ಬೆಂಗಳೂರು: ಕಳೆದ ಒಂದು ವಾರದಿಂದ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಬಿಸಿ ಈಗ ಮಲ್ಲೇಶ್ವರಂ ಮಾರ್ಕೆಟ್‌ಗೂ (Malleshwaram Market) ತಟ್ಟಿದ್ದು, ಬೀದಿಬದಿ ವ್ಯಾಪಾರಿಗಳ (Street Vendors) ಗೋಳು ಹೇಳತೀರದಂತಿದೆ.
ಬೆಂಗಳೂರಿನಲ್ಲಿ (Bengaluru) ಕಳೆದ ಒಂದು ವಾರದಿಂದ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮಲ್ಲೇಶ್ವರಂ ಮಾರ್ಕೆಟ್‌ಗೂ ಕಾಲಿಟ್ಟಿದೆ. ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ಅಂಗಡಿಗಳನ್ನು ಎತ್ತಿಸಲಾಗಿದ್ದು, ವ್ಯಾಪಾರಿಗಳು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ – ಬಿಲ್ ಕಟ್ಟೋಕೆ ಹೋದ್ರೆ ಅಕೌಂಟ್‌ನಲ್ಲಿದ್ದ ಹಣ ಮಾಯ
Advertisement
Advertisement
ನಗರದ ಬೇರೆ ಬೇರೆ ಕಡೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳ ತೆರವು ಆರಂಭಿಸಿರುವ ಬಿಬಿಎಂಪಿ ಬುಧವಾರ ಸಂಜೆ ದಿಢೀರ್ ಅಂತಾ ಮಲ್ಲೇಶ್ವರಂ 8ನೇ ಕ್ರಾಸ್‌ನ ಮಾರ್ಕೆಟ್‌ನಲ್ಲೂ ಕಾರ್ಯಚರಣೆ ಆರಂಭಿಸಿತ್ತು. ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ಪೊಲೀಸರು ಮತ್ತು ಮಾರ್ಷಲ್‌ಗಳ ಸಹಾಯದಿಂದ ತೆರವು ಮಾಡಲಾಯಿತು. ಆರಂಭದಲ್ಲಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದರು. ಆದರೆ ಪೊಲೀಸರು ದೊಡ್ಡ ಮಟ್ಟದ ವಿರೋಧಕ್ಕೆ ಆಸ್ಪದ ನೀಡದೆ ಸಂಪೂರ್ಣ ವ್ಯಾಪಾರವನ್ನು ಸ್ಥಗಿತಗೊಳಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ವ್ಯಾಪಾರಿಗಳು ಕೂಡ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್
Advertisement
ಈ ಮಧ್ಯೆ ವ್ಯಾಪಾರಿಗಳ ತೆರವು ವಿಚಾರ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿ, ಜಿಎಸ್‌ಟಿ ವ್ಯಾಪ್ತಿಗೆ ಬರುವ ವಸ್ತುಗಳನ್ನು ಫುಟ್‌ಪಾತ್‌ನಲ್ಲಿ ಮಾರುತ್ತಿದ್ದಾರೆ. ತಾವು ಬೀದಿಬದಿ ವ್ಯಾಪಾರಿ ಅಂತಾ ಗುರುತಿನ ಚೀಟಿ ಇದ್ದರೆ ವ್ಯಾಪಾರ ಮಾಡಬಹುದು. ರಸ್ತೆಯಿಂದ 10 ಮೀಟರ್ ದೂರದಲ್ಲಿ ಪಾದಚಾರಿಗಳಿಗೆ ತೊಂದರೆ ಆಗದಂತೆ ಮಾಡಬಹುದು ಎಂದಿದ್ದಾರೆ. ಆದರೆ, ಈ ಮಧ್ಯೆ ಕಾರ್ಡ್ ಇರುವ ಭಾಗಗಳಲ್ಲೂ ತೆರವು ಕಾರ್ಯ ನಡೆಯುತ್ತಿದ್ದು, ಬಿಬಿಎಂಪಿ ಕಮಿಷನರ್ ಹುಸಿ ಭರವಸೆ ನೀಡುತ್ತಿದ್ದಾರಾ ಎಂಬ ಅನುಮಾನ ಕೂಡ ವ್ಯಕ್ತವಾಗ್ತಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆ – 5 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
Advertisement
ಮಲ್ಲೇಶ್ವರಂ, ಜಯನಗರ (Jayanagar), ಸೇರಿ ಹಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿಸುತ್ತಿರುವುದನ್ನು ಖಂಡಿಸಿ ಇಂದು ಬೀದಿಬದಿ ವ್ಯಾಪಾರಿಗಳ ಸಂಘ ಪ್ರತಿಭಟನೆ ನಡೆಸುತ್ತಿದೆ. ಬೆಳಗ್ಗೆ 11 ಘಂಟೆಗೆ ಜಯನಗರ 4 ಬ್ಲಾಕ್‌ನಲ್ಲಿ ಬಿಡಿಎ ಮಾರ್ಕೆಟ್ ಕಾಂಪ್ಲೆಕ್ಸ್ ಹತ್ತಿರ ಬಿಬಿಎಂಪಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಒಟ್ಟಾರೆ ಬಿಬಿಎಂಪಿ ನಿರ್ಧಾರ ಬೀದಿಬದಿಯಲ್ಲಿ ಜೀವನ ಮಾಡುತ್ತಿದ್ದ ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಿರುವುದಂತು ಸತ್ಯ. ಇದನ್ನೂ ಓದಿ: ಎಫ್‍ಡಿಎ ಪರೀಕ್ಷೆ ಅಕ್ರಮ ತನಿಖೆ ಚುರುಕು – ಕಿಂಗ್‍ಪಿನ್‍ನಿಂದ ಜಾಮೀನಿನ ಮೊರೆ