ನವದೆಹಲಿ: 2,000 ರೂ. ಮುಖ ಬೆಲೆಯ ನೋಟನ್ನು ಬ್ಯಾನ್ ಮಾಡಿ ವರ್ಷಗಳೇ ಉರುಳಿದರೂ ಬರೋಬ್ಬರಿ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿ ಇನ್ನೂ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿದೆ.
2,000 ರೂ. ಮುಖಬೆಲೆಯ ನೋಟುಗಳ ಪೈಕಿ 97.87% ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಿಂದಿರುಗಿವೆ. ಆದರೆ ಇಂದಿಗೂ 7,581 ಕೋಟಿ ಮೌಲ್ಯದ (2.13% ರಷ್ಟು) ನೋಟುಗಳು ಜನರ ಬಳಿಯೇ ಇದೆ ಎಂದು ಆರ್‌ಬಿಐ ಇಂದು ಮಾಹಿತಿ ಬಿಡುಗಡೆ ಮಾಡಿದೆ.
Advertisement
Advertisement
2023 ರ ಮೇ 19 ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್‌ಬಿಐ ಹಿಂಪಡೆದಿತ್ತು. 3.56 ಲಕ್ಷ ಕೋಟಿಯಷ್ಟು ನೋಟುಗಳು ಆ ಸಂದರ್ಭದಲ್ಲಿ ಚಲಾವಣೆಯಲ್ಲಿ ಇದ್ದವು. ಆ ಬಳಿಕ ಬ್ಯಾಂಕ್‌ಗಳಲ್ಲಿ ನೋಟು ಹಿಂಪಡೆಯಲು ಆರ್‌ಬಿಐ ಅವಕಾಶವನ್ನು ನೀಡಿತ್ತು. ಇದನ್ನೂ ಓದಿ: ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಪಾತ್ರ ಇದೆಯಾ? – ಸಚಿವ ಬೈರತಿ ಸುರೇಶ್ ಹೇಳಿದ್ದೇನು?