ಬೆಂಗಳೂರು: ಆಪರೇಷನ್ ಕಮಲದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಗುಡುಗಿ, ವ್ಯಂಗ್ಯವಾಡಿದ್ದಾರೆ.
ಟ್ವೀಟ್ ಮೂಲಕ ಪ್ರಧಾನಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ ಅವರು, ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕುಳಿತಿಲ್ಲ. ರಾಜಕೀಯದ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು ಎಂದಿದ್ದಾರೆ.
Advertisement
'ಚೌಕಿದಾರ್' ಪ್ರಧಾನಿ @narendramodi ಅವರೇ, ನಿಮ್ಮನ್ನು ದೇಶದ ಚೌಕಿದಾರ್ ಎಂದು ಹೇಳಿಕೊಳ್ತೀರಿ.
ಈಗ ನಮ್ಮ ರಾಜ್ಯದ ಶಾಸಕರನ್ನು ಹೊಟೇಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ…
ಛೆ…@INCKarnataka
— Siddaramaiah (@siddaramaiah) January 15, 2019
Advertisement
ಚೌಕಿದಾರ್ ಪ್ರಧಾನಿ ನರೇಂದ್ರ ಮೋದಿ ಅವರೇ ನಿಮ್ಮನ್ನು ದೇಶದ ಚೌಕಿದಾರ್ ಅಂತ ಕರೆದುಕೊಳ್ಳುತ್ತೀರಿ. ಈಗ ನಮ್ಮ ರಾಜ್ಯದ ಶಾಸಕರನ್ನು ಹೋಟೆಲ್ ಕೋಣೆಗಳಲ್ಲಿ ಕೂಡಿ ಹಾಕಿ ಕಾಯುತ್ತಿರುವ ಚೌಕಿದಾರ್ ಆಗಿಬಿಟ್ಟಿರಲ್ಲಾ. ಛೆ.. ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
Advertisement
ಇದಕ್ಕೂ ಮುನ್ನ ಆಪರೇಷನ್ ಕಮಲಕ್ಕೆ ಪ್ರಯತ್ನಿಸುತ್ತಿರುವ ಬಿಜೆಪಿ ನಡೆಯನ್ನು ಖಂಡಿಸಿ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದ ಸಿದ್ದರಾಮಯ್ಯ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ತನ್ನ ಶಾಸಕರನ್ನೇ ದಿಗ್ಬಂಧನದಲ್ಲಿಟ್ಟು ಕಾಯುತ್ತಾ ಕುಳಿತಿರುವ ಬಿಜೆಪಿ ಅಭದ್ರತೆಯಿಂದ ನರಳುತ್ತಿದೆ ಎಂದು ಕುಟುಕಿದ್ದರು.
Advertisement
ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ. ರಾಜಕೀಯದ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು.@INCKarnataka
— Siddaramaiah (@siddaramaiah) January 15, 2019
ಕರ್ನಾಟಕ ಕಾಂಗ್ರೆಸ್‍ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿ, ರೆಸಾರ್ಟ್ ಬಂಧನದಲ್ಲಿರುವ ಬಿಜೆಪಿಯ 104 ಶಾಸಕರಿಗೆ ಸಂಕ್ರಾಂತಿಯ ಶುಭಾಶಯಗಳು. ಗೋಮಾತೆ ಬಗ್ಗೆ ಅತಿ ಹೆಚ್ಚು ಮಾತನಾಡುವವರು ಇಂದು ಗೋವುಗಳನ್ನು ಕಿಚ್ಚು ಹಾಯಿಸದೆ, ಅವುಗಳ ಪೂಜೆ ಮಾಡದೇ ರೆಸಾರ್ಟ್ ನಲ್ಲಿ ಮೋಜು ಮಾಡುತ್ತಿದ್ದಾರೆ. ಕುಟುಂಬದವರೊಂದಿಗೆ ಸಂಕ್ರಾಂತಿ ಆಚರಣೆಯನ್ನೂ ಮಾಡಲಾಗದ ಹಕ್ಕುಗಳ ಹರಣ ಬಿಜೆಪಿಯಿಂದ ತಮ್ಮ ಶಾಸಕರ ಮೇಲೆಯೇ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv