ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯಕ್ಕೆ ತೊಂದರೆಯಾಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ಸಾಮರಸ್ಯ ಇತ್ತು. ಈಗ ವಿದ್ಯಾರ್ಥಿ ಸಂಘಟನೆಗಳು ಮತೀಯವಾದಿಗಳಾಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಂಬಿಕೆಯ ಹೆಸರಲ್ಲಿ ಹಿಂಸಾಚಾರಗಳು ನಡೆಯುತ್ತಿವೆ. ಮೋದಿಯವರು ನಂಬಿಕೆ ನೆಲೆಯಲ್ಲಿನ ಹಿಂಸೆ ಸಹಿಸುವುದಿಲ್ಲ ಎಂದಿದ್ದಾರೆ. ಈ ಪ್ರಶ್ನೆಯನ್ನು ಅವರ ಶಿಷ್ಯರಲ್ಲೇ ಕೇಳಬೇಕಾಗಿದೆ ಎಂದರು.
Advertisement
ಈಗ ಜಿಲ್ಲೆಯಲ್ಲಿ ನಡೆಯುತ್ತಿರುವುದು ನಿಯೋಜಿತ ಕೃತ್ಯಗಳು. ಶಾಂತಿ ನೆಲೆಸುವುದಕ್ಕಾಗಿ ಸಾಮರಸ್ಯ ನಡಿಗೆ ಮಾಡುತ್ತೇವೆ. ಸೆಪ್ಟೆಂಬರ್ 12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಹತ್ಯೆಗೆ ಕಾರಣವಾಗಿದ್ದ ಬಿಜೆಪಿ, ಪಿಎಫ್‍ಐ ಹೊರತುಪಡಿಸಿ ಎಲ್ಲರೂ ಬನ್ನಿ. ಶಾಂತಿಪ್ರಿಯರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕರೆ ಕೊಡುತ್ತಿದ್ದೇನೆ. ಧಾರ್ಮಿಕ ನಾಯಕರು, ಶಾಂತಿಪ್ರಿಯರು ಕೈಜೋಡಿಸಬೇಕು ಅಂತ ರೈ ನುಡಿದ್ರು.
Advertisement
ಇದನ್ನೂ ಓದಿ: ಅಶ್ರಫ್ ಸಾಯ್ಸಿದ್ದು ಬಿಜೆಪಿ, ಶರತ್ ಕೊಂದಿದ್ದು ಪಿಎಫ್‍ಐ: ಮತ್ತೆ ಬೆಂಕಿ ಹಚ್ಚಿದ ರೈ
Advertisement
Advertisement