಾಜನಾಥ್‌ ಸಿಂಗ್‌ ಸಂಪೂರ್ಣ ಕಾರ್ಯಾಚರಣೆಯ ವಿಚರಣೆ ನೀಡಿದ್ದರು. ಪಹಲ್ಗಾಮ್ ಉಗ್ರದಾಳಿಗೆ ಪ್ರತೀಕಾರವಾಗಿ ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡುವುದು ನಮ್ಮ ಉದ್ದೇಶವಾಗಿತ್ತು. ಪಾಕಿಸ್ಥಾನದ 9 ಉಗ್ರ ನೆಲೆಗಳ ಮೇಲೆ ನಿಖರ ದಾಳಿ ಮಾಡಿ, 100ಕ್ಕೂ ಹೆಚ್ಚು ಉಗ್ರರನ್ನು ಕೊಂದಿದ್ದೇವೆ. ಪಾಕಿಸ್ಥಾನದ ದಾಳಿ ವೇಳೆ ಭಾರತದ ಆತ್ಮರಕ್ಷಣೆಯ ಪ್ರತಿದಾಳಿಯಾಗಿತ್ತು. ನಮ್ಮ ದಾಳಿಗೆ ಹೆದರಿದ ಪಾಕಿಸ್ಥಾನ ದಾಳಿಯನ್ನು ನಿಲ್ಲಿಸುವಂತೆ ಗೋಗರೆಯಿತು. ಪರೀಕ್ಷೆಯಲ್ಲಿ ಫಲಿತಾಂಶ ಮುಖ್ಯ, ಪರೀಕ್ಷೆಯ ಸಮಯದಲ್ಲಿ ಪೆನ್ನು ಪೆನ್ಸಿಲ್ ಮುರಿದು ಹೋಯ್ತಾ ಎನ್ನುವುದು ಪ್ರಶ್ನೆಯಲ್ಲ. ಪರೀಕ್ಷೆಯಲ್ಲಿ ಎಷ್ಟು ಮಾರ್ಕ್ಸ್ ಬಂತು ಅನ್ನೋದು ಬಹಳ ಮುಖ್ಯ ಅಂದರು. ಇದನ್ನೂ ಓದಿ: ಉಗ್ರರು ಬಂದಿದ್ದು ಹೇಗೆ ಅಂತ ರಾಜನಾಥ್ ಸಿಂಗ್ ಮಾಹಿತಿಯೇ ನೀಡಲಿಲ್ಲ: ಕಾಂಗ್ರೆಸ್ ಮುಖಂಡ ಗೌರವ್ ಗೊಗೊಯ್

ಕಾಂಗ್ರೆಸ್‌ನ ಗೌರವ್ ಗೊಗೊಯ್ ಮಾತಾಡಿ, ಪಹಲ್ಗಾಮ್‌ಗೆ ಉಗ್ರರು ಹೇಗೆ ಬಂದರು ಎಂಬುದರ ಬಗ್ಗೆ ರಕ್ಷಣಾ ಸಚಿವರು ಏನನ್ನೂ ಹೇಳುತ್ತಿಲ್ಲ. ಇದಕ್ಕಿದ್ದಂತೆ ಕದನ ವಿರಾಮ ಜಾರಿ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿದೆ. ಪಾಕಿಸ್ತಾನ ಮಂಡಿಯೂರಲು ಸಿದ್ಧ ಆಗಿದ್ರೆ ಸೇನಾ ಕಾರ್ಯಾಚರಣೆ ಯಾಕೆ ನಿಲ್ಲಿಸಿದ್ದೀರಿ, ಯಾರಿಗೆ ಶರಣಾಗಿದ್ದೀರಿ..? ಟ್ರಂಪ್ 5-6 ವಿಮಾನಗಳು ನಷ್ಟವಾಗಿವೆ ಅಂದಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕಾಗಿದೆ ಅಂತ ಆಗ್ರಹಿಸಿದರು. ಇದನ್ನೂ ಓದಿ: ಅಸಾಮಾನ್ಯ ಶಕ್ತಿಯ ʻನಾಗʼತಾಣಗಳ ಬಗ್ಗೆ ನಿಮಗೆ ಗೊತ್ತೇ? ಇಲ್ಲಿ ನಂಬಿಕೆ ಸುಳ್ಳಾಗಿಲ್ಲ ಅಂತಾರೆ ಭಕ್ತರು!

ವಿದೇಶಾಂಗ ಸಚಿವ ಜೈಶಂಕರ್ ಮಾತಾಡಿ, ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ಪೈಕಿ ಪಾಕಿಸ್ಥಾನ ಬಿಟ್ಟು ಕೇವಲ 3 ದೇಶಗಳು ಮಾತ್ರ ಆಪರೇಷನ್ ಸಿಂಧೂರವನ್ನು ಆಕ್ಷೇಪಿಸಿವೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಟಿಆರ್‌ಎಫ್ ಹೆಸರು ತೆಗೆಸಲು ಯತ್ನಿಸಿತ್ತು. ಆದರೆ, ಟಿಆರ್‌ಎಫ್ ಸಂಘಟನೆಯನ್ನ ಜಾಗತಿಕ ಉಗ್ರ ಸಂಘಟನೆ ಅಂತ ಅಮೆರಿಕ ಘೋಷಿಸಿದೆ. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೂ ಪಾಕಿಸ್ತಾನದ ಜೊತೆ ಸಿಂಧೂ ನದಿ ಕುರಿತು ಯಾವುದೇ ಚರ್ಚೆ ಇಲ್ಲ. ಮಧ್ಯಸ್ಥಿಕೆ ಆಗಿಲ್ಲ ಅಂತ ಸ್ಪಷ್ಟ ಪಡಿಸಿದರು.

Share This Article