ಲಕ್ನೋ: ಹಿಂದೂ ದೇವತೆಗಳ ವಿಗ್ರಹಗಳ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಾಜ್ ಮಹಲ್‌ನಲ್ಲಿ ಮುಚ್ಚಿರುವ 22 ಬಾಗಿಲುಗಳನ್ನು ತೆರೆದು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಮನವಿ ಸಲ್ಲಿಸಲಾಗಿದೆ.
ಹಿಂದೂ ದೇವತೆಗಳ ವಿಗ್ರಹಗಳನ್ನು ಮುಚ್ಚಿದ ಬಾಗಿಲುಗಳ ಹಿಂದೆ ಇರಿಸಿ ಬೀಗ ಹಾಕಲಾಗಿದೆ. ಈ ಸಂಬಂಧ ತನಿಖೆಯಾಗಿ ವರದಿ ಮಾಡುವುದು ಅಗತ್ಯ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಜೂ.30ರವರೆಗೆ ತಿರುಮಲದಲ್ಲಿ ಕೆಲವು ಸಾಪ್ತಾಹಿಕ ಸೇವೆಗಳು ತಾತ್ಕಾಲಿಕ ಸ್ಥಗಿತ
Advertisement
Advertisement
ಈ ಸ್ಮಾರಕವು ಹಳೆಯ ಶಿವ ದೇವಾಲಯವಾಗಿದೆ ಎಂದು ಕೆಲ ಇತಿಹಾಸಕಾರರು ಮತ್ತು ಹಿಂದೂಪರ ಸಂಘಟನೆಯವರು ಹೇಳುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Advertisement
ಸಂತರು ಹಾಗೂ ಅನೇಕ ಇತಿಹಾಸಕಾರರು ಇದು (ತಾಜ್‌ಮಹಲ್) ಶಿವ ದೇವಾಲಯ ಎಂದು ಹೇಳುತ್ತಿದ್ದಾರೆ. ಆದರೆ ಕೆಲ ಇತಿಹಾಸಕಾರರು ಇದನ್ನು ಮೊಘಲ್ ಚಕ್ರವರ್ತಿ ಷಾಜಹಾನ್ ನಿರ್ಮಿಸಿದ ಎಂದು ನಂಬುತ್ತಾರೆ. ʼತೇಜೋ ಮಹಾಲಯʼ ನಂತರದ ದಿನಗಳಲ್ಲಿ ತಾಜ್‌ಮಹಲ್ ಆಗಿದೆ ಎಂದು ಹೇಳಲಾಗುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಹಿಮಾಚಲ ಅಸೆಂಬ್ಲಿ ಗೇಟ್‌ನಲ್ಲಿ ಖಲಿಸ್ತಾನ್ ಧ್ವಜ – ಸಿಎಂ ಜೈರಾಮ್ ಠಾಕೂರ್ ಕಿಡಿ
Advertisement
ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮತ್ತು ಕೆಳಗಿನ ಭಾಗಗಳಲ್ಲಿ (22 ಕೊಠಡಿಗಳು) ಶಾಶ್ವತವಾಗಿ ಬೀಗ ಹಾಕಲಾಗಿದೆ. ಆ ಕೊಠಡಿಗಳಲ್ಲಿ ಹಿಂದೂ ವಿಗ್ರಹಗಳಿವೆ. ಶಿವನ ವಿಗ್ರಹಗಳೂ ಇವೆ ಎಂದು ಕೋಟ್ಯಂತರ ಹಿಂದೂ ಆರಾಧಕರು ಭಾವಿಸಿದ್ದಾರೆ ಎನ್ನಲಾಗಿದೆ. ಆಗ್ರಾದ ಉತ್ತರದಲ್ಲಿ ಭದ್ರತಾ ಕಾರಣಗಳಿಂದ ಕೊಠಡಿಗಳ ಬಾಗಿಲುಗಳನ್ನು ಮುಚ್ಚಲಾಗಿದೆ ಎಂದು ಹೇಳಲಾಗಿದೆ.