– ಬಿಜೆಪಿ ಗೂಡಿನಿಂದ ಹೊರಬಂದ ಇಬ್ಬರು ಶಾಸಕರು
ಬೆಂಗಳೂರು: ಮಂಗಳವಾರ ಮಧ್ಯಾಹ್ನ ರಾಜ್ಯದಲ್ಲಿ ಆಪರೇಷನ್ ಕಮಲ ನಡೆದೇ ಹೋಗುತ್ತೆ ಎನ್ನುವಂತೆ ಪಕ್ಷೇತರ ಶಾಸಕರಿಬ್ಬರು ಸರ್ಕಾರಕ್ಕೆ ನೀಡಿದ್ದರು. ಅದೇ ರೀತಿಯಾಗಿ ನಾಯಕರು ಸಭೆಗಳ ಮೇಲೆ ಸಭೆ ನಡೆಸಿದ್ದರು. ಆದರೆ ಈಗ ಬಿಜೆಪಿ ಗೂಡಿನಲ್ಲಿದ್ದಾರೆ ಎನ್ನಲಾದ ಕಾಂಗ್ರೆಸ್ ಶಾಸಕರಾದ ಭೀಮಾನಾಯ್ಕ್ ಮತ್ತು ಕಂಪ್ಲಿ ಗಣೇಶ್ ಬಿಜೆಪಿ ಗೂಡಿನಿಂದ ಹೊರ ಬಂದಿದ್ದಾರೆ.
ಪಕ್ಷೇತರ ಶಾಸಕರಿಬ್ಬರ ಬೆಂಬಲ ವಾಪಸ್ ಪಡೆದಿದ್ದು ಆಪರೇಷನ್ ಕಮಲದ ಮೊದಲ ಹಂತ ಎಂದು ಹೇಳಲಾಗಿತ್ತು. ಮುಂಬೈನಲ್ಲಿ ಮಾತನಾಡಿದ್ದ ಪಕ್ಷೇತರ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಈಗ ಕಳೆದ ಮೂರ್ನಾಲ್ಕು ದಿನಗಳಿದ್ದ ಯಾರ ಸಂಪರ್ಕಕ್ಕೆ ಸಿಗದ ಭೀಮಾನಾಯ್ಕ್ ಮತ್ತು ಗಣೇಶ್ ಇಂದು ದಿಢೀರ್ ಆಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.
Advertisement
Advertisement
ಪಕ್ಷೇತರರು ರಾಜೀನಾಮೆ ನೀಡಿದ ಬಳಿಕ ಬುಧವಾರ ಕಾಂಗ್ರೆಸ್ಸಿನ 6 ಮಂದಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಮೂಲಗಳಿಂದ ಬಂದಿತ್ತು. ಆದರೆ ಈಗ ಬಿಜೆಪಿ ಗೂಡಿನಿಂದ ಇಬ್ಬರು ಹೊರ ಬಂದಿದ್ದಾರೆ.
Advertisement
ಮುಂಬೈನಲ್ಲಿ ಈಗ 3-4 ಶಾಸಕರು ಇದ್ದು, ಶಾಸಕ ಉಮೇಶ್ ಜಾಧವ್ ಕೂಡ ಉಲ್ಟಾ ಹೊಡೆಯುವ ಸಾಧ್ಯತೆಯಿದೆ. ಉಮೇಶ್ ಜಾಧವ್ ವಾಪಸ್ ಬಗ್ಗೆ ಸಹೋದರ ರಾಮಚಂದ್ರ ಜಾಧವ್ ಸುಳಿವು ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ ನಡೆ ಮಾತ್ರ ನಿಗೂಢವಾಗಿದೆ.
Advertisement
ಆಪರೇಷನ್ ಕಮಲಕ್ಕೆ ದೋಸ್ತಿಗಳ ರಿವರ್ಸ್ ಆಪರೇಷನ್ ಪರಿಣಾಮ ಇಬ್ಬರು ಬಿಜೆಪಿ ಸೇರುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿದೆ. ಅಸಮಾಧಾನಗೊಂಡ ಶಾಸಕರ ಎಲ್ಲ ಬೇಡಿಕೆಗಳನ್ನು ರಾಜ್ಯ ನಾಯಕರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ಶಾಸಕರು ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. ಕೊನೆಕ್ಷಣದಲ್ಲಿ ಹೈಕಮಾಂಡ್ ಯಾವುದೇ ಕಾರಣಕ್ಕೂ ಸರ್ಕಾರ ಬೀಳಲು ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಪ್ರತಿತಂತ್ರ ಹೂಡಿದ ಪರಿಣಾಮ ಬಿಜೆಪಿಯ ಆಪರೇಷನ್ ಕಮಲ ಫೇಲ್ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv