– ಅತ್ತ ಬಿಜೆಪಿ ಅಲರ್ಟ್, ನಾಳೆ ಬಿಎಸ್‍ವೈ ಸಭೆ
ಬೆಂಗಳೂರು: ಕಾಂಗ್ರೆಸ್‍ನವರ (Congress) ಜೊತೆ ಬಿಜೆಪಿಯ ಕೆಲ ಶಾಸಕರು ಲಿಂಕ್‍ನಲ್ಲಿದ್ದಾರೆ ಎಂಬ ಗುಮಾನಿಯೊಂದು ಎದ್ದಿದೆ. ಈ ಮೂಲಕ ಅಧಿಕಾರ ಕಳೆದುಕೊಂಡ ಬಿಜೆಪಿಗೆ (BJP) ಈಗ ಆಪರೇಷನ್ ಹಸ್ತದ ಟೆನ್ಶನ್ ಶುರುವಾಗಿದೆ.
ಲೋಕಸಭೆ (Loksabha Election), ಬಿಬಿಎಂಪಿ ಚುನಾವಣೆ (BBMP Election) ಮುನ್ನ ಆಪರೇಷನ್ ಹಸ್ತ ನಡೆಯುತ್ತಿದೆ. ಕೈ ಪಾಳಯದ ನಾಯಕರು ಬಿಜೆಪಿಯ ಕೆಲ ಶಾಸಕರ ಸಂಪರ್ಕದಲ್ಲಿದ್ದಾರೆ. ಪ್ರಭಾವಿ ಸಮುದಾಯಗಳ ಶಾಸಕರು, ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ. ಕೆಲ ಕ್ಷೇತ್ರಗಳ ಶಾಸಕರ ಬೆಂಬಲಿಗರಿಗೆ ಆಪರೇಷನ್ ಹಸ್ತ ಯಶಸ್ವಿಯಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್‍ನ ಸೀಕ್ರೆಟ್ ಆಪರೇಷನ್ ಪ್ಲಾನ್‍ಗೆ ಬಿಜೆಪಿ (BJP) ಅಲರ್ಟ್ ಆಗಿದ್ದು, ಕಾಂಗ್ರೆಸ್ ಸಂಪರ್ಕ ಸಾಧಿಸಲೆತ್ನಿಸುತ್ತಿರುವ ನಾಯಕರ ಮೇಲೆ ಬಿಜೆಪಿ ಹದ್ದಿನ ಕಣ್ಣಿಟ್ಟಿದೆ. ಕೆಲ ವಲಸಿಗರ ಬಗ್ಗೆ ಹೈಕಮಾಂಡ್ ಗಮನಕ್ಕೆ ತರಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆ ಹೊತ್ತಿಗೆ ಮತ್ತೊಂದು ತಾಲೀಮು ನಡೀತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಗುತ್ತಿಗೆದಾರರು ಯೂಟರ್ನ್ ಹೊಡೆಯಲು ಸಂಧಾನ: ಹೆಚ್‍ಡಿಕೆ ಹೊಸ ಆರೋಪ
ಬಿಎಸ್‍ವೈ ಸಭೆ: ಗುರುವಾರ ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ಶಾಸಕರ ಮಹತ್ವದ ಸಭೆ ನಡೆಯಲಿದೆ. 15% ಕಮೀಷನ್, ಕಾಮಗಾರಿ ಸ್ಥಗಿತ, ಅಭಿವೃದ್ಧಿ ಕಡೆಗಣನೆ ವಿರುದ್ಧ ಹೊರಾಟದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಇದೇ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಲಾಗುತ್ತದೆ. ಒಂದಿಡೀ ದಿನ ಬೆಂಗಳೂರು ಶಾಸಕರಿಂದ ಸರ್ಕಾರದ ವಿರುದ್ಧ ಧರಣಿ ನಡೆಯಲಿದೆ. ರಾಜ್ಯಪಾಲರಿಗೂ ಕಮಿಷನ್, ಕಾಮಗಾರಿ ಸ್ಥಗಿತ ವಿರುದ್ಧ ದೂರಿಗೆ ಚಿಂತನೆಯನ್ನು ಈ ಸಭೆಯಲ್ಲಿ ನಡೆಸುವ ಸಾಧ್ಯತೆಗಳಿವೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]