ಬೆಂಗಳೂರು: ಮಾಗಡಿಯಲ್ಲಿ ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ಪ್ಲ್ಯಾನ್ ನಡೆದಿದೆ. ಮಾಗಡಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಸಚಿವ ಅಶ್ವತ್ಥನಾರಾಯಣ್ ಟಾಸ್ಕ್ ತೆಗೆದುಕೊಂಡ ಬೆನ್ನಲ್ಲೇ ಆಪರೇಷನ್ ಕಮಲ ಕಾರ್ಯಾಚರಣೆ ಶುರು ಮಾಡಿದ್ದಾರೆ.
ಸದ್ಯ ಕಾಂಗ್ರೆಸ್‍ನಲ್ಲಿ ಇರುವ ಮಾಜಿ ಶಾಸಕ ಬಾಲಕೃಷ್ಣ ಕರೆತರಲು ಬಿಜೆಪಿ ತಂತ್ರ ಹೆಣೆದಿದೆ. ಈಗಾಗಲೇ ಮಾಜಿ ಸಚಿವ ಹೆಚ್.ಎಂ.ರೇವಣ್ಣ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಬಾಲಕೃಷ್ಣ ಪತ್ರ ಬರೆದಿದ್ದರು. ರೇವಣ್ಣ ಅವರಿಗೆ ಟಿಕೆಟ್ ಕೊಟ್ಟುಬಿಡಿ ಎಂದು ಅಸಮಾಧಾನ ತೋಡಿಕೊಂಡಿದ್ದರು. ಇದನ್ನೇ ದಾಳವಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮರಳಿ ಮನೆಗೆ ಬರುವಂತೆ ಬಾಲಕೃಷ್ಣ ಅವರಿಗೆ ಆಹ್ವಾನ ನೀಡಲು ತಯಾರಿ ನಡೆಸಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ
ಬಿಜೆಪಿಯಿಂದಲೇ ಗೆದ್ದು ಮೊದಲು ಶಾಸಕರಾಗಿದ್ದ ಬಾಲಕೃಷ್ಣರನ್ನ ಮತ್ತೆ ಬಿಜೆಪಿಗೆ ಕರೆತರಲು ಸಚಿವ ಅಶ್ವತ್ಥನಾರಾಯಣ್ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಮಾಜಿ ಶಾಸಕ ಬಾಲಕೃಷ್ಣ ನಡೆ ನಿಗೂಢವಾಗಿದ್ದು, ಕಾಂಗ್ರೆಸ್‍ನಲ್ಲೇ ಉಳಿದುಕೊಳ್ತಾರಾ? ಆಪರೇಷನ್ ಕಮಲಕ್ಕೆ ಒಳಗಾಗ್ತಾರಾ ಎಂಬ ಪ್ರಶ್ನೆಗೆ ಮುಂದೆ ಉತ್ತರ ಸಿಗಲಿದೆ.