ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ (Israel Hamas War) ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ (Operation Ajay) ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಭಾರತೀಯರನ್ನು (Indians) ಹೊತ್ತ ಮೊದಲ ವಿಮಾನ ಇಸ್ರೇಲ್‌ನಿಂದ ದಹೆಲಿಗೆ ಬಂದಿಳಿದಿದೆ.
ಒಟ್ಟು 230 ಮಂದಿ ಭಾರತೀಯರು ತವರಿಗೆ ಮರಳಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸ್ವಾಗತಿಸಿದ್ದಾರೆ. 230 ಮಂದಿಯಲ್ಲಿ ಐವರು ಕನ್ನಡಿಗರು ಸಹ ಇದ್ದು, ಅವರನ್ನ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ (TB Jayachandra) ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇದೇ ವೇಳೆ ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನ ರೇಪ್ ಮಾಡ್ತಿದ್ದಾರೆ, ಮಕ್ಕಳನ್ನ ಕೊಲ್ತಿದ್ದಾರೆ- ಹಮಾಸ್ ಉಗ್ರರ ಕರಾಳ ಮುಖ ಬಿಚ್ಚಿಟ್ಟ ಭಾರತದ ಇಸ್ರೇಲ್ ಮಹಿಳೆ
Advertisement
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಚಂದ್ರ ಅವರು, ಇಸ್ರೆಲ್‌ನಿಂದ ಬಂದ ಕನ್ನಡಿಗರ ಜೊತೆ ಮಾತನಾಡಿದ್ದೇನೆ. ದೆಹಲಿಗೆ ಬಂದಿರುವ ಅವರ ಯೋಗಕ್ಷೇಮವನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳಲಿದೆ. ಪ್ರತಿಯತೊಬ್ಬರನ್ನು ಅವರ ಊರುಗಳಿಗೆ ಕ್ಷೇಮವಾಗಿ ತಲುಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಲಿದೆ. ರಷ್ಯಾ-ಉಕ್ರೇನ್ ಯುದ್ಧದ ಸಂಧರ್ಭದಲ್ಲಿ ಮಾಡಿದಂತೆ ಈ ಬಾರಿಯೂ ವ್ಯವಸ್ಥೆ ಮಾಡಲಾಗುವುದು. ಉಳಿದುಕೊಳ್ಳಲು ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: 10ನೇ ತರಗತಿ ವಿದ್ಯಾರ್ಥಿಯನ್ನ ಸೆಕ್ಸ್‌ಗೆ ಪೀಡಿಸುತ್ತಿದ್ದ ಟೀಚರ್; ಮತಾಂತರಕ್ಕೂ ಒತ್ತಾಯ – ಕೇಸ್ ದಾಖಲು
Advertisement
Advertisement
ಕೇಂದ್ರ ಸರ್ಕಾರದ ಜೊತೆಗೆ ನಮ್ಮ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಹಂತ ಹಂತವಾಗಿ ಕನ್ನಡಿಗರು ವಾಪಸ್ ಬರಲಿದ್ದಾರೆ. ರಾಜ್ಯ ಸರ್ಕಾರ ಜೊತೆಗಿದೆ ಎನ್ನುವ ಸಂದೇಶ ನೀಡಲು ನಾನೇ ಅವರ ಸ್ವಾಗತಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಇಸ್ರೇಲ್‍ನಿಂದ ಭಾರತೀಯರನ್ನು ಕರೆತರಲು ಅಪರೇಷನ್ ಅಜಯ್ ಆರಂಭಿಸಿದ ಕೇಂದ್ರ ಸರ್ಕಾರ
Web Stories