ಹುಬ್ಬಳ್ಳಿ: ಆಪರೇಷನ್ ಕಮಲ ಯಾವುದು ನಡೆಯುವುದಿಲ್ಲ, ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿದ್ದ ಸಚಿವ ಡಿಕೆ ಶಿವಕುಮಾರ್ ಅವರಿಗೆ ಯಡಿಯೂರಪ್ಪ ಡಿಚ್ಚಿ ಕೊಟ್ಟಿದ್ದಾರೆ.
ಬಿಎಸ್‍ವೈ ನೇತೃತ್ವದಲ್ಲಿ ಆಪರೇಷನ್ ಕಮಲ ಸಕ್ಸಸ್ ಆಗಿದ್ದು, ಕುಂದಗೋಳದ ಕೂಬಿಹಾಳ ತಾಲೂಕು ಪಂಚಾಯತ್ ಸದಸ್ಯ ಈಶ್ವರಪ್ಪ ಎಲಿವಾಳ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
Advertisement
ಬಿಎಸ್‍ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಸೇರ್ಪಡೆಯಾಗಿದ್ದಾರೆ. ಅಲ್ಲದೇ ದ್ಯಾವನೂರು ಗ್ರಾಮ ಪಂಚಾಯತ್ ಪ್ರಮುಖ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಶಿವಳ್ಳಿ ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ ಡಿಕೆಶಿ!
Advertisement
Advertisement
ಕೆಲವು ದಿನಗಳ ಹಿಂದೆಯೇ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗ ಪ್ರಚಾರದಲ್ಲಿ ಬಿಜೆಪಿ ನಾಯಕರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸುವಂತೆ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ ಸ್ಥಳೀಯ ಪ್ರಭಾವಿ ಮುಖಂಡ, ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಸವರಾಜ್ ಅರಬಗೊಂಡ ಕಾಂಗ್ರೆಸ್ ಸೇರಿದ್ದರು.
Advertisement
ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆ ಗೆದ್ದರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. 25 ಸಾವಿರ ಮತಗಳ ಅಂತರದಿಂದ ಎಸ್ ಐ ಚಿಕ್ಕನಗೌಡ್ರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರ ಮಗಿಸಿ ಚಿಂಚೋಳಿ ಕ್ಷೇತ್ರಕ್ಕೆ ಹೋಗಿ 16, 17 ರಂದು ಮತ್ತೇ ಬರುತ್ತೇನೆ. ಡಿ ಕೆ ಶಿವಕುಮಾರ್ ಅವರು ಎಷ್ಟೇ ಆಮಿಷ ಒಡ್ಡಿದರೂ ನಮ್ಮ ಪಕ್ಷದವರು ಯಾರು ಕಾಂಗ್ರೆಸ್ಸಿಗೆ ಹೋಗುವುದಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಶ್ನೆಗೆ ಇಲ್ಲ. ಅವರೇ ಈಗ ಹೊಡೆದಾಡಿಕೊಳ್ಳುತ್ತಿದ್ದಾರೆ. ಅವರು ಹೊಡೆದಾಡಿಕೊಂಡರೆ ನಾವು ಹೊಣೆ ಹೇಗೆ ಆಗುತ್ತೇವೆ ಎಂದು ಪ್ರಶ್ನಿಸಿದರು.