ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೋ ಕೇವಲ ಟ್ರೈಲರ್ ಅಷ್ಟೇ. ಆದ್ರೆ ಅದರ ಕಂಪ್ಲೀಟ್ ಆಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹೌದು. ಶರಣಗೌಡನ ಡೀಲ್ ವೇಳೆ ಬಿಎಸ್‍ವೈ ಜೊತೆ ಇದ್ದಿದ್ದು ಯಾರು..?, ಶರಣಗೌಡ ಸೆಳೆಯಲು ಯಡಿಯೂರಪ್ಪ ಬಿಟ್ಟ ಒಂದೊಂದು ಡೈಲಾಗ್ ಏನು..?, ಬಿಎಸ್‍ವೈ ಪರವಾಗಿ ಶಿವನಗೌಡ ನಾಯಕ್ ಹೇಳಿದ್ದೇನು..?, ಆಪರೇಷನ್ ಕಮಲದ ವಿಚಾರಕ್ಕೆ ಸಂಬಂಧಿಸಿದಂತೆ ಶರಣಗೌಡ ಹೇಳೋದೇನು ಹೀಗೆ ಒಟ್ಟು 82 ನಿಮಿಷಗಳ ಆಪರೇಷನ್ ಕಮಲದ ಆಡಿಯೋ ಲಭ್ಯವಾಗಿದೆ.
Advertisement
ಆಡಿಯೋದಲ್ಲೇನಿದೆ..?
ಯಡಿಯೂರಪ್ಪ: ರಕ್ಷಣೆ ಬೇಕು ರಾಜೀನಾಮೆ ಕೊಡೋಕೆ ಎಂದು ಪೊಲೀಸ್ ರಕ್ಷಣೆಯಲಿ ಬಂದು ಸ್ಪೀಕರ್ ಗೆ ರಾಜೀನಾಮೆ ಕೊಡು. ಸ್ಪೀಕರ್ ತಪ್ಪಿಸಿಕೊಂಡು ಓಡಾಡೋಕೆ ಆಗಲ್ಲ. ಅಧಿವೇಶನ ನಡೆಯುವ ಸಮಯದಲ್ಲಿ ಕೊಟ್ಟುಬಿಟ್ರೆ ಅವನು ಬಿದ್ದಿರ್ತಾನೆ ಅಲ್ಲಿ ತಗೊಳ್ಳೇ ಬೇಕು. ಬೇಡ ತಡವಾಗಬಹುದು. ಮ್ಯಾಕ್ಸಿಮಮ್ ಏನು ರೂಲ್ಸ್ ಇರೋದು ಅಂದ್ರೆ ಖುದ್ದು ಅವರೇ ಬಂದು ಕೊಡಬೇಕು ಅಂತ ಇದ್ರ ಒಂದೇ ಕಂಡಿಷನ್ ಬೇರೆ ಏನು ಇಲ್ಲ.
Advertisement
Advertisement
ಶಿವನಗೌಡ ನಾಯಕ್: ಹೌದು ಸರ್. 24 ಗಂಟೆಯಲ್ಲಿ ಒಪ್ಪಲೇಬೇಕು. ನಿನ್ನ ಅಪ್ಪನ ಒಪ್ಪಿಸಪ್ಪ ಮುಂದಿನದ್ದನ್ನು ಸಾಹೇಬ್ರಿರಿಗೆ ಬಿಡು ಏನಾದರಾಗ ಸಾಹೇಬರು ಒಳ್ಳೇಯದನ್ನೇ ಮಾಡುತ್ತಾರೆ. ನೀನು ರೆಡಿ ಆಗು ರೆಡಿ ಆಗು. ನಾನು ಉಳಿದದ್ದು ವಿಜಯಣ್ಣ ಜೊತೆ ಮಾತಾಡುತ್ತೇನೆ. ಆಯ್ತು ಸಾಹೇಬರ ಆಶಿರ್ವಾದ ತಗೋ. ಶರಣ್ ಗೌಡ ಇನ್ನೊಂದು ಏನು ಅಂದ್ರೆ ನೀವು ಸಮಾಜದವರು ಸಮಾಜದವರೊಬ್ಬರನ್ನು ಮುಖ್ಯಮಂತ್ರಿ ಮಾಡೋಕೆ ಹೆಮ್ಮೆ ಇರಬೇಕು. ಅವನ್ ಯಾರೀ ಕುಮಾರಸ್ವಾಮಿ ರಾಮನಗರ ಹಾಸನದವರು ಸಂಬಂಧ ಇಲ್ಲದಕ್ಕೆ ಸಾಯ್ತಿ.
Advertisement
ಯಡಿಯೂರಪ್ಪ: ಬಹುತೇಕ ಎಲ್ಲಾ ನಾನ್ ಲಿಂಗಾಯತ ಬರ್ತಿರಾ.. ಇಲಾ ಮಾಡೋಕೆ ಯಾವುದೇ ಅಡ್ಡಿ , ಆಂತಕ, ತೊಂದ್ರೇನೇ ಇಲ್ಲ. ನಾವು ಇದು ಆಗೊಲ್ಲ ಅಂದ್ರೆ ನಿನ್ನನ್ನು ಯಾಕೆ ಕರೀತೀವಿ. ನಿಂಗ್ಯಾಕೆ ತೊಂದ್ರೆ ಕೊಡುತ್ತೀವಿ. ನಿನ್ನ ಫಾದರ್ ಇಲ್ಲೇ ಬೆಂಗಳೂರಲ್ಲಿ ಇರಲಿ. ನೀನು ಕನ್ವಿನ್ಸ್ ಮಾಡಿ ನಿನ್ನ ಪಾಡಿಗೆ ನೀನು ಬಾಂಬೆಗೆ ಬಾ.. ಎಲ್ಲರೂ 15 ಜನ ಆಗ್ಬಿಟ್ಟು ಎಲ್ಲಾ ಹೊರಟಾಗ ನಿನ್ನ ಫಾದರ್ ಜೊತೆಗೆ ಬಂದು ರಾಜೀನಾಮೆ ಕೊಡುವುದು ಅಷ್ಟೇ ತಾನೇ.. ಬಾಂಬೆಗೂ ನಿಮ್ಮ ಫಾದರ್ ಬೆರಬೇಕು ಅಂತಿಲ್ಲ.
ಶಿವನಗೌಡ: ನೀನು ಬಂದು ಕಣ್ಣಲ್ಲಿ ನೋಡ್ಕೊಂಡು ಬಾ.. ಉಳಿದಿದ್ದೆಲ್ಲಾ ನಾನು ಅಣ್ಣನ ಜೊತೆ ಮಾತನಾಡುತ್ತೇನೆ. ಅದೆಲ್ಲಾ ಓಕೆ ಮಾಡ್ಕೊಂಡುಮುಂದುವರಿಸು. ನೀನು ಧೈರ್ಯ ಮಾಡ್ಬೇಕು. ನಾವೆಲ್ಲ ಇದ್ದೀವಿ. ಜೀವನದಲ್ಲಿ ಒಂದು ಸಾರಿ ಧೈರ್ಯ ಮಾಡಬೇಕು. ಸಾಹೇಬ್ರು ಅದಾರೆ ನಾವು ಇದ್ದೀವಿ. ಸಾಹೇಬ್ರು ಮಾತು ಕೊಟ್ರೆ ತಪ್ಪೋದಿಲ್ಲ. ಅವರು ಅಂತ ಮಾತಿನ ಮನುಷ್ಯ ಎಂದು ಮನುಷ್ಯ ರಾಜಕಾರಣದಲ್ಲಿ ಸಿಗೋದಿಲ್ಲ.
ಹೀಗೆ ಮಾತು ಮಂದುವರಿಯುತ್ತದೆ. ಒಟ್ಟಿನಲ್ಲಿ ಆಪರೇಷನ್ ಕಮದ ಸಂಪೂಣ್ ಆಡಿಯೋ ಔಟ್ ಆಗಿದ್ದು, ಇಂದು ಸದನದಲ್ಲಿ ಭಾರೀ ಗದ್ದಲವೇಳುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv