Bengaluru CityDistrictsKarnatakaLatestLeading NewsMain Post

ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

Advertisements

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇದ್ದು, ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಕುರ್ಚಿ ಕದನ ಜೋರಾಗಿದೆ.

ಹೈಕಮಾಂಡ್ ಸಹ ಪಕ್ಷ ಮುಖ್ಯ ವ್ಯಕ್ತಿ ಅಲ್ಲ ಎಂಬ ಸಂದೇಶವನ್ನು ಕಳುಹಿಸಿದ್ದರು. ಅದರಂತೆ ದೆಹಲಿಯಿಂದ ಒಗ್ಗಟ್ಟಿನಲ್ಲಿ ಇರುತ್ತೇವೆ ಅಂತ ಬಂದ ನಾಯಕರು ಟ್ರ್ಯಾಕ್ ತಪ್ಪುತ್ತಿದ್ದಾರೆ.

ಇಷ್ಟು ದಿನ ಬೆಂಬಲಿಗರು ನಾಯಕರ ಪರ ಘೋಷಣೆ ಕೂಗುತ್ತಿದ್ದರು. ಈಗ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರೂ ಬಹಿರಂಗವಾಗೇ ಸಿಎಂ ಸ್ಥಾನದ ಕನವರಿಕೆಯಲ್ಲೇ ದಿನ ಕಳೆಯುತ್ತಿದ್ದಾರೆ. ಜೊತೆಗೆ ದಿನ ಕಳೆದಂತೆ ಇಬ್ಬರೂ ತಾಳ್ಮೆ ಕಳೆದುಕೊಳ್ಳತೊಡಗಿದ್ದಾರೆ ಎಂಬ ಅನುಮಾನ ಮೂಡತೊಡಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳಾ ಪ್ರೊಫೆಸರ್ ಆತ್ಮಹತ್ಯೆ

ಜುಲೈ 16ರಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾನು ಮತ್ತೆ ಸಿಎಂ ಆದರೆ ನೇಕಾರರ ಸಾಲಮನ್ನಾ ಮಾಡುತ್ತೇನೆ. ಬಜೆಟ್‍ನಲ್ಲಿ ಜಾರಿ ಮಾಡುತ್ತೇನೆ ಪ್ರಣಾಳಿಕೆಯಲ್ಲಿ ತರುತ್ತೇನೆ ಎಂದಿದ್ದರು. ಇತ್ತ ಬೆಂಗಳೂರಿನ ಒಕ್ಕಲಿಗರ ಸಂಘದ ಕಾರ್ಯಕ್ರಮದಲ್ಲಿ ಜುಲೈ 17ರಂದು ಮಾತನಾಡಿರುವ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ನಂತರ ಸಮುದಾಯಕ್ಕೆ ಒಂದು ಅವಕಾಶ ಒದಗಿ ಬರುತ್ತಿದೆ ಸಹಕಾರ ನೀಡಿ ಎಂದಿದ್ದಾರೆ. ಇದು ಕಾಂಗ್ರೆಸ್‍ನ ಬಹಿರಂಗ ಕದನದ ಮುನ್ಸೂಚನೆ ಎಂಬಂತೆ ಕಾಣತೊಡಗಿದೆ.

ಈ ಮಧ್ಯೆ, ಹಿರಿಯ ನಾಯಕರು ಇಬ್ಬರು ಪಕ್ಷಕ್ಕೆ ಮುಜುಗರ ಮಾಡುತ್ತಿದ್ದಾರೆ. ಅವರಿಗೆ ಎಚ್ಚರಿಕೆ ನೀಡಿ ಅಂತ ಹೈಕಮಾಂಡ್‍ಗೆ ದೂರು ನೀಡಲು ಮುಂದಾಗಿದ್ದಾರೆ.

Live Tv

Leave a Reply

Your email address will not be published.

Back to top button